ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Israel Iran War: ಯುದ್ದಭೀತಿಯ ಇಸ್ರೇಲ್, ಇರಾನ್ ಗೆ ಸದ್ಯಕ್ಕೆ ಪ್ರವಾಸ ಬೇಡ, ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ

Israel Iran War: ಯುದ್ದಭೀತಿಯ ಇಸ್ರೇಲ್, ಇರಾನ್ ಗೆ ಸದ್ಯಕ್ಕೆ ಪ್ರವಾಸ ಬೇಡ, ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ

ಇರಾನ್‌( Iran) ದೇಶವು ಇಸ್ರೇಲ್‌( Israel) ಮೇಲೆ ದಾಳಿ ನಡೆಸುತ್ತಿರುವ ಕಾರಣಕ್ಕೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ಕಾರಣದಿಂದ ಈ ದೇಶಗಳಿಗೆ ಭಾರತೀಯರು ಪ್ರವಾಸ ಕೈಗೊಳ್ಳುವುದು ಬೇಡ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ( MEA) ತಿಳಿಸಿದೆ.

ಭಾರತೀಯ ವಿದೇಶಾಂಗ ಸಚಿವಾಲಯ
ಭಾರತೀಯ ವಿದೇಶಾಂಗ ಸಚಿವಾಲಯ

ದೆಹಲಿ: ಇರಾನ್‌ ಹಾಗೂ ಇಸ್ರೇಲ್‌ ನಡುವೆ ಮತ್ತೆ ಯುದ್ದದ ವಾತಾವರಣ ಕಂಡು ಬಂದಿರುವ ನಡುವೆ ಆ ದೇಶಗಳಿಗೆ ಸದ್ಯಕ್ಕೆ ಪ್ರವಾಸ ಬೇಡ ಎಂದು ಭಾರತೀಯರಿಗೆ ಸೂಚನೆ ನೀಡಲಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇರಾನ್‌ ಈಗಾಗಲೇ ಪ್ರತಿಕಾರದ ಕ್ರಮವಾಗಿ ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದೆ. ಕ್ಷಿಪಣಿಗಳನ್ನು ಬಳಸಿ ಇಸ್ರೇಲ್‌ ಮೇಲೆ ಇರಾನ್‌ ಮೇಲೆ ದಾಳಿ ಮಾಡುತ್ತಿದೆ. ಇದು ಇನ್ನೂ ಕೆಲವು ದಿನಗಳು ಇರುವ ಕಾರಣದಿಂದ ಈ ದೇಶಗಳಿಗೆ ಪ್ರವಾಸ ಇಲ್ಲವೇ ಪ್ರಯಾಣ ಮಾಡುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಲಾಗಿದೆ. ಅಲ್ಲದೇ ಇಸ್ರೇಲ್‌ ದಾಳಿ ವೇಳೆ ಭಾರತೀಯರು ಸಿಲುಕಿದ್ದರೆ ಅವರನ್ನು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮ ವಹಿಸಲಾಗುತ್ತದೆ ಎಂದು ಸಹಾಯವಾಣಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ. ಇಸ್ರೇಲ್‌ನಲ್ಲಿರುವ ಭಾರತದ ದೂತವಾಸ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ದೂತವಾಸ ಕಚೇರಿ ಪ್ರಯತ್ನಿಸಲಿದೆ. ಭಾರತೀಯರು ಶಾಂತರಾಗಿ ಇರಿ. ಈಗಾಗಲೇ ಎರಡೂ ದೇಶಗಳ ನಡುವಿನ ಸಂಘರ್ಷದ ಪರಿಸ್ಥಿತಿಯನ್ನು ಭಾರತದ ವಿದೇಶಾಂಗ ಸಚಿವಾಲಯವು ಸೂಕ್ಷ್ಮವಾಗಿಯೇ ಗಮನಿಸುತ್ತಿದೆ ಎಂದು ತಿಳಿಸಲಾಗಿದೆ.

ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ಭಾರತೀಯ ರಕ್ಷಣೆಗೆ ಬಿಡುಗಡೆ ಮಾಡಲಾಗಿದೆ. ಅದನ್ನು ಪಾಲಿಸಿರಿ. ಇಸ್ರೇಲ್‌ನ ಅಧಿಕಾರಿಗಳೊಂದಿಗೆ ನಮ್ಮ ವಿದೇಶಾಂಗ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸದ್ಯಕ್ಕೆ ಆತಂಕಪಡುವ ಸನ್ನಿವೇಶವಿಲ್ಲ. ಆದರೆ ಸಹಾಯವಾಣಿ ಸಹಿತ ಎಲ್ಲಾ ಸಹಕಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷಗಳು ಹೆಚ್ಚುತ್ತಿರುವುದಕ್ಕೆ ಭಾರತವೂ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ದೇಶಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಗಮನ ನೀಡಬೇಕು. ಭದ್ರತೆಗೆ ಅಡ್ಡಿಯಾಗುವ ವಿಚಾರದಲ್ಲಿ ಗಮನ ನೀಡಬೇಕು. ಉದ್ವಿಗ್ವತೆ ತಗ್ಗಿಸಲು ಕ್ರಮ ವಹಿಬೇಕು. ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು. ಉಭಯ ದೇಶಗಳ ಸಾಮಾನ್ಯರ ಹಿತದ ಕಡೆ ಗಮನ ಕೊಡಬೇಕು ಎಂದು ಭಾರತ ಸಲಹೆ ನೀಡಿದೆ.

IPL_Entry_Point

ವಿಭಾಗ