ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Horror Crime: ಪತ್ನಿದೇಹ 230 ತುಂಡುಗಳಾಗಿ ಕತ್ತರಿಸಿ ಭೀಭತ್ಸ ಕೊಲೆ, ನದಿಗೆ ಎಸೆದ ಸ್ನೇಹಿತ !

Horror Crime: ಪತ್ನಿದೇಹ 230 ತುಂಡುಗಳಾಗಿ ಕತ್ತರಿಸಿ ಭೀಭತ್ಸ ಕೊಲೆ, ನದಿಗೆ ಎಸೆದ ಸ್ನೇಹಿತ !

Heinous murder ಇದೊಂದು ಇಂಗ್ಲೀಷ್‌ ಹಾರರ್‌ ಚಿತ್ರವನ್ನೇ ಹೋಲುವ ಘಟನೆ. ಪತ್ನಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹೊಳೆಗೆ ಎಸೆದು ಸಿಕ್ಕಿಬಿದ್ದಿರುವ ಪ್ರಸಂಗ. ಯುಕೆಯಲ್ಲಿ ನಡೆರಿವ

ಕೊಲೆಯಾದ ಬ್ರಾಮ್ಲಿ. ಕೊಲೆ ಮಾಡಿದ ನಿಕೋಲಸ್‌
ಕೊಲೆಯಾದ ಬ್ರಾಮ್ಲಿ. ಕೊಲೆ ಮಾಡಿದ ನಿಕೋಲಸ್‌

ಲಿಂಕ್ನೋನ್‌ಶೈರ್‌( ಯುಕೆ): ಇದು ನಿಜಕ್ಕೂ ಭೀಭತ್ಸ ಕೊಲೆ. ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ ದೇಹವನ್ನು 230 ತುಂಡುಗಳಾಗಿ ಕತ್ತರಿಸಿ ಮನೆಯಲ್ಲಿಯೇ ಒಂದು ವಾರ ಇರಿಸಿ ಪೊಲೀಸರಿಗೆ ಅನುಮಾನ ಬರಬಾರದು ಎನ್ನುವ ಕಾರಣಕ್ಕೆ ಸ್ನೇಹಿತನೊಬ್ಬನಿಗ ಹಣ ನೀಡಿ ನದಿಗೆ ಎಸೆದ ಘಟನೆಯಿದು. ಹೊಳೆಯಲ್ಲಿ ತೇಲುತ್ತಿದ್ದ ದೇಹದ ತುಂಡುಗಳ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆಯಾದ ಮಹಿಳೆಯ ವಿವರ ಲಭಿಸಿದೆ. ಆಗ ಪೊಲೀಸರು ಮನೆಗೆ ತೆರಳಿ ಆಕೆಯ ಪತಿ ವಿಚಾರಿಸಿದರೆ ಆಕೆ ಮನೆಯಲ್ಲಿ ಎಲ್ಲೋ ಅಡಗಿಕೊಂಡಿರಬೇಕು ಎಂದು ಸಹಜವಾಗಿಯೇ ಸುಳ್ಳು ಹೇಳಿದ್ದಾನೆ. ಪೊಲೀಸರಿಗೆ ತಮಾಷೆ ಮಾಡಿ ಏನೂ ಆಗೇ ಎನ್ನುವ ರೀತಿಯಲ್ಲಿ ವರ್ತಸಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಹತ್ತು ತಿಂಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಘಟನೆಯನ್ನೇ ಹೋಲುವ ಈ ಭೀಭತ್ಸ ಕೊಲೆ ನಡೆದಿರುವುದು ಯುಕೆಯಲ್ಲಿ. ಲಿಂಕ್ನೋನ್‌ಶೈರ್‌ ಎನ್ನುವ ನಗರದಲ್ಲಿ.

ಆತನ ಹೆಸರು ನಿಕೋಲಸ್‌ ಮೆಟ್ಸನ್‌. ವಯಸ್ಸು 28. ಆತನ ಪತ್ನಿ 26 ವರ್ಷದ ಹೋಲಿ ಬ್ರಾಮ್ಲಿ. ಇಬ್ಬರು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿಯೇ ಚೆನ್ನಾಗಿಯೇ ಇತ್ತು. ಕೆಲವೊಮ್ಮೆ ಇಬ್ಬರ ನಡುವೆ ಜಗಳಗಳು ನಡೆಯುತ್ತಿದ್ದವು. ಆಕೆಯ ಮೇಲೆ ಹಲವು ಬಾರಿ ಹಲ್ಲೆ ಕೂಡ ಮಾಡಿದ್ದ. ಬ್ರಾಮ್ಲಿಗೆ ಮೊಲ ಸಹಿತ ಹಲವು ಪ್ರಾಣಿಗಳನ್ನು ಸಾಕುವ ಹವ್ಯಾಸ. ಅವುಗಳ ಮೇಲೆಯೂ ನಿಕೋಲಸ್‌ ದಾಳಿ ಮಾಡಿದ್ದ. ಇಲಿ ಜಾತಿಗೆ ಸೇರಿದ ಮಾಂಸ್ಟರ್‌ ಗಳನ್ನು ಗ್ರೈಂಡರ್‌ ನಲ್ಲಿ ಹಾಕಿ ಸಾಯಿಸಿದ್ದ. ಮೊಲಗಳನ್ನು ವಾಷಿಂಗ್‌ ಮೆಷಿನ್ ನಲ್ಲಿ ಹಾಕಿದ್ದ. ಅದೇ ರೀತಿ ನಾಯಿ ಮರಿಯನ್ನೂ ಅದರಲ್ಲಿಯೇ ಹಾಕಿ ಕೊಂದಿದ್ದ. ಇದನ್ನು ಆಕೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು.

ಆದರೆ ಮಾರ್ಚ್‌ ಕೊನೆ ವಾರದಲ್ಲಿ ನಿಕೋಲಸ್‌ ಚಾಕುವಿನಿಂದ ಆಕೆಯನ್ನು ಹಲವಾರು ಬಾರಿ ಇರಿದು ಬೆಡ್‌ರೂಂನಲ್ಲಿ ಕೊಂದು ಹಾಕಿದ್ದ. ಆನಂತರ ಆಕೆಯ ದೇಹವನ್ನು ಬಾತ್‌ರೂಂಗೆ ತಂದು 230 ತುಂಡುಗಳಾಗಿ ಕತ್ತರಿಸಿ ಹಾಕಿದ್ದ. ಮನೆಯಲ್ಲಿಯೇ ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ತುಂಬಿ ಕಿಚನ್‌ ಲ್ಯಾಡರ್‌ ನಲ್ಲಿ ಇರಿಸಿದ್ದ. ಇದು ತಣ್ಣನೆಯ ಪ್ರದೇಶವಾಗಿದ್ದರಿಂದ ವಾಸನೆಯೂ ಬಂದಿರಲಿಲ್ಲ. ಆದರೂ ವಾಸನೆ ಬಾರದಂತೆ ರಾಸಾಯನಿಕಗಳನ್ನು ಆತ ಸಿಂಪರಿಸಿದ್ದ. ಒಂದು ವಾರದ ನಂತರ ಪೊಲೀಸರಿಗೆ ಅನುಮಾನ ಬಾರದಿರಲೆಂದು ಸ್ನೇಹಿತನೊಬ್ಬನಿಗೆ ಇದನ್ನು ಹೊಳೆಗೆ ಎಸೆಯಲು 50 ಯೂರೋಗಳನ್ನು ನೀಡಿದ್ದ. ಆತ ಅದನ್ನು ವಿತಹಾಮ್‌ ನದಿಯನ್ನು ಎಸೆದಿದ್ದ. ಮರು ದಿನ ಪ್ಲಾಸ್ಟಿಕ್‌ ಚೀಲ ತೇಲುತ್ತಿದ್ದುದು ಅದರಲ್ಲಿ ಕೈ ಕೂಡ ಕಾಣುತ್ತಿದ್ದುದನ್ನು ಗಮನಿಸಿದ ವಾಯುವಿಹಾರಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ತಪಾಸಣೆ ಮಾಡಿದಾಗ ಅಲ್ಲಿ ಬ್ರಾಮ್ಲಿ ದೇಹದ 224 ತುಂಡುಗಳು ದೊರೆತಿದ್ದವು. ಇನ್ನೂ ಕೆಲವು ದೇಹದ ಭಾಗಗಳು ಸಿಕ್ಕಿಲ್ಲ. ಎಂತಹ ಸನ್ನಿವೇಶದಲ್ಲೂ ಆಕೆಯ ಬಗ್ಗೆ ಸುಳಿವು ಸಿಗದಂತೆ ದೇಹವನ್ನು ಕತ್ತರಿಸಿದ್ದು ಕಂಡು ಬಂದಿತ್ತು.

ಆಕೆ ಕಾಣೆಯಾಗಿರುವ ಬಗ್ಗೆ ತಾಯಿಯೂ ದೂರು ನೀಡಿದ್ದರು. ಆಕೆಯ ದೇಹದ ಭಾಗದ ಮಾಹಿತಿ ಆಧರಿಸಿ ಪೊಲೀಸರು ನಿಕೋಲಸ್‌ ಮನೆಗೆ ಲಗ್ಗೆ ಇಟ್ಟಿದ್ದರು. ಆಕೆಯ ಬಗ್ಗೆ ಕೇಳಿದರೆ, ಇಲ್ಲಿಯೇ ಹಾಸಿಗೆಯ ಕೆಳಗೆ ಅವಿತುಕೊಂಡಿರಬೇಕು ಎನ್ನುವ ಉತ್ತರವನ್ನು ಹಾಸ್ಯಭರಿತವಾಗಿಯೇ ನೀಡಿದ್ದಾನೆ. ಸ್ನೇಹಿತೆಯರ ಜತೆಗೆ ಹೋಗಿರಬೇಕು ನೋಡಿ ಎಂದು ಹೇಳಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇಹ ಸಾಗಿಸಲು ಸ್ನೇಹಿತನಿಗೆ ಸಂದೇಶ ಹಾಕಿರುವುದು, ಆತ ಕೆಲಸ ಆಯಿತು ಎಂದು ಉತ್ತರಿಸಿರುವ ಸಾಕ್ಷ್ಯ ಸಿಕ್ಕಿದೆ. ಮನೆಯಲ್ಲಿದ್ದ ರಾಸಾಯನಿಕಗಳು, ವಾಸನೆ ಕೂಡ ಅನುಮಾನ ಹೆಚ್ಚಿಸಿದೆ. ಕೊನೆಗೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾನೆ.

ಈ ಕುರಿತು ಬ್ರಾಮ್ಲಿ ತಾಯಿ ಕೂಡ ಪೊಲೀಸರಿಗೆ ಮಾಹಿತಿ ನೀಡಿ, ಮದುವೆಯಾಗಿ ಒಂದೂವರೆ ವರ್ಷ ಆಗಿತ್ತು. ಮಗಳನ್ನು ನೋಡಲು ಒಮ್ಮೆಯೂ ಬಿಟ್ಟಿರಲಿಲ್ಲ. ವಿಚಿತ್ರವಾಗಿ ನಿಕೋಲಾಸ್‌ ವರ್ತಿಸುತ್ತಿದ್ದ. ಮನೆಯಲ್ಲಿ ಪ್ರಾಣಿಗಳನ್ನೂ ವಿಚಿತ್ರವಾಗಿ ಕೊಂದು ಹಾಕಿದ್ದಾನೆ. ಆದರೆ ಆತ ಯಾಕೆ ಹೀಗೆ ಮಾಡಿದ್ದಾನೆ ಎನ್ನುವುದು ಮಾತ್ರ ನಮಗೂ ತಿಳಿದಿಲ್ಲ ಎಂದು ಹೇಳಿದ್ಧಾರೆ.

ಘಟನೆ ನಂತರ ಆತನ ಆರೋಗ್ಯ ತಪಾಸಣೆ, ಹೇಳಿಕೆ ಪಡೆದಾಗ ಮನೋರೋಗದಿಂದ ಬಳಲುತ್ತಿದ್ದ ನಿಕೋಲಸ್‌ ಈ ಕೃತ್ಯವನ್ನು ಎಸಗಿರುವ ಸಾಧ್ಯತೆಯಿದೆ. ಆತ ಅನುಮಾನದ ಜತೆಗೆ ದೆವ್ವದ( Evil monster) ರೀತಿ ವರ್ತನೆ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಬಂಧಿತ ನಿಕೋಲಸ್‌ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸೋಮವಾರ ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆಯಿದೆ.

IPL_Entry_Point

ವಿಭಾಗ