India bans rice exports:ಅಕ್ಕಿ ರಫ್ತು ನಿಷೇಧಿಸಿದ ಭಾರತ; ಡಜನ್ ಗಟ್ಟಲೆ ಅಕ್ಕಿ ಚೀಲಗಳನ್ನ ಮನೆಗೆ ಹೊತ್ತು ತರುತ್ತಿರುವ ಅನಿವಾಸಿ ಭಾರತೀಯರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Bans Rice Exports:ಅಕ್ಕಿ ರಫ್ತು ನಿಷೇಧಿಸಿದ ಭಾರತ; ಡಜನ್ ಗಟ್ಟಲೆ ಅಕ್ಕಿ ಚೀಲಗಳನ್ನ ಮನೆಗೆ ಹೊತ್ತು ತರುತ್ತಿರುವ ಅನಿವಾಸಿ ಭಾರತೀಯರು

India bans rice exports:ಅಕ್ಕಿ ರಫ್ತು ನಿಷೇಧಿಸಿದ ಭಾರತ; ಡಜನ್ ಗಟ್ಟಲೆ ಅಕ್ಕಿ ಚೀಲಗಳನ್ನ ಮನೆಗೆ ಹೊತ್ತು ತರುತ್ತಿರುವ ಅನಿವಾಸಿ ಭಾರತೀಯರು

NRIs in US: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋಗಳಲ್ಲಿ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯರು ದಿನಸಿ ಮಾಲ್​​ಗಳಿಂದ ಡಜನ್ ಗಟ್ಟಲೆ ಅಕ್ಕಿ ಚೀಲಗಳನ್ನು ಮನೆಗೆ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ದಿನಸಿ ಅಂಗಡಿಗಳ ಮುಂದೆ ಭಾರತೀಯರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.

ಅಕ್ಕಿ ರಫ್ತು ನಿಷೇಧಿಸಿದ ಭಾರತ
ಅಕ್ಕಿ ರಫ್ತು ನಿಷೇಧಿಸಿದ ಭಾರತ

ಪ್ರಮುಖ ಅಕ್ಕಿ ರಫ್ತು ದೇಶವಾದ ಭಾರತ ಇದೀಗ ಜಾಗತಿಕ ಮಾರುಕಟ್ಟೆಗೆ ಬಾಸ್ಮತಿ ಹೊರತಾದ ಅಕ್ಕಿಯ ರಫ್ತನ್ನು ನಿಷೇಧಿಸಿದೆ. ಈ ಬಾರಿ ಮುಂಗಾರು ತಡವಾದ ಕಾರಣ ಹಾಗೂ ಕೆಲವು ಭಾಗಗಳಲ್ಲಿ ಮಳೆಯಿಂದಾಗಿ ಬೆಳೆ ಹಾಳಾದ ಕಾರಣ ಅಕ್ಕಿಯ ರಫ್ತನ್ನು ನಿಷೇಧಿಸಿದೆ. ಆದರೆ ಇದು ಅನಿವಾಸಿ ಭಾರತೀಯರ (NRIs-Non Resident Indians) ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋಗಳಲ್ಲಿ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯರು ದಿನಸಿ ಮಾಲ್​​ಗಳಿಂದ ಡಜನ್ ಗಟ್ಟಲೆ ಅಕ್ಕಿ ಚೀಲಗಳನ್ನು ಮನೆಗೆ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ದಿನಸಿ ಅಂಗಡಿಗಳ ಮುಂದೆ ಭಾರತೀಯರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.

ಟೆಕ್ಸಾಸ್, ಮಿಚಿಗನ್ ಮತ್ತು ನ್ಯೂಜೆರ್ಸಿ ಸೇರಿದಂತೆ ಪ್ರಮುಖ ನಗರಗಳಲ್ಲಿನ ಭಾರತೀಯ ಕಿರಾಣಿ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ. ಈ ಪೈಕಿ ತೆಲುಗು ಮಾತನಾಡುವ ಜನರೇ ಹೆಚ್ಚಿದ್ದಾರೆ. ಅಮೆರಿಕ್ಕೆ ಹೋಲಿಸಿದರೆ ಇಂಗ್ಲೆಂಡ್ ಮತ್ತು ಐರ್ಲೆಂಡ್‌ನ ಅಂಗಡಿಗಳಲ್ಲಿ ಇಷ್ಟೊಂದು ರಶ್ ಕಂಡುಬಂದಿಲ್ಲ.

ಈ ಮಳಿಗೆಗಳು ಮಾರಾಟದ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಿದ್ದು, ಪ್ರತಿ ಗ್ರಾಹಕನಿಗೆ ಒಂದು ಅಕ್ಕಿ ಚೀಲವನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ತಿಳಿಸಿವೆ ಎಂದು ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. 9 ಕೆಜಿ ರೈಸ್​ ಬ್ಯಾಗ್​ ಅನ್ನು 29 ಡಾಲರ್​ ಅಂದರೆ 2,213 ರೂಪಾಯಿಗೆ ಮಾರಾಟಮಾಡಲಾಗುತ್ತಿದೆ.

ಭಾರತವು ಜುಲೈ 20 ರಂದು ಅಕ್ಕಿ ರಫ್ತು ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು "ರಫ್ತು ನಿಷೇಧಿತ" ವರ್ಗಕ್ಕೆ ಸೇರಿಸಿದೆ. ಪಶ್ಚಿಮ ಆಫ್ರಿಕಾದ ಬೆನಿನ್ ದೇಶವು ಭಾರತದಿಂದ ಬಾಸ್ಮತಿ ಅಲ್ಲದ ಅಕ್ಕಿಯ ಪ್ರಮುಖ ಆಮದುದಾರರಲ್ಲಿ ಒಂದಾಗಿದೆ. ಇತರ ಆಮದುದಾರ ದೇಶಗಳೆಂದರೆ ನೇಪಾಳ, ಬಾಂಗ್ಲಾದೇಶ, ಚೀನಾ, ಕೋಟ್ ಡಿ ಐವರಿ, ಟೋಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷ್ಯಾ, ಲೈಬೀರಿಯಾ ಮತ್ತು ಯುಎಇ. 2022-23ರಲ್ಲಿ ಭಾರತದಿಂದ 42.12 ಲಕ್ಷ ಟನ್ ಅಕ್ಕಿ ರಫ್ತಾಗಿತ್ತು. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ 15.54 ಲಕ್ಷ ಟನ್ ಅಕ್ಕಿ ರಫ್ತು ಮಾಡಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.