ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Papua New Guinea: ಪಪುವಾ ನ್ಯೂ ಗಿನಿಯಾದಲ್ಲಿ ಭೀಕರ ಭೂಕುಸಿತ; 2000ಕ್ಕೂ ಅಧಿಕ ಮಂದಿ ಸಾವು; ವಿಶ್ವಸಂಸ್ಥೆಗೆ ಸರ್ಕಾರ ಮಾಹಿತಿ

Papua New Guinea: ಪಪುವಾ ನ್ಯೂ ಗಿನಿಯಾದಲ್ಲಿ ಭೀಕರ ಭೂಕುಸಿತ; 2000ಕ್ಕೂ ಅಧಿಕ ಮಂದಿ ಸಾವು; ವಿಶ್ವಸಂಸ್ಥೆಗೆ ಸರ್ಕಾರ ಮಾಹಿತಿ

ಪಪುವಾ ನ್ಯೂ ಗಿನಿಯಾದಲ್ಲಿ ಸಂಭವಿಸಿರುವ ಭೀಕರ ಭೂಕುಸಿತದಲ್ಲಿ ವಿಶ್ವಸಂಸ್ಥೆಯ ವಲಸೆ ಏಜೆನ್ಸಿಯ ಅಂದಾಜಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2 ಸಾವಿರ ಮಂದಿ ಮೃತಪಟ್ಟಿರುವುದಾಗಿ ಇಲ್ಲಿನ ಸರ್ಕಾರವೇ ವಿಶ್ವಸಂಸ್ಥೆಗೆ ಇತಿಳಿಸಿದೆ.

ಪಪುವಾ ನ್ಯೂ ಗಿನಿಯಾಲ್ಲಿ ಭೀಕರ ಭೂಕುಸಿತದಿಂದ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಪಪುವಾ ನ್ಯೂ ಗಿನಿಯಾಲ್ಲಿ ಭೀಕರ ಭೂಕುಸಿತದಿಂದ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. (AP)

ಪಪುವಾ ನ್ಯೂ ಗಿನಿಯಾದಲ್ಲಿ ಮೇ 24 (ಶುಕ್ರವಾರ) ರಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ 2,000 ಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ನ್ಯೂ ಗಿನಿಯಾದ ಉತ್ತರದ ಎಂಗಾ ಪ್ರಾಂತ್ಯದ ಯಂಬಲಿ ಗ್ರಾಮದ ಸುತ್ತಲೂ ಜೀವಂತವಾಗಿ ಸಮಾಧಿಯಾದವರ ಸಂಖ್ಯೆಯನ್ನು ಸ್ಥಳೀಯ ಅಧಿಕಾರಿಗಳ ಅಂದಾಜಿಸಿದ್ದಾರೆ. ಭಾನುವಾರ (ಮೇ 26) ಅಂದಾಜು ಸಾವಿನ ಸಂಖ್ಯೆಯನ್ನು 670 ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಅಂದಾಜಿಸಿದ್ದರು. ಆದರೆ ವಿಶ್ವಸಂಸ್ಥೆಯ ವಲಸೆ ಏಜೆನ್ಸಿಯ ಅಂದಾಜಿಗಿಂತ ಸುಮಾರು ಮೂರು ಪಟ್ಟು ಸಾವಿನ ಸಂಖ್ಯೆ ಹೆಚ್ಚಾಗಿದೆ. ಸ್ಥಳೀಯರೆೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಕಳೆದುಕೊಂಡ ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಷ್ಟ್ರೀಯ ವಿಪತ್ತು ಕೇಂದ್ರವು ಭಾನುವಾರ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಸಾವಿನ ಸಂಖ್ಯೆಯನ್ನು 2,000 ಕ್ಕೆ ಏರಿಸಿದೆ. ಭೂಕುಸಿತದಿಂದ ಸುಮಾರು 1,250 ಜನರು ಸ್ಥಳಾಂತರಗೊಂಡಿದ್ದಾರೆ."ಭೂಕುಸಿತವು ನಿಧಾನವಾಗಿ ಬದಲಾಗುತ್ತಿರುವುದರಿಂದ ಪರಿಸ್ಥಿತಿ ಅಸ್ಥಿರವಾಗಿದೆ, ಇದು ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೆ ಕಾರ್ಯಾಟರಣೆಗೆ ದೊಡ್ಡ ಸವಾಲು ಮತ್ತು ಅಪಾಯವನ್ನುಂಟುಮಾಡುತ್ತದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

"ಮನೆಗಳು ಸುಮಾರು ಎಂಟು ಮೀಟರ್ (26.3 ಅಡಿ) ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಆದ್ದರಿಂದ ಸಾಕಷ್ಟು ಅವಶೇಷಗಳು ಮಣ್ಣಿನ ಅಡಿಯಲ್ಲಿವೆ" ಎಂದು ಪಪುವಾ ನ್ಯೂ ಗಿನಿಯಾದ ಕೇರ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಜಸ್ಟಿನ್ ಮೆಕ್‌ಮಹೋನ್ ಎಬಿಸಿ ಟೆಲಿವಿಷನ್‌ಗೆ ತಿಳಿಸಿದ್ದಾರೆ.

ಅಸ್ಥಿರ ಭೂಪ್ರದೇಶ, ದೂರದ ಸ್ಥಳ ಹಾಗೂ ಸಮೀಪದ ಬುಡಕಟ್ಟು ಪ್ರದೇಶ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಸ್ಥಳೀಯ ಮತ್ತು ರಕ್ಷಣಾ ಕಾರ್ಯಕರ್ತರು ಕೋಲುಗಳು ಮತ್ತು ಬರಿಗೈಗಳಿಂದ ಭೂಕುಸಿತದ ಸ್ಥಳದಲ್ಲಿ ಅಗೆದು ತಲೆಬುರುಡೆಗಳನ್ನು ಹೊರ ತೆಗೆಯುತ್ತಿದ್ದಾರೆ. ಈವರೆಗೆ ಕೇಲವೇ ಕೆಲವು ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ.

ಪಪುವಾ ನ್ಯೂ ಗಿನಿಯಾ ನೆರೆವಿಗೆ ಸಿದ್ಧ ಎಂದ ಆಸ್ಟ್ರೇಲಿಯಾ

ಮಾರಣಾಂತಿಕ ಭೂಕುಸಿತದ ಸ್ಥಳದಲ್ಲಿ ಸಹಾಯ ಮಾಡಲು ವಿಮಾನ ಮತ್ತು ಇತರ ಉಪಕರಣಗಳನ್ನು ಕಳುಹಿಸಲು ಸಿದ್ಧ ಎಂದು ಆಸ್ಟ್ರೇಲಿಯಾ ಸೋಮವಾರ ತಿಳಿಸಿದೆ. ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರು ತಮ್ಮ ಅಧಿಕಾರಿಗಳು ಶುಕ್ರವಾರದಿಂದ ಪಪುವಾ ನ್ಯೂ ಗಿನಿಯಾ ಸಹವರ್ತಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಎಪಿ ವರದಿ ಮಾಡಿದೆ.

"ಜನರನ್ನು ಅಲ್ಲಿಗೆ ಕರೆದೊಯ್ಯಲು ನಾವು ನಿಸ್ಸಂಶಯವಾಗಿ ಏರ್‌ಲಿಫ್ಟ್ ಸಾಮರ್ಥ್ಯವನ್ನು ಹೊಂದಿದ್ದೇವೆ. ಶೋಧ ಮತ್ತು ಕಾರ್ಯಾಚರಣೆ ವಿಷಯದಲ್ಲಿ ನಾವು ಪೂರೈಸಬಹುದದಾದ ಇತರ ಉಪಕರಣಗಳು ಪಿಎನ್‌ಜಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇವೆ" ಎಂದು ಮಾರ್ಲೆಸ್ ಹೇಳಿದ್ದಾರೆ.

ಭೀಕರ ಭೂಕುಸಿತದ ನಡುವೆ ಈ ಪ್ರದೇಶದಲ್ಲಿನ ಬುಡಕಟ್ಟು ಹಿಂಸಾಚಾರವು ರಸ್ತೆ ಪ್ರಯಾಣಕ್ಕೆ ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ. ಮಿಲಿಟರಿ ರಕ್ಷಣಾ ತಂಡಗಳ ಬೆಂಗಾವಲು ಸಹಾಯವನ್ನು ಪಡೆಯಲಾಗುತ್ತಿದೆ. ಶನಿವಾರ, ಈ ಪ್ರದೇಶದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ, ಐದು ಅಂಗಡಿಗಳು ಹಾಗೂ 30 ಮನೆಗಳು ಸುಟ್ಟುಹೋಗಿವೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಮಾಹಿತಿ ನೀಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ