ಮತ್ತೆ ಐಆರ್‌ಸಿಟಿಸಿ ವೆಬ್‌ಸೈಟ್ ಡೌನ್; ಹೊಸ ವರ್ಷ ಪ್ರವಾಸಕ್ಕೆಂದು ಬುಕ್ಕಿಂಗ್ ಮಾಡುವವರಿಗೆ ಕಿರಿಕಿರಿ
IRCTC Down: ರೈಲ್ವೆ ಇಲಾಖೆಯ ಪ್ರಮುಖ ಬುಕ್ಕಿಂಗ್ ಸೇವೆಯ ಐಆರ್‌ಸಿಟಿಸಿ ವೆಬ್‌ಸೈಟ್ ಮಂಗಳವಾರ ಬೆಳಿಗ್ಗೆಯೂ ತೊಂದರೆಗೆ ಸಿಲುಕಿ ಪ್ರಯಾಣಿಕರಿಗೆ ಅಡಚಣೆಯಾಯಿತು.
ದೆಹಲಿ: ಕಳೆದ ಕೆಲವು ದಿನಗಳಿಂದ ಮೂರ್ನಾಲ್ಕು ಬಾರಿ ತಾಂತ್ರಿಕ ಕಾರಣಗಳಿಗೆ ಗಂಟೆಗಟ್ಟಲೇ ಸ್ಥಗಿತಗೊಂಡು ಟಿಕೆಟ್ ಬುಕ್ಕಿಂಗ್ ಮಾಡುವವರು ಹಾಗೂ ರೈಲ್ವೆ ಸೇವೆ ಪಡೆಯುವವರಿಗೆ ಅಡಚಣೆಯಾಗಿದ್ದ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತೆ ಕೈ ಕೊಟ್ಟಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಐಆರ್‌ಸಿಟಿಸಿ ವೆಬ್‌ಸೈಟ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಅದೂ ಹೊಸ ವರ್ಷಾಚರಣೆ ವೇಳೆ ಬುಕ್ಕಿಂಗ್‌ಗೆ ಮುಂದಾಗುತ್ತಿರುವ ಸಹಸ್ರಾರು ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಿದರು. ಅಲ್ಲದೇ ರೈಲ್ವೆ ಅಧಿಕಾರಿಗಳು ಹಾಗೂ ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವವರ ವಿರುದ್ದವೂ ಆಕ್ರೋಶ ಹೊರ ಹಾಕಿದರು. ವೆಬ್‌ಸೈಟ್ ಮತ್ತೊಮ್ಮೆ ಸ್ಥಗಿತವನ್ನು ಎದುರಿಸಿದ್ದರಿಂದ ಬಳಕೆದಾರರು ನಿಗದಿತ ಅವಧಿಗೆ ಮಾತ್ರ ನೀಡುವ ತಮ್ಮ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಕಷ್ಟಪಡಬೇಕಾಯಿತು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳನ್ನು ಹಂಚಿಕೊಡ ಹಲವರು ಬೇಸರ ವ್ಯಕ್ತಪಡಿಸಿದರು. ಐಆರ್‌ಸಿಟಿಸಿ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿರುವ ಬಳಕೆದಾರರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಅಲಭ್ಯತೆ ಅಥವಾ ದೋಷ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.
ಬೆಳಿಗ್ಗೆಯೇ ತತ್ಕಾಲ್ ಸಹಿತ ವಿವಿಧ ರೀತಿಯ ಬುಕ್ಕಿಂಗ್‌ಗೆ ಪ್ರಯಾಣಿಕರು ಮುಂದಾದರು. ಆದರೆ ಐಆರ್‌ಸಿಟಿಸಿ ವೆಬ್ ಸೈಟ್ ಕೆಲವರಿಗೆ ತೆರೆದುಕೊಳ್ಳಲಿಲ್ಲ. ಕೆಲವು ಹೊತ್ತು ಪ್ರಯತ್ನಿಸಿದರೂ ಅಡಚಣೆ ಮಾತ್ರ ಮುಂದುವರೆಯಿತು. ಕೆಲವರು ರೈಲ್ವೆ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಅಲ್ಲಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ.
ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿನ ದೋಷಕ್ಕೆ ನಂತರ ಸಂದೇಶವನ್ನೂ ಸ್ಕ್ರೀನ್ ನಲ್ಲಿ ಪ್ರಕಟಿಸಲಾಯಿತು., “ಎಲ್ಲಾ ಸೈಟ್‌ಗಾಗಿ ಬುಕಿಂಗ್ ಮತ್ತು ರದ್ದುಗೊಳಿಸುವಿಕೆ ಮುಂದಿನ ಗಂಟೆಯವರೆಗೆ ಲಭ್ಯವಿರುವುದಿಲ್ಲ. ಉಂಟಾದ ಅನಾನುಕೂಲತೆಗಾಗಿ ತೀವ್ರವಾಗಿ ವಿಷಾದಿಸುತ್ತೇವೆ ಎಂದು ತಿಳಿಸಲಾಯಿತು.
ಕೆಲ ದಿನಗಳ ಹಿಂದೆ ಇದೇ ರೀತಿ ಐಆರ್‌ಸಿಟಿಸಿ ವೆಬ್‌ಸೈಟ್ ಡೌನ್ ಆಗಿತ್ತು. ಐಆರ್ ಸಿಟಿಸಿ ಹೊಸ ವೆಬ್‌ಸೈಟ್ ಅನ್ನು ರೂಪಿಸುತ್ತಿದೆ. ಇದರಿಂದ ಅಡಚಣೆಯಾಗಿದೆ ಎಂದು ತಿಳಿಸಿತ್ತು. ಇದಾದ ಬಳಿಕ ಮತ್ತೆ ಅಂತಹದ್ದೇ ಅನುಭವ ಆಗಿದೆ.
ನಾವು ರಜೆಗಳಿಗೆ ಬುಕ್ ಮಾಡುತಿದ್ದೆವು. ತತ್ಕಾಲ್ ಟಿಕೆಟ್ ಪಡೆದು ಪ್ರಯಾಣ ಆರಂಭಿಸಬೇಕಿತ್ತು. ಟಿಕೆಟ್ ಸಕಾಲದಲ್ಲಿ ಸಿಗದೇ ಇದ್ದರೆ ನಮ್ಮ ಪ್ರಯಾಣ ಅಡಚಣೆಯಾಗಲಿದೆ ಎಂದು ಹಲವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಅಪ್ಲಿಕೇಶನ್ ಮತ್ತು ವೆಬ್ ಎರಡೂ ಕ್ರ್ಯಾಶ್ ಆಗಿದೆ, ಕ್ಯಾಪ್ಚಾ ಸರ್ವರ್ ಕ್ರ್ಯಾಶ್ ಆಗಿದೆ, ಅವರು ಕ್ಯಾಪ್ಚಾ2.0 ಬಳಸುವುದನ್ನು ನಿಲ್ಲಿಸಬೇಕು ಮತ್ತು ಕ್ಲೌಡ್‌ಗೆ ಬದಲಾಗಬೇಕು. ಇಂದಿನ ಕ್ಲೌಡ್ ಜಗತ್ತಿನಲ್ಲಿ ಅವರು ಡೇಟಾಸೆಂಟರ್ ಮತ್ತು ಸರ್ವರ್‌ಗಳನ್ನು ಏಕೆ ಬಳಸುತ್ತಾರೆ ಇದು ಸ್ವೀಕಾರಾರ್ಹವಲ್ಲ ಎಂದು ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಐಆರ್‌ಸಿಟಿಸಿಯದ್ದು ಇಂತಹ ಬೆಳವಣಿಗೆ ಹೊಸದೇನೂ ಅಲ್ಲ. ಒಂದು ದಶಕದಿಂದ ನೋಡುತ್ತಿದ್ದೇನೆ. ತತ್ಕಾಲ್ ಟಿಕೆಟ್ ಪಡೆಯುವಾಗಲೇ ಹೀಗೆ ಸರ್ವರ್ ಡೌನ್ ಆಗುವುದು ಏಕೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹತಾಶೆಗೊಂಡ ಬಳಕೆದಾರರೊಬ್ಬರು ಈ ಮೂಲಕ 'ವಂಚನೆ' ನಡೆಯುತ್ತಿದೆ ಎಂಬ ಆರೋಪಗಳನ್ನು ಮಾಡಿದರು, "ಇದು ಖಂಡಿತವಾಗಿಯೂ ಹಗರಣವಾಗಿದೆ. ಪ್ರತಿ ಬಾರಿಯೂ ಅದೇ ಸಮಸ್ಯೆಗಳ ಹೊರತಾಗಿಯೂ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
ವಿಭಾಗ