China earthquake: ಚೀನಾದಲ್ಲಿ ಭಾರೀ ಭೂಕಂಪ,110ಕ್ಕೂ ಅಧಿಕ ಮಂದಿ ಸಾವು: ಎಷ್ಟಿತ್ತು ಭೂಕಂಪದ ತೀವ್ರತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Earthquake: ಚೀನಾದಲ್ಲಿ ಭಾರೀ ಭೂಕಂಪ,110ಕ್ಕೂ ಅಧಿಕ ಮಂದಿ ಸಾವು: ಎಷ್ಟಿತ್ತು ಭೂಕಂಪದ ತೀವ್ರತೆ

China earthquake: ಚೀನಾದಲ್ಲಿ ಭಾರೀ ಭೂಕಂಪ,110ಕ್ಕೂ ಅಧಿಕ ಮಂದಿ ಸಾವು: ಎಷ್ಟಿತ್ತು ಭೂಕಂಪದ ತೀವ್ರತೆ

China earthquake updates ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಮಂಗಳವಾರ ಭೂಕಂಪ ಸಂಭವಿಸಿ ಕನಿಷ್ಠ 110 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ.
ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ.

ಬೀಜಿಂಗ್‌: ಚೀನಾದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಕನಿಷ್ಠ 111 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಚೀನಾದ ವಾಯುವ್ಯ ಭಾಗದಲ್ಲಿ ಭೂಮಿ ಕಂಪಿಸಿದ್ದರಿಂದ ಹಲವಾರು ಕಟ್ಟಡಗಳು ಉರುಳಿ ಬಿದ್ದು ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಮುನ್ಸೂಚನೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

5.9 ಪರಿಮಾಣದಲ್ಲಿ ಭೂಕಂಪನದ ತೀವ್ರತೆ ಇತ್ತು. ಇದು ಕ್ವಿಂಗಾಯ್‌ ಎನ್ನುವ ಪ್ರದೇಶದಲ್ಲಿಯೇ ಅಧಿಕವಾಗಿತ್ತು ಎಂದು ಅಮೆರಿಕಾದ ಜಿಯಾಲಿಜಿಕಲ್‌ ಸರ್ವೇ ವರದಿ ಮಾಡಿದೆ.

ಚೀನಾದ ಗಾನ್ಸು ರಾಜ್ಯದ ಭಾಗದಲ್ಲಿ ಸೋಮವಾರ ರಾತ್ರಿಯಿಂದಲೇ ಭೂಕಂಪನದ ಅನುಭವ ಆಗುತ್ತಿತ್ತು. ಭೂಮಿ ಕಂಪಿಸಿದ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಇದರಿಂದ ಕಟ್ಟಡಗಳು ಕುಸಿದು ಅದರೊಳಗೆ ಇದ್ದ ಹಲವರು ಮೃತಪಟ್ಟಿದ್ದಾರೆ ಎಂದು ಚೀನಾದ ಭೂಕಂಪನಾ ಪುನರ್ಸವತಿ ಕೇಂದ್ರವು ಖಚಿತಪಡಿಸಿದೆ. ಹಾಯ್‌ಡಾಂಗ್‌ ನಗರದಲ್ಲಿಯೇ 11ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇದಲ್ಲದೇ ಅಕ್ಕಪಕ್ಕದ ಹಲವಾರು ಪ್ರದೇಶಗಳಲ್ಲೂ ಭೂಕಂಪದಿಂದ ಜೀವ ಹಾನಿ ಉಂಟಾಗಿದೆ.

ಭೂಕಂಪನದ ಅನುಭವವಾಗುತ್ತಲೇ ಜನ ಮನೆಯಿಂದ ಹೊರ ಬಂದರು. ಕೆಲವರು ರಕ್ಷಣೆಗೆ ಕೂಗುತ್ತಿದ್ದುದು ಕಂಡು ಬಂದಿತು. ತಮ್ಮವರು ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವಂತೆ ಅಂಗಲಾಚುತ್ತಿದ್ದುದು ಮನ ಕಲಕುವಂತಿತ್ತು ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಭೂಕಂಪದಿಂದಾಗಿ ಈ ಭಾಗದಲ್ಲಿ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಂಡು ಎಲ್ಲವೂ ಅಯೋಮಯವಾಗಿತ್ತು. ಕತ್ತಲಲ್ಲಿಯೇ ರಕ್ಷಣಾ ಕಾರ್ಯಕರ್ತರು ಜನರನ್ನು ರಕ್ಷಿಸುವಲ್ಲಿ ಶ್ರಮ ಹಾಕುತ್ತಿದ್ದುದು, ರಕ್ಷಿಸಿದವರನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್‌ಗಳು ಸಾಲಾಗಿ ನಿಂತಿದ್ದು ಕಂಉ ಬಂದಿತು.

ಉತ್ತರ ಚೀನಾದ ಹಲವು ಭಾಗದಲ್ಲಿ ಚಳಿಯ ಪ್ರಮಾಣ ಮಿತಿ ಮೀರಿದೆ. ಕನಿಷ್ಠ ಉಷ್ಣಾಂಶದಿಂದಾಗಿ ಜನ ತತ್ತರಿಸಿಹೋಗಿದ್ದಾರೆ. ಇದರ ನಡುವೆಯೇ ಭೂಕಂಪ ಬೇರೆ ಸಂಭವಿಸಿರುವುದು ಈ ಭಾಗದ ಜನರ ಜೀವನವನ್ನು ಬರ್ಬರವಾಗಿಸಿದೆ.

ಚೀನಾದ ಸಿಚುನ್‌ ಪ್ರದೇಶದಲ್ಲಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಭೂಕಂಪ ಸಂಭವಸಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟು ಭಾರೀ ಹಾನಿಯಾಗಿತ್ತು. ಇದಕ್ಕೂ ಮುನ್ನ 2008 ರಲ್ಲಿ ಚೀನಾದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 87,000 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಶಾಲಾ ಮಕ್ಕಳು, ಸಿಬ್ಬಂದಿ ಸೇರಿ 5,335 ಮಂದಿ ಪ್ರಾಣ ಹಾನಿಯಾಗಿತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.