ಕನ್ನಡ ಸುದ್ದಿ  /  Nation And-world  /  Internet Stunned After Mysterious Flying Spiral Spotted In Night Sky Over Hawaii

Blue Flying Spiral: OMG..! ರಾತ್ರಿ ಆಗಸದಲ್ಲಿ ನಿಗೂಢ ಸ್ಪೈರಲ್‌ ರಿಂಗ್‌ ಗೋಚರ: ನೀಲಿ ಬಣ್ಣದ "ಹಾರುವ ಸುರುಳಿ"ಯ ರಹಸ್ಯವೇನು?

ಕಳೆದ ಜ. 18ರ ನಸುಕಿನಲ್ಲಿ ಹವಾಯಿಯ ಮೌನಾ ಕಿಯಾ ಅಬ್ಸರ್ವೇಟರಿಯಲ್ಲಿ ಇರಿಸಲಾಗಿರುವ ಸುಬಾರು-ಅಸಾಹಿ ಸ್ಟಾರ್ ಕ್ಯಾಮೆರಾದಲ್ಲಿ, ವಿಸ್ಮಯಕಾರಿ ನೀಲಿ ಬಣ್ಣದ ಚಲಿಸುವ ಸುರಳಿಯಾಕಾರಾದ ವಸ್ತುವೊಂದು ಸೆರೆಯಾಗಿದೆ. ನೋಡಲು ಅಕ್ಷರಶ: ನಕ್ಷತ್ರಪುಂಜ(ಗ್ಯಾಲಕ್ಸಿ)ದ ಆಕಾರ ಹೊಂದಿರುವ ಈ ವಸ್ತು, ಆಗಸದಲ್ಲಿ ಹಾರುತ್ತಿರುವುದನ್ನು ಸುಬಾರು-ಅಸಾಹಿ ಸ್ಟಾರ್‌ ಕ್ಯಾಮೆರಾ ಸೆರೆಹಿಡಿದಿದೆ.

ವಿಸ್ಮಯಕಾರಿ ಹಾರುವ ಸುರುಳಿ
ವಿಸ್ಮಯಕಾರಿ ಹಾರುವ ಸುರುಳಿ (Verified Twitter)

ಹವಾಯಿ: ಬಾಹ್ಯಾಕಾಶ ವಿಸ್ಮಯಗಳ ಆಗರ. ಇಲ್ಲಿ ನಡೆಯುವ ವಿದ್ಯಮಾನಗಳು ಮಾನವನನ್ನು ಅಚ್ಚರಿಗೆ ದೂಡುತ್ತವೆ. ಆದರೆ ಈ ವಿಸ್ಮಯಗಳೇ ವಿಶ್ವ ರಚನೆಯ ಸತ್ಯವನ್ನು ಮಾನವನಿಗೆ ತಿಳಿಸಿಕೊಡುತ್ತವೆ. ಇಂತದ್ದೇ ಒಂದು ವಿಸ್ಮಯಕಾರಿ ವಿದ್ಯಮಾನವೊಂದು ಹವಾಯಿಯಲ್ಲಿ ನಡೆದಿದೆ.

ಕಳೆದ ಜ. 18ರ ನಸುಕಿನಲ್ಲಿ ಹವಾಯಿಯ ಮೌನಾ ಕಿಯಾ ಅಬ್ಸರ್ವೇಟರಿಯಲ್ಲಿ ಇರಿಸಲಾಗಿರುವ ಸುಬಾರು-ಅಸಾಹಿ ಸ್ಟಾರ್ ಕ್ಯಾಮೆರಾದಲ್ಲಿ, ವಿಸ್ಮಯಕಾರಿ ನೀಲಿ ಬಣ್ಣದ ಚಲಿಸುವ ಸುರಳಿಯಾಕಾರಾದ ವಸ್ತುವೊಂದು ಸೆರೆಯಾಗಿದೆ. ನೋಡಲು ಅಕ್ಷರಶ: ನಕ್ಷತ್ರಪುಂಜ(ಗ್ಯಾಲಕ್ಸಿ)ದ ಆಕಾರ ಹೊಂದಿರುವ ಈ ವಸ್ತು, ಆಗಸದಲ್ಲಿ ಹಾರುತ್ತಿರುವುದನ್ನು ಸುಬಾರು-ಅಸಾಹಿ ಸ್ಟಾರ್‌ ಕ್ಯಾಮೆರಾ ಸೆರೆಹಿಡಿದಿದೆ.

ಮೊದಲು ಆಗಸದಲ್ಲಿ ನೀಲಿ ಬಣ್ಣದ ವಸ್ತುವೊಂದು ಹಾರುತ್ತಿರುವುದನ್ನು ಕ್ಯಾಮರಾದಲ್ಲಿ ನೋಡಬಹುದಾಗಿದೆ. ಈ ವಸ್ತು ಬಳಿಕ ಸುರುಳಿಯಾಕಾರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತದನಂತರ ಗ್ಯಾಲಕ್ಸಿಯ ಆಕಾರದಲ್ಲಿ ಸಂಚರಿಸುತ್ತಾ ಕೆಲ ಸಮಯದ ಬಳಿಕ ಕಣ್ಮರೆಯಾಗುತ್ತದೆ.

ಈ ಹಾರುವ ಸುರುಳಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕೆಲವರು ಇದನ್ನು ಗ್ಯಾಲಕ್ಸಿ ಎಂದು ಕರೆದರೆ ಮತ್ತೆ ಕೆಲವರು ಇದು ಪರಗ್ರಹ ಜೀವಿಗಳ ಯಾನ ಇರಬಹುದು ಎಂದು ಅಂದಾಜಿಸಿದ್ದಾರೆ. ವಿಜ್ಞಾನ ಲೋಕ ಕೂಡ ಈ ವಿಚಿತ್ರ ವಿದ್ಯಮಾನದ ಕುರಿತು ಉತ್ತರ ಕಂಡುಕೊಳ್ಳಲು ಪ್ರಯತ್ನ ನಡಸಿದೆ.

ಜಪಾನ್ ರಾಷ್ಟ್ರೀಯ ಖಗೋಳ ವೀಕ್ಷಣಾಲಯ (ಎನ್‌ಎಒಜೆ) ಪ್ರಕಾರ, ಸ್ಪೇಸ್‌ ಎಕ್ಸ್ ರಾಕೆಟ್ ಉಡಾವಣೆ ಸಂದರ್ಭದಲ್ಲಿ ಹೊರಬಂದ ಘನೀಕೃತ ಇಂಧನ ಹೀಗೆ ಸುರುಳಿಯಾಕಾರವನ್ನು ಪಡೆದುಕೊಂಡಿದೆ ಎಂದು ಹೇಳಿದೆ. "ಈ ಸುರುಳಿಯು ಸ್ಪೇಸ್ ಎಕ್ಸ್ ಕಂಪನಿಯ ಹೊಸ ಉಪಗ್ರಹ ಉಡಾವಣೆಗೆ ಸಂಬಂಧಿಸಿರಬಹುದು.." ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಅಂದಾಜಿಸಿದೆ.

ಸ್ಪೇಸ್ ಡಾಟ್ ಕಾಂ ಪ್ರಕಾರ, ಜನವರಿ 18ರಂದು ಫ್ಲೋರಿಡಾದ ಕೇಪ್ ಕ್ಯಾನಾವೆರಾಲ್ ಸ್ಪೇಸ್ ಫೋರ್ಸ್ ಸ್ಟೇಷನ್‌ನಿಂದ ಫಾಲ್ಕನ್ 9 ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಫಾಲ್ಕನ್ 9 ರಾಕೆಟ್ ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ವಿಸರ್ಜಿಸುವ ಹಂತದಲ್ಲಿ, ಇಂತಜ ಸುರುಳಿಗಳು ಉಂಟಾಗುತ್ತವೆ. ಈ ಹಿಂದೆಯೂ ರಾಕೆಟ್‌ ಉಡಾವಣೆ ಬಳಿಕ ಇದೇ ರೀತಿಯ ಸುರುಳಿಗಳು ಕಂಡುಬಂದಿದ್ದವು ಎಂದು ವರದಿ ತಿಳಿಸಿದೆ.

ಒಟ್ಟಿನಲ್ಲಿ ಈ ನಿಗೂಢ ಬ್ಲೂ ಸ್ಪೈರಲ್‌ ರಿಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆಗಸದಲ್ಲಿ ನಡೆಯುವ ವಿಸ್ಮಯಕಾರಿ ವಿದ್ಯಮಾನಗಳ ಬಗ್ಗೆ ತರಹೇವಾರಿ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇಂದಿನ ಪ್ರಮುಖ ಸುದ್ದಿಗಳು

US-China War: 2025ರಲ್ಲಿ ಚೀನಾದ ವಿರುದ್ಧ ಯುದ್ಧ ಘೋಷಣೆಯಾಗಲಿದೆ: ಇದು ಅಮೆರಿಕದ ಅಧಿಕಾರಿಯ ಭವಿಷ್ಯವಾಣಿ!

2025ರಲ್ಲಿ ಅಮೆರಿಕ-ಚೀನಾ ನಡುವೆ ನೇರ ಯುದ್ಧ ನಡೆಯಲಿದ್ದು, ಈ ಯುದ್ಧ ಖಂಡಿತವಾಗಿಯೂ ಘೋರವಾಗಲಿದೆ ಎಂದು ಅಮೆರಿಕದ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆದರೆ ಪೆಂಟಗನ್‌ ಈ ಅಧಿಕಾರಿಯ ಅಭಿಪ್ರಾಯವನ್ನು ತಳ್ಳಿ ಹಾಕಿದ್ದು, ಇದು ಅಮೆರಿಕದ ಮಿಲಿಟರಿಯ ಮೌಲ್ಯಮಾಪನದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

S Jaishankar: ನಿಮ್ಮ ಸರ್ಕಾರವನ್ನು "ಕ್ರಿಶ್ಚಿಯನ್‌ ರಾಷ್ಟ್ರವಾದಿ"ಎಂದೇಕೆ ಕರೆಯುವುದಿಲ್ಲ?: ವಿದೇಶಿ ಮಾಧ್ಯಮಗಳ ನಶೆ ಇಳಿಸಿದ ಜೈಶಂಕರ್!‌

ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು "ಹಿಂದೂ ರಾಷ್ಟ್ರೀಯತಾವಾದಿ" ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್‌ ರಾಷ್ಟ್ರಗಳ ಸರ್ಕಾರಗಳನ್ನು ಅವರು "ಕ್ರಿಶ್ಚಿಯನ್‌ ರಾಷ್ಟ್ರವಾದಿ" ಎಂದೇಕೆ ಕರೆಯುವುದಿಲ್ಲ ಎಂಬುದು ತಿಳಿಯದಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.‌ ಜೈಶಂಕರ್‌ ಗುಡುಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ