Iran Explosions: ಇರಾನ್ ಹುತಾತ್ಮ ಸೇನಾಧಿಕಾರಿ ಸ್ಮರಣೆ ಕಾರ್ಯಕ್ರಮದಲ್ಲಿ ಸ್ಪೋಟ: 103 ಕ್ಕೂ ಅಧಿಕ ಮಂದಿ ಸಾವು
Iran Blasts ಇರಾನ್‌ನಲ್ಲಿ ಬುಧವಾರ ಆಯೋಜನೆಗೊಂಡಿದ್ದ ಸೇನಾ ಅಧಿಕಾರಿ ಸ್ಮರಣೆಯ ಕಾರ್ಯಕ್ರಮದ ಮೇಲೆ ನಡೆಸಿದ ದಾಳಿಯಲ್ಲಿ 103ಕ್ಕೂ ಅಧಿಕ ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಘಟನೆಯ ವಿವರ ಇಲ್ಲಿದೆ.
ಟೆಹ್ರಾನ್: ಇರಾನ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಸೇನಾಧಿಕಾರಿಗಳ ಸ್ಮರಣಾರ್ಥದ ಕಾರ್ಯಕ್ರಮದ ವೇಳೆ ನಡೆದ ಅವಳಿ ಬಾಂಬ್ ಸ್ಟೋಟದಲ್ಲಿ 103 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 141ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಆಯೋಜಿಸಲಾಗಿದ್ದ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಅವರ ಸ್ಮರಣೆಯ ಕಾರ್ಯಕ್ರಮದ ವೇಳೆ ದುರ್ಘಟನೆ ನಡೆದಿದ್ದು, ಆತಂಕವನ್ನೂ ಸೃಷ್ಟಿಸಿದೆ.
ಅಮೆರಿಕಾವು 2020ರಲ್ಲಿ ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಳೆ ನಡೆಸಿದ್ದ ಢ್ರೋಣ್ ದಾಳಿಯಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಇದರ ಸ್ಮರಣಾರ್ಥ ಪ್ರತಿ ವರ್ಷ ಇರಾನ್‌ನಲ್ಲಿ ಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಅದರಲ್ಲೂ ಕೆರ್ಮಾನ್‌ನಲ್ಲಿರುವ ಕಾಸ್ಸೇಮ್ ಸೋಲೈಮನಿ ಅವರ ಸ್ಮಾರಕದ ಬಳಿಯೇ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಕಾರ್ಯಕ್ರಮ ಬುಧವಾರ ನಡೆಯುತ್ತಿತ್ತು. ಅಲ್ಲಿ ಇರಾನ್ ಸೇನೆಯ ಕೆಲ ಅಧಿಕಾರಿಗಳು, ಸ್ಥಳೀಯರು ಅಪಾರ ಸಂಖ್ಯೆಯಲ್ಲಿಯೇ ಸೇರಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಅಲ್ಲಿ ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಸ್ಪೋಟಗಳು ಸಂಭವಿಸಿದವು ಎಂದು ಇರಾನ್‌ನ ನೌರ್ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿರಿ: ಟೆಸ್ಟ್ನಲ್ಲಿ ಭಾರತ ವಿರುದ್ಧ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳು
ಈ ದಾಳಿಯಿಂದ ಮೊದಲು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಆನಂತರ ಸಾವಿನ ಸಂಖ್ಯೆ ಹೆಚ್ಚಿ ಸಂಜೆ ಹೊತ್ತಿಗೆ ಸಾವಿನ ಸಂಖ್ಯೆ 103 ದಾಟಿತ್ತು. ಗಾಯಗೊಂಡವರ ಸಂಖ್ಯೆಯೂ 141ಕ್ಕೂ ಅಧಿಕ.
ಬಾಂಬ್ ಸ್ಟೋಟಗಳಿಂದ ಗಾಯಗೊಂಡ ಹಲವರ ಆಕ್ರಂದನ, ಅಲ್ಲಿನ ರಕ್ತಸಿಕ್ತ ಪರಿಸ್ಥಿತಿ ಕಂಡು ಇನ್ನೂ ಹಲವರು ಕುಸಿದು ಬಿದ್ದರು. ಕೂಡಲೇ ರಕ್ಷಣಾ ಸಿಬ್ಬಂದಿ ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಸದ್ಯಕ್ಕಂತೂ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಕೆರ್ಮಾನ್ ಪ್ರದೇಶದ ರೆಡ್ ಕ್ಸೆಸೆಂಟ್‌ನ ಮುಖ್ಯಸ್ಥ ರೇಝಾ ಫಲ್ಹಾಹ್ ತಿಳಿಸಿದ್ದಾರೆ.
ಉಗ್ರರ ಕೈವಾಡ ಈ ದಾಳಿಗಳ ಹಿಂದೆ ಇರಬಹುದು ಎಂದು ಶಂಕಿಸಲಾಗಿದೆ.ಮೊದಲು ರಕ್ಷಣಾ ಕಾರ್ಯದ ನಂತರ ಘಟನೆಗೆ ಹಿನ್ನೆಲೆಯನ್ನು ತನಿಖೆಗೆ ಒಳಪಡಿಸುವ ಬಗ್ಗೆ ಇರಾನ್ ಸರ್ಕಾರ ಹೇಳಿದೆ.
ಅಮೆರಿಕಾದ ಮೇಲೆ ದಾಳಿಗೆ ಇರಾನ್‌ನ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಅವರ ಪಾತ್ರವಿದೆ ಎಂದು ಅಮೆರಿಕಾದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಸೂಚನೆ ಮೆರೆಗೆ ನಾಲ್ಕು ವರ್ಷ ಹಿಂದೆ ಕಾಸ್ಸೇಮ್ ಅವರನ್ನು ಕೊಲ್ಲಲಾಗಿತ್ತು. ಆನಂತರ ಟ್ರಂಪ್ ಅವರ ಕಾಸ್ಸೇಮ್ ಸೋಲೈಮನಿ ಮೇಲಿನ ದಾಳಿ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರು.
ವಿಭಾಗ