Dawood Ibrahim: ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ವಿಷಪ್ರಾಷನ ಶಂಕೆ: ಪಾಕಿಸ್ತಾನದಲ್ಲಿ ಆಸ್ಪತ್ರೆಗೆ ದಾಖಲು ವರದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dawood Ibrahim: ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ವಿಷಪ್ರಾಷನ ಶಂಕೆ: ಪಾಕಿಸ್ತಾನದಲ್ಲಿ ಆಸ್ಪತ್ರೆಗೆ ದಾಖಲು ವರದಿ

Dawood Ibrahim: ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ವಿಷಪ್ರಾಷನ ಶಂಕೆ: ಪಾಕಿಸ್ತಾನದಲ್ಲಿ ಆಸ್ಪತ್ರೆಗೆ ದಾಖಲು ವರದಿ

Dawood Ibrahim News ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ( Dawood Ibrahim) ಪಾಕಿಸ್ತಾನದ ಕರಾಚಿ( Karachi) ಯಲ್ಲಿ ವಿಷ ಪ್ರಾಶನ ಮಾಡಲಾಗಿದ್ದು, ಅಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿಯಿದೆ. ಈ ಕುರಿತ ವರದಿ ಇಲ್ಲಿದೆ.

ದಾವೂದ್‌ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಷಯ ಪ್ರಾಶನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ದಾವೂದ್‌ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಷಯ ಪ್ರಾಶನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಕರಾಚಿ: ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ (Dawood Ibrahim ) ವಿಷ ಪ್ರಾಷನ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪಾಕಿಸ್ತಾನದಲ್ಲಿದ್ದ ಇಬ್ರಾಹಿಂಗೆ ಆಹಾರದೊಂದಿಗೆ ವಿಷಪ್ರಾಶನ ಮಾಡಿಸಲಾಗಿದ್ದು, ಅಸ್ವಸ್ಥಗೊಂಡಿರುವ ಇಬ್ರಾಹಿಂನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಎರಡು ದಿನದ ಹಿಂದೆಯೇ ವಿಷ ಪ್ರಾಶನದಿಂದ ಇಬ್ರಾಹಿಂ ಅಸ್ವಸ್ಥಗೊಂಡಿದ್ದು, ಆಗಲೇ ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದನ್ನು ಪಾಕಿಸ್ತಾನ ಅಥವಾ ಇತರೆ ದೇಶದ ಯಾವುದೇ ತನಿಖಾ ಸಂಸ್ಥೆಗಳು ಅಧಿಕೃತವಾಗಿ ತಿಳಿಸಿಲ್ಲ.

ಆದರೆ ಹಲವಾರು ವರದಿಗಳ ಪ್ರಕಾರ, ದಾವೂದ್‌ ಇಬ್ರಾಹಿಂ ಅಸ್ವಸ್ಥಗೊಂಡಿರುವುದು ನಿಜ. ಆತನಿಗೆ ಭಾರೀ ಭದ್ರತೆ ನಡುವೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ವಿಶಾಲ ಕೊಠಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಮಿಂಟ್‌ ಪತ್ರಿಕೆ ವರದಿ ಮಾಡಿದೆ.

1993ರಲ್ಲಿ ನಡೆದಿದ್ದ ಮುಂಬೈ ಸರಣಿ ಸ್ಪೋಟಗಳ ಮಾಸ್ಟರ್‌ಮೈಂಡ್‌ ಎಂದೇ ಗುರುತಿಸಿಕೊಂಡಿರುವ ದಾವೂದ್‌ ಇಬ್ರಾಹಿಂ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ. ಮುಂಬೈ ಸ್ಪೋಟ ಸರಣಿಯಲ್ಲಿ ಸುಮಾರು 250 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು.

ಈಗಾಗಲೇ ಮೋಸ್ಟ್‌ ವಾಟೆಂಡ್‌ ಪಟ್ಟಿಯಲ್ಲಿ ಆತನ ಹೆಸರು ಇದೆ. ಮೂರು ದಶಕದ ಹಿಂದೆ ಭಾರತದಿಂದ ಪರಾರಿಯಾದ ಇಬ್ರಾಹಿಂ ವಿವಿಧ ದೇಶಗಳಲ್ಲಿ ನೆಲೆಸಿ ಈಗ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ ಎನ್ನುವ ಮಾಹಿತಿಯಿದೆ.

ಭಾರತೀಯ ತನಿಖಾ ಸಂಸ್ಥೆಗಳಿಗೆ ದೊರೆತಿರುವ ಮಾಹಿತಿಗಳ ಪ್ರಕಾರ, ದಾವೂದ್‌ ಇಬ್ರಾಹಿಂ ಇರುವುದು ಪಾಕಿಸ್ತಾನ ಕರಾಚಿಯಲ್ಲಿ. ಅಲ್ಲಿನ ಅಪ್‌ಮಾರ್ಕೆಟ್‌ ಕ್ಲಿಫ್ಟಾನ್‌ ಪ್ರದೇಶದಲಲಿ ಆತನ ವಾಸ. ಆದರೆ ಪಾಕಿಸ್ತಾನವು ದಾವೂದ್‌ ಇಬ್ರಾಹಿಂನ ಕರಾಚಿ ವಾಸವನ್ನು ಅಲ್ಲಗಳೆಯುತ್ತಾ ಬಂದಿದೆ.

ಕಳೆದ ಜನವರಿಯಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ( NIA)ಗೆ ದಾವೂದ್‌ ಇಬ್ರಾಹಿಂ ಸಂಬಂಧಿ ನೀಡಿದ್ದ ಹೇಳಿಕೆಯಂತೆ, ಇಬ್ರಾಹಿಂ ಮತ್ತೊಂದು ಮದುವೆಯಾಗಿ ಪಾಕಿಸ್ತಾನದಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ. ಆತ ಅಲ್ಲಿ ಕುಟುಂಬದೊಂದಿಗೆ ಇದ್ದಾನೆ ಎಂದು ತಿಳಿದಿತ್ತು.

ದಾವೂದ್‌ ಇಬ್ರಾಹಂಗೆ ಎರಡನೇ ಮದುವೆಯಾಗಿದೆ. ಆಕೆ ಪಾಕಿಸ್ತಾನ್‌ ಪಠಾಣ್‌ ಕುಟುಂಬದವಳು. ಆಕೆಯ ಹೆಸರು ಮೈಝಬೀನ್.‌ ಅವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು ಮಗಳನ್ನು ಖ್ಯಾತ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಪುತ್ರ ಜುನೈದ್‌ ಮದುವೆಯಾಗಿದ್ದಾನೆ. ಇನ್ನೊಬ್ಬಳ ಮಗಳ ಮದುವೆಯಾಗಿದ್ದರೆ ಕೊನೆಯವಳ ಮದುವೆಯಾಗಿಲ್ಲ. ಮಗನ ಮದುವೆಯೂ ಆಗಿದೆ ಎನ್ನುವುದು ಇಬ್ರಾಹಿಂ ಸಹೋದರಿ ಪುತ್ರಿ ಆಲಿಷಾ ಪಾರ್ಕರ್‌ ನೀಡಿದ್ದ ಹೇಳಿಕೆ. ಇದನ್ನಾಧರಿಸಿಯೇ ಎನ್‌ಐಎ ಕಳೆದ ವರ್ಷ ಆರೋಪ ಪಟ್ಟಿಯನ್ನೂ ಸಲ್ಲಿಸಿದೆ.

ದಾವೂದ್‌ ಇಬ್ರಾಹಿಂ ಭಾರತದಲ್ಲಿ ಬಲವಾದ ನಂಟು ಹೊಂದಿದ್ದು, ಹಲವಾರು ಪಾತಕಿಗಳ ಮೇಲೆ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳ ಮೇಲೆ ದಾಳಿ ಮಾಡುವನ್ನು ನಡೆಸಿಕೊಂಡು ಬಂದಿದ್ದಾನೆ. ಈಗಲೂ ಮುಂಬೈನಲ್ಲಿ ಇಬ್ರಾಹಿಂನ ಬಿಗಿ ಹಿಡಿತ ಇದೆ. ಇಲ್ಲಿ ಶಸ್ತ್ರಾಸ್ತ್ರ, ಡ್ರಗ್ಸ್‌ ಸಾಗಣೆ ಹಿಂದೆ ಇವರ ಗುಂಪಿನ ಕರಿಛಾತೆ ಇದ್ದೇ ಇದೆ ಎಂದು ಜಾಗತಿಕ ಉಗ್ರ ಇಂಡೆಕ್ಸ್‌ನ ಹತ್ತನೇ ಆವೃತ್ತಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.