ಕನ್ನಡ ಸುದ್ದಿ  /  Nation And-world  /  International News China Shanghai Record Hottest Temperature In May After 100 Years Hottest Summer Kannada News Rst

Shanghai: ಚೀನಾದ ಶಾಂಘೈನಲ್ಲಿ ನೂರು ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು; ಬಿಸಿಲಿನ ತಾಪಕ್ಕೆ ಕಂಗೆಟ್ಟ ಜನತೆ

Hottest Temperature in Shanghai: ಚೀನಾದ ಶಾಂಘೈನಲ್ಲಿ ಕಳೆದ 100 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇಂದು ಶಾಂಘೈನಲ್ಲಿ 36 ಡಿಗ್ರಿಗೂ ಹೆಚ್ಚು ಸೆಲ್ಸಿಯಸ್‌ ದಾಖಲಾಗಿದೆ.

ಬಿಸಿ ವಾತಾವರಣದ ನಡುವೆ ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳಲು ರಕ್ಷಣಾತ್ಮಕ ಉಡುಪುಗಳನ್ನು ಧರಿಸಿರುವ ಮಹಿಳೆಯೊಬ್ಬರು ಸೈಕಲ್‌ನಲ್ಲಿ ಪ್ರಯಾಣಿಸಿದ ದೃಶ್ಯ ಇಂದು (ಮೇ 29) ಶಾಂಘೈನಲ್ಲಿ ಕಂಡು ಬಂದಿತು
ಬಿಸಿ ವಾತಾವರಣದ ನಡುವೆ ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳಲು ರಕ್ಷಣಾತ್ಮಕ ಉಡುಪುಗಳನ್ನು ಧರಿಸಿರುವ ಮಹಿಳೆಯೊಬ್ಬರು ಸೈಕಲ್‌ನಲ್ಲಿ ಪ್ರಯಾಣಿಸಿದ ದೃಶ್ಯ ಇಂದು (ಮೇ 29) ಶಾಂಘೈನಲ್ಲಿ ಕಂಡು ಬಂದಿತು

ಶಾಂಘೈ: ಚೀನಾ ದೇಶದ ಪ್ರಮುಖ ನಗರ ಶಾಂಘೈನಲ್ಲಿ ನೂರು ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಇಂದು 36 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂಘೈ ನಿವಾಸಿಗಳು ಬಿಸಿಲಿನ ತಾಪಕ್ಕೆ ದಂಗಾಗಿದ್ದಾರೆ. ಕೆಲವು ಹವಾಮಾನ ನಿರ್ಧರಿಸುವ ಆಪ್‌ಗಳು 40 ಡಿಗ್ರಿ ಹೆಚ್ಚಿನ ತಾಪಮಾನವನ್ನು ತೋರಿಸಿವೆ ಎಂದು ಹೇಳಲಾಗುತ್ತಿದೆ.

ವಿಜ್ಞಾನಿಗಳು ಹೇಳುವಂತೆ ಜಾಗತಿಕ ತಾಪಮಾನವು ಪ್ರತಿಕೂಲ ಹವಾಮಾನವನ್ನು ಉಲ್ಬಣಗೊಳಿಸುತ್ತಿದೆ, ಅನೇಕ ದೇಶಗಳು ಮಾರಣಾಂತಿಕ ಶಾಖದ ಅಲೆಗಳನ್ನು ಎದುರಿಸುತ್ತಿವೆ. ಇತ್ತೀಚಿನ ವಾರಗಳಲ್ಲಿ ಆಗ್ನೇಯ ಮತ್ತು ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ತಾಪಮಾನವು ದಾಖಲೆಯನ್ನು ಮೀರುತ್ತಿವೆ.

ಇಂದು ಮಧ್ಯಾಹ್ನ ಶುಯಿಜಿ ಮೆಟ್ರೊ ನಿಲ್ದಾಣದಲ್ಲಿ 36.1 ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಮಧ್ಯಾಹ್ನದ ಬಳಿಕ ಶಾಂಘೈನ ಕೇಂದ್ರ ಮೆಟ್ರೊ ನಿಲ್ದಾಣದಲ್ಲಿ ತಾಪಮಾನವು 36.7 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿಂದೆ ಕೂಡ 35.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. 1876, 1903, 1915 ಮತ್ತು 2018ರಲ್ಲಿ ಒಟ್ಟು ನಾಲ್ಕು ಬಾರಿ ದಾಖಲಾಗಿತ್ತು.

ಹಸಿರಮನೆ ಅನಿಲಗಳ ಹೊರಸೂಸುವಿಕೆ ಮತ್ತು ಎಲ್‌ನಿನೊ ಪರಿಣಾಮದಿಂದಾಗಿ ಮುಂದಿನ 5 ವರ್ಷಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ ಎಂದು ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.