UAE plane crash: ಯುಎಇ ವಿಮಾನ ಅಪಘಾತ, ಭಾರತೀಯ ಮೂಲದ ಯುವ ವೈದ್ಯ ಸಾವು, ಕುಟುಂಬದವರ ಕಣ್ಣೆದುರೇ ದುರಂತ
ಯುನೈಟೆಡ್ ಅರಬ್ ಎಮಿರೆಟ್ಸ್‌ನ ರಾಸೆಲ್ ಖೈಮಾದಲ್ಲಿ ಇತ್ತೀಚೆಗೆ ಲಘು ವಿಮಾನ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಭಾರತೀಯ ಮೂಲದ ಡಾ. ಸುಲೈಮಾನ್ (26) ಮತ್ತು ಲಘು ವಿಮಾನದ ಪೈಲೆಟ್ ಮೃತಪಟ್ಟಿದ್ದಾರೆ.
ಯುನೈಟೆಡ್ ಅರಬ್ ಎಮಿರೆಟ್ಸ್‌ನ ರಾಸೆಲ್ ಖೈಮಾದಲ್ಲಿ ಇತ್ತೀಚೆಗೆ ಲಘು ವಿಮಾನ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಭಾರತೀಯ ಮೂಲದ ಡಾ. ಸುಲೈಮಾನ್ (26) ಮತ್ತು ಲಘು ವಿಮಾನದ ಪೈಲೆಟ್ ಮೃತಪಟ್ಟಿದ್ದಾರೆ. ಎಂಬವರು ಏವಿಯೇಷನ್ ಕ್ಲಬ್‌ನಲ್ಲಿ ತಾಣಗಳ ವೀಕ್ಷಣೆಗಾಗಿ ಲಘು ವಿಮಾನ ಬಾಡಿಗೆಗೆ ಪಡೆದು ಪೈಲೆಟ್ ಜತೆ ಪ್ರಯಾಣಿಸುತ್ತಿದ್ದರು. ಕೆಲವು ನಿಮಿಷಗಳ ಸೈಟ್ ಸೀಯಿಂಗ್ ಹಾರಾಟ ಅದಾಗಿತ್ತು. ಇವರ ಪ್ರಯಣದ ನಂತರ ಇವರ ಸಹೋದರ ಲಘು ವಿಮಾನದಲ್ಲಿ ಹಾರಾಟಕ್ಕೆ ಸರದಿಯಲ್ಲಿದ್ದರು. ನೋಡುನೋಡುತ್ತಿದ್ದಂತೆ ಇವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಅಪಘಾತಕ್ಕೀಡಾಗಿದೆ.
ಡಿಸೆಂಬರ್ 26ರಂದು ರಾಸ್ ಅಲ್ ಖೈಮಾ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ವಿಮಾನ ಟೇಕಾಫ್ ಆದ ಕೆಲವೇ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸುಲೈಮಾನ್ ತಂದೆ ಮಜಿದ್ ಮುಕರ್ರಂ ತಿಳಿಸಿದ್ದಾರೆ. ಈ ಅಪಘಾತದಲ್ಲಿ 26 ವರ್ಷದ ಪಾಕಿಸ್ತಾನಿ ಮಹಿಳಾ ಪೈಲೆಟ್ ಕೂಡ ಮೃತಪಟ್ಟಿದ್ದಾರೆ. ಈ ವಿಮಾನವು ಜಜಿರಾ ಏವಿಯೇಷನ್ ಕ್ಲಬ್‌ಗೆ ಸೇರಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಡಾ ಸುಲೈಮಾನ್ ಅವರು ತಮ್ಮ ಕುಟುಂಬದೊಂದಿಗೆ-ತಂದೆ, ತಾಯಿ ಮತ್ತು ಕಿರಿಯ ಸಹೋದರರೊಂದಿಗೆ ಸೈಟ್ ಸೀಯಿಗ್‌ಗಾಗಿ ಲಘು ವಿಮಾನ ಬಾಡಿಗೆಗೆ ಪಡೆದಿದ್ದರು. ಅವನ ಕಿರಿಯ ಸಹೋದರ ಮುಂದಿನ ವಿಮಾನವನ್ನು ಹತ್ತಲು ಸಿದ್ಧನಾಗಿದ್ದನು. "ಮೊದಲಿಗೆ ಗ್ಲೈಡರ್ ರೇಡಿಯೋ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ನಮಗೆ ತಿಳಿಸಲಾಯಿತು. ನಂತರ ಅದು ತುರ್ತು ಲ್ಯಾಂಡಿಂಗ್ ಮಾಡಿದೆ ಮತ್ತು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನಮಗೆ ತಿಳಿಸಲಾಯಿತು. ನಾವು ಆಸ್ಪತ್ರೆಗೆ ತಲುಪಿದಾಗ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಲಾಯಿತು. ನಾವು ನೋಡುವ ಮೊದಲೇ ಸುಲೈಮಾನ್ ನಿಧನರಾದರು" ಎಂದು ಮಜೀದ್ ಮಾಹಿತಿ ನೀಡಿದ್ದಾರೆ.
ಹೊಸ ವರ್ಷ ಆಚರಿಸಲು ಕುಟುಂಬವು ಕಾಯುತ್ತಿತ್ತು. ಆದರೆ, ಅದಕ್ಕಿಂತ ಮೊದಲೇ ಈ ದುರಂತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. "ನಮ್ಮ ಕುಟುಂಬಕ್ಕೆ ಆತ ಬೆಳಕಾಗಿದ್ದ. ಆತನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೇವು. ಈಗ ನಮ್ಮ ಭವಿಷ್ಯ ಅನಿಶ್ಚಿತವಾಗಿದೆ" ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಸುಲೈಮಾನ್ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಡರ್ಹಾಮ್ ಮತ್ತು ಡಾರ್ಲಿಂಗ್ಟನ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನಲ್ಲಿ ಕ್ಲಿನಿಕಲ್ ಫೆಲೋ ಆಗಿ ಕೆಲಸ ಮಾಡಿದರು. ಅವರು ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್‌ನೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.