ಕನ್ನಡ ಸುದ್ದಿ  /  Nation And-world  /  International News Taiwan Saw Major Earthquake Killing 7 People 730 Injured Japan Philippines Alerted Kub

Taiwan Earthquake: ತೈವಾನ್‌ನಲ್ಲಿ ಪ್ರಬಲ ಭೂಕಂಪ, ಮಂದಿ ಸಾವು, ಜಪಾನ್‌, ಫಿಲಿಫೈನ್ಸ್‌ನಲ್ಲಿ ಮುನ್ನೆಚ್ಚರಿಕೆ

ತೈವಾನ್‌ನಲ್ಲಿ ಬುಧವಾರ ಬೆಳಿಗ್ಗೆ ಭೀಕರ ಭೂಕಂಪ ಸಂಭವಿಸಿದ್ದು,7 ಮಂದಿ ಮೃತಪಟ್ಟು ಭಾರೀ ಕಟ್ಟಡಗಳು ಕುಸಿತವಾಗಿವೆ.

ತೈವಾನ್‌ ನಲ್ಲಿ ಭೂಕಂಪ ತಂದೊಡ್ಡಿದ ಅನಾಹುತದ ನೋಟ
ತೈವಾನ್‌ ನಲ್ಲಿ ಭೂಕಂಪ ತಂದೊಡ್ಡಿದ ಅನಾಹುತದ ನೋಟ

ತೈಪೆ: ತೈವಾನ್‌ನಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 7 ಮಂದಿ ಮೃತಪಟ್ಟು 730 ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆಯಿಂದಲೇ ಭೂಮಿ ಕಂಪಿಸಿ ಹಲವಾರು ಕಡೆಗೆ ಭಾರೀ ಅನಾಹುತ ಸಂಭವಿಸಿವೆ. ಸದ್ಯದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಬೆಟ್ಟದ ಕುಸಿದಿದ್ದರಿಂದ ಕೆಲವರು ಸಿಲುಕಿ ಮೃತಪಟ್ಟಿದ್ದರೆ, ಇನ್ನೂ ಕೆಲವರು ಪ್ರತ್ಯೇಕವಾಗಿ ಭೂಕಂಪಕ್ಕೆ ಜೀವ ಕಳೆದುಕೊಂಡಿದ್ದಾರೆ. ಇಡೀ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಕಟ್ಟಡಗಳ ನಡುವೆ ಸಿಲುಕಿರುವ ಹಲವರನ್ನು ರಕ್ಷಿಸುವ ಕಾರ್ಯವನ್ನು ರಕ್ಷಣಾ ಪಡೆಗಳು ಕೈಗೊಂಡಿದೆ. ತೈವಾನ್‌ನಲ್ಲಿ 25 ವರ್ಷಗಳ ಅಂತರದಲ್ಲಿ ಸಂಭವಿಸಿರುವ ಭೀಕರ ಭೂಕಂಪ ಇದಾಗಿದ್ದು. ಸುನಾಮಿ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಜಪಾನ್‌ ಹಾಗೂ ಫಿಲಿಫೈನ್ಸ್‌ನಲ್ಲಿ ಕೂಡ ಭೂಕಂಪದ ಮುನ್ನೆಚ್ಚರಿಕೆ ನೀಡಲಾಗಿದೆ.

ತೈವಾನ್‌ನ ತೈಪೆ ಸೇರಿದಂತೆ ಹಲವು ಕಡೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಭೂಮಿ ಕಂಪಿಸುತ್ತಿತ್ತು. ಏಕಾಏಕಿ ಇದರ ಪ್ರಮಾಣ ಹೆಚ್ಚಾಗಿ ಜನ ಭಯದಿಂದ ಮನೆಯಿಂದ ಹೊರಗೆ ಓಡಿಬರತೊಡಗಿದರು. ದ್ವೀಪ ನಗರಗಳಲ್ಲಿ ಕಟ್ಟಡಗಳು ಉರುಳಿ ಬಿದ್ದರೆ, ಕೆಲವು ಕಡೆ ಬೆಟ್ಟಗಳೂ ಉರುಳಿವೆ. ಬೃಹತ್‌ ಕಟ್ಟಡಗಳು ವಾಲಿಕೊಂಡಿದೆ. ಕೆಲವರು ಮನೆಯಿಂದ ಹೊರಕ್ಕೆ ಬಂದಿದ್ದರೆ, ಇನ್ನು ಕೆಲವರು ಹೊರಡುವುದರಲ್ಲಿದ್ದರು. ಏಕಾಏಕಿ ಆದ ಭೂಕಂಪನದಿಂದ ಎಲ್ಲೆಡೆ ಕೂಗಾಟ, ಕಿರುಚಾಟ ಜೋರಾಗಿರುವುದು ಕಂಡು ಬಂದಿತು.ಕೆಲವರು ಕಟ್ಟಡ ಉರುಳುವುದರನ್ನು ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಿಗೆ ಹಾಕಿದ್ದಾರೆ. ಬೆಟ್ಟವೊಂದರ ಬಳಿ ನಡೆದು ಬರುತ್ತಿದ್ದ ಮೂವರು ಬಂಡೆಗಳ ನಡುವೆ ಸಿಲುಕಿ ಮೃತಪಟ್ಟಿದಾರೆ. ಲಾರಿ ಚಾಲಕನೊಬ್ಬ ಭೂಕುಸಿತದಿಂದ ಜೀವ ಕಳೆದುಕೊಂಡಿದ್ದಾನೆ.

ಈ ಬಾರಿ ಭೂಕಂಪನ 25 ವರ್ಷದ ನಂತರದಲ್ಲಿ ಸಂಭವಿಸಿದ ಭಾರೀ ಪ್ರಮಾಣದ್ದು. ಭೂಕಂಪದ ತೀವ್ರತೆಯು 7.4 ರಷ್ಟಿರುವುದು ಕಂಡು ಬಂದಿದೆ. ಬೆಳಿಗಿನ 8ರ ಹೊತ್ತಿಗೆ ಇದು ಸಂಭವಿಸಿದೆ. ಭೂಕಂಪದ ಕೇಂದ್ರಸ್ಥಾನ ಟೈವಾನ್‌ನ ಹುವಾಲಿನ್‌ ನಗರದಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1999ರ ಸೆಪ್ಟಂಬರ್‌ನಲ್ಲಿ ತೈವಾನ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪಕಕ್ಕೆ 2,400 ಜನ ಜೀವ ತೆತ್ತಿದ್ದರು. ಆಗ ಭೂಕಂಪದ ಪ್ರಮಾಣ 7.6ರ ತೀವ್ರತೆಯಲ್ಲಿ ದಾಖಲಾಗಿತ್ತು.

ಈಗಾಗಲೇ ತೈವಾನ್‌ನ ಅಧ್ಯಕ್ಷ ತ್ಸೈ ಇಂಗ್‌ ವೆನ್‌ ಟಾವರು ಸ್ಥಳೀಯಾಡಳಿತ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಸೇನೆಯೂ ಕೈ ಜೋಡಿಸಲಿದೆ ಎಂದು ಹೇಳಿದಾರೆ.

ತೈವಾನ್‌ ನಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ ಜಪಾನ್‌ ಹಾಗೂ ಫಿಲಿಫೈನ್ಸ್‌ ಮೇಲೂ ಆಗಿದೆ. ಇಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಹಿಂದೆ ಜಪಾನ್ ನಲ್ಲಿ ದಶಕದ ಹಿಂದೆ ಸಂಭವಿಸಿದ್ದ ಭೂಕಂಪದಿಂದ 18,500 ಮಂದಿ ಮೃತಪಟ್ಟಿದ್ದು ಭಾರೀ ದುರಂತವಾಗಿತ್ತು.

ವಿಭಾಗ