International News: ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ; ಮಾದಕ ದ್ರವ್ಯ ಸೇವನೆಗೆ ಒತ್ತಾಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  International News: ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ; ಮಾದಕ ದ್ರವ್ಯ ಸೇವನೆಗೆ ಒತ್ತಾಯ

International News: ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ; ಮಾದಕ ದ್ರವ್ಯ ಸೇವನೆಗೆ ಒತ್ತಾಯ

ಪಾಕಿಸ್ತಾನದ ಬಹವಲ್‌ಪುರದ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಗುಂಪೊಂದು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮಾದಕ ದ್ರವ್ಯಗಳನ್ನು ಸೇವಿಸುವಂತೆ ಒತ್ತಾಯಿಸಿ, ಶೋಷಣೆ ಮಾಡಿದ್ದಾರೆ. ಅಲ್ಲದೆ ವಿಡಿಯೊ ಚಿತ್ರೀಕರಣ ಮಾಡಿ, ಬೆದರಿಸಿದ್ದಾರೆ ಎಂದು ಪಾಕಿಸ್ತಾನ ಪೊಲೀಸ್‌ ವರದಿ ತಿಳಿಸಿದೆ.

ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ; ಮಾದಕ ದ್ರವ್ಯ ಸೇವನೆಗೆ ಒತ್ತಾಯ
ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ; ಮಾದಕ ದ್ರವ್ಯ ಸೇವನೆಗೆ ಒತ್ತಾಯ

ಇಸ್ಲಾಮಾಬಾದ್‌: ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ನಡೆಸಿದಂತಹ ಆಘಾತಕಾರಿ ಘಟನೆ ವರದಿಯಾಗಿದೆ. ಈ ಕುರಿತು ಪೊಲೀಸರ ವಿಶೇಷ ತನಿಖಾ ವರದಿ ಬಹಿರಂಗವಾಗಿದ್ದು, ವಿದ್ಯಾರ್ಥಿನಿಯರು ಮಾತ್ರವಲ್ಲದೆ ಶಿಕ್ಷಕಿಯರ ಮೇಲೂ ದೌರ್ಜನ್ಯ ನಡೆಸಿರುವುದು ಸಾಬೀತಾಗಿದೆ. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿನಿಯರಿಗೆ ಡ್ರಗ್ಸ್‌ ಸೇವಿಸುವಂತೆ ಒತ್ತಾಯಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಸಿಬ್ಬಂದಿಯ ಮೊಬೈಲ್‌ ಫೋನ್‌ಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ಪತ್ತೆ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ವಿಶ್ವವಿದ್ಯಾಲಯದ ಖಜಾಂಚಿ ಹಾಗೂ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಖಜಾಂಚಿಯಿಂದ ಮೊಬೈಲ್‌, ಮೆಥ್‌ ಹಾಗೂ ಕಾಮೋತ್ತೇಜಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಆತನ ಮೊಬೈಲ್‌ನಿಂದ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ.

ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳ ಅಕ್ಷೇಪಾರ್ಹ ವಿಡಿಯೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಮಾತ್ರವಲ್ಲದೆ. ಸಾಕಷ್ಟು ವಾಟ್ಸ್‌ಆಪ್‌ ಸಂದೇಶಗಳು ಸಿಕ್ಕಿವೆ ಎನ್ನಲಾಗುತ್ತಿದೆ.

ಡ್ರಗ್ಸ್‌, ಅಶ್ಲೀಲ ವಿಡಿಯೊಗಳನ್ನು ವಶಪಡಿಸಿಕೊಂಡ ಪೊಲೀಸರು

ಬಹವಲ್‌ಪುರದ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಈ ಘಟನೆ ನಿಜ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಸಿಬ್ಬಂದಿಯ ಮೊಬೈಲ್‌ ಪೋನ್‌ನಲ್ಲಿ ವಾಟ್ಸ್‌ಆಪ್‌ ಚಾಟ್‌ಗಳು ಮತ್ತು ಹಲವು ವಿಡಿಯೊಗಳು ಸಿಕ್ಕಿದ್ದು ಘಟನೆಗೆ ಹಲವು ಪುರಾವೆಗಳನ್ನು ಒದಗಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ʼಲೈಂಗಿಕ ಶೋಷಣೆಯ ಆರೋಪದ ಮೇಲೆ ಬಂಧಿಸಲಾಗಿರುವ ಇಬ್ಬರು ಸಿಬ್ಬಂದಿ ಹಾಗೂ ಖಜಾಂಜಿಯಗಳ ಹೇಳಿಕೆಯ ಪ್ರಕಾರ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದು ಮಾತ್ರವಲ್ಲ, ಮಾದಕ ವಸ್ತುಗಳನ್ನು ಸೇವಿಸುವಂತೆ ಒತ್ತಾಯಿಸಲಾಗಿತ್ತು. ಅಲ್ಲದೇ ವಿಡಿಯೊ ಚಿತ್ರೀಕರಣ ಮಾಡುವ ಮೂಲಕ ಬ್ಲ್ಯಾಕ್‌ಮೇಲ್‌ ಮಾಡಿ ಹೆದರಿಸಲಾಗಿತ್ತುʼ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ʼನಾನು ಹಾಗೂ ಇತರ ಕೆಲವು ಶಿಕ್ಷಕರು ಮಾದಕ ವಸ್ತುಗಳನ್ನು ಖರೀದಿಸಿದ್ದು, ಅದನ್ನು ವಿದ್ಯಾರ್ಥಿನಿಯರಿಗೆ ನೀಡಿ ಸೆಕ್ಸ್‌ ಮತ್ತು ಡಾನ್ಸ್‌ ಪಾರ್ಟಿಗಳನ್ನು ಆಯೋಜಿಸಿದ್ದಾಗಿ ಹೇಳಿಕೆ ನೀಡಿರುವ ಬಂದಿತ ಖಂಜಾಜಿ, ತಪ್ಪೊಪ್ಪಿಕೊಂಡಿದ್ದಾನೆʼ ಎಂದು ಈ ವರದಿಯಲ್ಲಿ ಉಲ್ಲೇಖವಾಗಿದೆ.

ಶಿಕ್ಷಕರ ಗುಂಪು ವಿದ್ಯಾರ್ಥಿಯರನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದು ಮಾತ್ರವಲ್ಲ, ಅವರಿಗೆ ಬೆದರಿಕೆ ಹಾಕಿದೆ, ಜೊತೆಗೆ ಬಲವಂತವಾಗಿ ಮಾದಕವಸ್ತುಗಳನ್ನು ಸೇವಿಸುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂಬ ಅಂಶವೂ ಈ ವರದಿಯಲ್ಲಿದೆ.

ಖಜಾಂಜಿಯ ಬಂಧನದ ವೇಳೆ ಆತನ ಬಳಿ 10 ಗ್ರಾಂ ಚರಸ್‌ ಪತ್ತೆಯಾಗಿತ್ತು, ಅಲ್ಲದೆ ಆತನ ಮೊಬೈಲ್‌ನಲ್ಲಿ ಹಲವು ವಿಡಿಯೊಗಳು ರೆಕಾರ್ಡ್‌ ಆಗಿದ್ದವು.

ಹಲವು ವರ್ಷಗಳಿಂದ ನಡೆಯುತ್ತಿದೆ ದೌರ್ಜನ್ಯ

ಈ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳಿಂದ ಲೈಂಗಿಕ ಶೋಷಣೆ ನಡೆಯುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಬಾಲಕಿಯರನ್ನು ಗುರಿಯಾಗಿಸಲಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ.

ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ ಬಳಿಕ, ಉಪಕುಲಪತಿ ಪ್ರೊ. ಡಾ. ಅಥರ್‌ ಮೆಹಬೂಬ್‌ ಇಲ್ಲಿನ ಐಜಿಪಿ ಡಾ. ಉಸ್ಮಾನ್‌ ಅನ್ವರ್‌ ಅವರಿಗೆ ಪತ್ರ ಬರೆದಿದ್ದಾರೆ, ಅಲ್ಲದೆ ಉನ್ನತ ಮಟ್ಟದ ತನಿಖೆಗೆ ತಂಡ ರಚಿಸುವಂತೆ ಮನವಿ ಮಾಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.