Tatkal Ticket Booking: ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ, ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tatkal Ticket Booking: ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ, ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು

Tatkal Ticket Booking: ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ, ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು

Tatkal Ticket Booking: ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಹೀಗೊಂದು ಪ್ರಶ್ನೆ ಸಾಮಾಜಿಕ ತಾಣಗಳಲ್ಲಿ ಬಹಳ ಚರ್ಚೆಗೆ ಒಳಗಾಗಿದೆ. ಈ ಬಗ್ಗೆ ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು ಎಂಬ ವಿವರ ಇಲ್ಲಿದೆ.

ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ ಎಂಬ ಚರ್ಚೆ ಗಮನಿಸಿದ ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. (ಸಾಂಕೇತಿಕ ಚಿತ್ರ)
ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ ಎಂಬ ಚರ್ಚೆ ಗಮನಿಸಿದ ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. (ಸಾಂಕೇತಿಕ ಚಿತ್ರ)

Tatkal Ticket Booking: ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಈ ರೀತಿ ಚರ್ಚೆಯೊಂದು ಭಾರಿ ಗಮನಸೆಳೆದಿದೆ. ನಿತ್ಯವೂ ಕೋಟ್ಯಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವ ಕಾರಣ ಈ ಪ್ರಶ್ನೆ ಸಹಜವಾಗಿಯೇ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಇದನ್ನು ಗಮನಿಸಿದ, ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆ ಕುರಿತು ಭಾರತೀಯ ರೈಲ್ವೆ, ಐಆರ್‌ಸಿಟಿಸಿ ಏಪ್ರಿಲ್ 11 ರಂದು ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ

ಸೋಷಿಯಲ್ ಮೀಡಿಯಾಗಳಲ್ಲಿ ಎಸಿ ಮತ್ತು ನಾನ್ ಎಸಿ ಕೋಚ್‌ಗಳ ತತ್ಕಾಲ್ ಟಿಕೆಟ್‌ ಬುಕಿಂಗ್ ಸಮಯವನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಹೀಗಾಗಿ, ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಎಂಬ ಬಗ್ಗೆ ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ, ಅಂತಹ ವರದಿಗಳು ಮತ್ತು ಪೋಸ್ಟ್‌ಗಳನ್ನು ನಿರಾಕರಿಸಿತು.

ಕೆಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್‌ ಟಿಕೆಟ್‌ಗಳಿಗೆ ವಿಭಿನ್ನ ಸಮಯದ ವಿಚಾರವನ್ನು ಪ್ರಸ್ತಾಪಿಸಿವೆ. ಎಸಿ ಅಥವಾ ನಾನ್‌ ಎಸಿ ಕೋಚ್‌ಗಳ ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್‌ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂತಹ ಯಾವುದೇ ಪ್ರಸ್ತಾಪವೂ ಇಲಾಖೆ ಮುಂದಿಲ್ಲ ಎಂದು ಐಆರ್‌ಸಿಟಿಸಿ ಟ್ವೀಟ್ ಮಾಡಿದೆ.

ಭಾರತೀಯ ರೈಲ್ವೆಯೂ ಏಪ್ರಿಲ್ 11ರಂದು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಎಸಿ ಅಥವಾ ನಾನ್‌ ಎಸಿ ಕೋಚ್‌ಗಳ ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್‌ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ತತ್ಕಾಲ್ ಇ-ಟಿಕೆಟ್ ಬುಕ್ಕಿಂಗ್ ಸಮಯ

ಭಾರತೀಯ ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ, ತತ್ಕಾಲ್ ಇ ಟಿಕೆಟ್ ಬುಕ್ಕಿಂಗ್ ಮಾಡುವಾಗ ಕೆಲವು ಆಯ್ದ ರೈಲುಗಳ ಟಿಕೆಟ್ ಬುಕ್ ಮಾಡಲು ಒಂದು ದಿನ ಮುಂಚಿತವಾಗಿ ಮಾತ್ರ ಸಾಧ್ಯವಿದೆ. ಅದೂ ರೈಲು ಪ್ರಯಾಣದ ದಿನಾಂಕದ ಒಂದು ದಿನ ಮುಂಚಿತವಾಗಿ ಪ್ರಯಾಣ ಆರಂಭಿಸುವ ನಿಲ್ದಾಣದಿಂದ ತತ್ಕಾಲ್ ಟಿಕೆಟ್ ಕಾಯ್ದಿರಿಸುವುದರ ಹೊರತಾಗಿ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ತತ್ಕಾಲ್ ಇ- ಟಿಕೆಟ್‌ಗಳನ್ನು ಎಸಿ ಕೋಚ್‌ (2A/3A/CC/EC/3E) ಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಮತ್ತು ನಾನ್ ಎಸಿ ಕೋಚ್‌ (SL/FC/25) ಟಿಕೆಟ್‌ಗಳನ್ನು ಬೆಳಿಗ್ಗೆ 11 ಗಂಟೆಯಿಂದ ಬುಕ್ ಮಾಡಬಹುದು. ಉದಾಹರಣೆಗೆ ಒಂದು ರೈಲು ತನ್ನ ಮೂಲ ನಿಲ್ಧಾಣದಿಂದ ಆಗಸ್ಟ್ 2 ರಂದು ಬೆಳಿಗ್ಗೆ ಹೊರಡುತ್ತದೆ ಎಂದಾದರೆ, ಆಗಸ್ಟ್ 1 ರ ಬೆಳಿಗ್ಗೆ 10 ಗಂಟೆಯಿಂದ ಎಸಿ ಕೋಚ್‌ (2A/3A/CC/EC/3E) ಗಳಿಗೆ, ಬೆಳಿಗ್ಗೆ 11 ಗಂಟೆಯಿಂದ ನಾನ್ ಎಸಿ ಕೋಚ್‌ (SL/FC/25)ಗಳಿಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಐಆರ್‌ಸಿಟಿಸಿ ಹೇಳಿದೆ.

ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡಿದರೆ ಟಿಕೆಟ್ ಕನ್‌ಫರ್ಮ್ ಆಗುತ್ತಾ

ಬುಕಿಂಗ್ ಮಾರ್ಗಸೂಚಿಗಳ ಪ್ರಕಾರ ಬಳಕೆದಾರರು ತತ್ಕಾಲ್‌ ಸೌಲಭ್ಯದ ಮೂಲಕ ಟಿಕೆಟ್ ಕಾಯ್ದಿರಿಸಿದಾಗ, ಎಸಿ ಪ್ರಥಮ ದರ್ಜೆ ಹೊರತುಪಡಿಸಿ, ರೈಲಿನಲ್ಲಿರುವ ಯಾವುದೇ ಕೋಚ್‌ನಲ್ಲಿ ಕನ್‌ಫರ್ಮ್ ಅಥವಾ ವೇಟಿಂಗ್ ಲಿಸ್ಟ್‌ ಟಿಕೆಟ್ ಹಂಚಿಕೆ ಮಾಡುತ್ತಾರೆ.

ಐಆರ್‌ಸಿಟಿಸಿ ಪೋಸ್ಟ್‌ ಪ್ರಕಾರ, ತತ್ಕಾಲ್ ಟಿಕೆಟ್ ಬುಕಿಂಗ್ ಸೌಲಭ್ಯದಲ್ಲಿ ತತ್ಕಾಲ್ ಕೋಟಾದ ಮೂಲಕ ಕನ್‌ಫರ್ಮ್ಡ್ ಅಥವಾ ವೇಟಿಂಗ್ ಲಿಸ್ಟ್‌ ಟಿಕೆಟ್‌ಗಳನ್ನು ವಿತರಿಸುತ್ತದೆ. 1ಎಸಿ ಕೋಚ್ ಬಿಟ್ಟು ಉಳಿದ ಕೋಚ್‌ಗಳ ಆಸನ ಲಭ್ಯತೆ ನೋಡಿಕೊಂಡು ಟಿಕೆಟ್ ವಿತರಿಸುವ ಕೆಲಸವನ್ನು ಭಾರತೀಯ ರೈಲ್ವೆ ಮಾಡುತ್ತದೆ. ತತ್ಕಾಲ್‌ ಸೌಲಭ್ಯದಲ್ಲಿ ಪ್ರಯಾಣಿಕರು ಇ-ಟಿಕೆಟ್‌ಗಾಗಿ ಪಿಎನ್‌ಆರ್ ಬುಕಿಂಗ್‌ಗೆ ಗರಿಷ್ಠ ನಾಲ್ಕು ಪ್ರಯಾಣಿಕರನ್ನು ಕಾಯ್ದಿರಿಸಬಹುದು ಮತ್ತು ಸಾಮಾನ್ಯ ಟಿಕೆಟ್‌ಗಳ ಜೊತೆಗೆ ಪ್ರತಿ ಪ್ರಯಾಣಿಕರಿಗೆ ತತ್ಕಾಲ್‌ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.