Visa-free travel: ಭಾರತದಿಂದ ಈ 57 ದೇಶಗಳಿಗೆ ಭೇಟಿ ನೀಡಲು ವೀಸಾ ಬೇಕಿಲ್ಲ, ಪಾಸ್‌ಪೋರ್ಟ್ ಇದ್ರೆ ಸಾಕು
Travel visa-free from India: 2022ರಲ್ಲಿ 87ನೇ ಸ್ಥಾನದಲ್ಲಿದ್ದ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕ 2023ರಲ್ಲಿ 80ನೇ ಸ್ಥಾನಕ್ಕೆ ಬಂದಿದೆ. 57 ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಬೇಕಿಲ್ಲ, ಪಾಸ್‌ಪೋರ್ಟ್ ಇದ್ರೆ ಸಾಕು.
ಭಾರತದ ಪಾಸ್‌ಪೋರ್ಟ್ ಶ್ರೇಯಾಂಕ ಸುಧಾರಿಸಿದೆ. ಭಾರತೀಯರನ್ನು ಪ್ರಪಂಚದ 57 ದೇಶಗಳಿಗೆ ಭೇಟಿ ನೀಡಲು ವೀಸಾ ಮುಕ್ತಗೊಳಿಸಿರುವುದು ಇದಕ್ಕೆ ಕಾರಣ. 2022ರಲ್ಲಿ 87ನೇ ಸ್ಥಾನದಲ್ಲಿದ್ದ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕ 2023ರಲ್ಲಿ 80ನೇ ಸ್ಥಾನಕ್ಕೆ ಬಂದಿದೆ. 57 ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಬೇಕಿಲ್ಲ, ಪಾಸ್‌ಪೋರ್ಟ್ ಇದ್ರೆ ಸಾಕು.
ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಜಪಾನ್ ಅನ್ನು ಹಿಂದಿಕ್ಕಿ ಸಿಂಗಾಪುರವು ಮೊದಲ ಸ್ಥಾನಕ್ಕೇರಿದೆ. ಸಿಂಗಾಪುರವು 192 ದೇಶಗಳಿಗೆ ತನ್ನ ಪ್ರಜೆಗಳನ್ನು ವೀಸಾ ಮುಕ್ತಗೊಳಿಸಿದೆ. 2ನೇ ಸ್ಥಾನದಲ್ಲಿರುವ ಜರ್ಮನಿ, ಇಟಲಿ ಮತ್ತು ಸ್ಪೇನ್ 190 ದೇಶಗಳಿಗೆ ಹಾಗೂ ಮೂರನೇ ಸ್ಥಾನಕ್ಕೆ ಕುಸಿದಿರುವ ಜಪಾನ್ 189 ರಾಷ್ಟ್ರಗಳಿಗೆ ತನ್ನ ಪ್ರಜೆಗಳನ್ನು ವೀಸಾ ಮುಕ್ತಗೊಳಿಸಿದೆ.
80ನೇ ಸ್ಥಾನದಲ್ಲಿ ಭಾರತದ ಜೊತೆ ಸೆನೆಗಲ್ ಮತ್ತು ಟೋಗೊ ದೇಶಗಳೂ ಇವೆ. ಭಾರತದ ನೆರೆಯ ಪಾಕಿಸ್ತಾನವು ಕೇವಲ 33 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡಿದ್ದು, ಕೊನೆಯಿಂದ ನಾಲ್ಕನೇ ಸ್ಥಾನದಲ್ಲಿದೆ.
ವೀಸಾ ಇಲ್ಲದೇ ಭಾರತೀಯರು ಭೇಟಿ ನೀಡಬಹುದಾದ 57 ರಾಷ್ಟ್ರಗಳು ಇವು:
ಏಷ್ಯಾ
- ಭೂತಾನ್
2. ಕಾಂಬೋಡಿಯಾ
3.ಇಂಡೋನೇಷ್ಯಾ
4. ಕಝಕಿಸ್ತಾನ್
5. ಲಾವೋಸ್
6. ಮಕಾವೊ (SAR ಚೀನಾ)
7. ಮಾಲ್ಡೀವ್ಸ್
8. ಮ್ಯಾನ್ಮಾರ್
9. ನೇಪಾಳ
10. ಶ್ರೀಲಂಕಾ
11. ಥೈಲ್ಯಾಂಡ್
12. ಟಿಮೋರ್-ಲೆಸ್ಟೆ
ಓಷಿಯಾನಿಯಾ
13. ಕುಕ್ ದ್ವೀಪಗಳು
14. ಫಿಜಿ
15. ಮಾರ್ಷಲ್ ದ್ವೀಪಗಳು
16. ಮೈಕ್ರೋನೇಶಿಯಾ
17. ನಿಯು
18. ಪಲಾವ್ ದ್ವೀಪಗಳು
19. ಸಮೋವಾ
20. ಟುವಾಲು
21. ವನವಾಟು
ಮಧ್ಯಪ್ರಾಚ್ಯ
22. ಇರಾನ್
23. ಜೋರ್ಡಾನ್
24. ಓಮನ್
25. ಕತಾರ್
ಕೆರಿಬಿಯನ್
26. ಬಾರ್ಬಡೋಸ್
27. ಬ್ರಿಟಿಷ್ ವರ್ಜಿನ್ ದ್ವೀಪಗಳು
28. ಡೊಮಿನಿಕಾ
29. ಗ್ರೆನಡಾ
30. ಹೈತಿ
31. ಜಮೈಕಾ
32. ಮಾಂಟ್ಸೆರಾಟ್
33. ಸೇಂಟ್ ಕಿಟ್ಸ್ ಮತ್ತು ನೆವಿಸ್
34. ಸೇಂಟ್ ಲೂಸಿಯಾ
35. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
36. ಟ್ರಿನಿಡಾಡ್ ಮತ್ತು ಟೊಬಾಗೊ
ಅಮೆರಿಕ
37. ಬೊಲಿವಿಯಾ
38. ಎಲ್ ಸಾಲ್ವಡಾರ್
ಆಫ್ರಿಕಾ
39. ಬುರುಂಡಿ
40. ಕೇಪ್ ವರ್ಡೆ ದ್ವೀಪಗಳು
41. ಕೊಮೊರೊ ದ್ವೀಪಗಳು
42. ಜಿಬೌಟಿ
43. ಗ್ಯಾಬೊನ್
44. ಗಿನಿ-ಬಿಸ್ಸೌ
45. ಮಡಗಾಸ್ಕರ್
46. ಮಾರಿಟಾನಿಯ
47. ಮಾರಿಷಸ್
48. ಮೊಜಾಂಬಿಕ್
49. ರುವಾಂಡಾ
50. ಸೆನೆಗಲ್
51. ಸೀಶೆಲ್ಸ್
52. ಸಿಯೆರಾ ಲಿಯೋನ್
53. ಸೊಮಾಲಿಯಾ
54. ಟಾಂಜಾನಿಯಾ
55. ಟೋಗೋ
56. ಟುನೀಶಿಯಾ
57. ಜಿಂಬಾಬ್ವೆ