ಕನ್ನಡ ಸುದ್ದಿ  /  Nation And-world  /  Isro Launches India's Largest Lvm3 Rocket With 36 Satellites

ISRO LVM3 rocket: ಇಸ್ರೋದಿಂದ ಭಾರತದ ಬೃಹತ್‌ ರಾಕೆಟ್‌ ಉಡಾವಣೆ, 36 ಉಪಗ್ರಹಗಳನ್ನು ಹೊತ್ತು ನಭಕ್ಕೆ ನೆಗೆದ ಮಾರ್ಕ್‌ -3

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಇಂದು ಬೆಳಗ್ಗೆ ಭಾರತದ ಉಡ್ಡಯನ ವಾಹನ ಮಾರ್ಕ್‌ -3 (LVM-III) ನಭಕ್ಕೆ ನೆಗೆದಿದೆ.

ISRO LVM3 rocket: ಇಸ್ರೋದಿಂದ ಭಾರತದ ಬೃಹತ್‌ ರಾಕೆಟ್‌ ಉಡಾವಣೆ, 36 ಉಪಗ್ರಹಗಳನ್ನು ಹೊತ್ತೊಯ್ದು ನಭಕ್ಕೆ ನೆಗೆದ ಮಾರ್ಕ್‌ -3
ISRO LVM3 rocket: ಇಸ್ರೋದಿಂದ ಭಾರತದ ಬೃಹತ್‌ ರಾಕೆಟ್‌ ಉಡಾವಣೆ, 36 ಉಪಗ್ರಹಗಳನ್ನು ಹೊತ್ತೊಯ್ದು ನಭಕ್ಕೆ ನೆಗೆದ ಮಾರ್ಕ್‌ -3

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಭಾರತದ ಬೃಹತ್‌ ಉಡ್ಡಯನ ವಾಹನ Mark-III (LVM3)ಯನ್ನು ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಒನ್‌ ವೆಬ್‌ ಇಂಡಿಯಾ-3 ಮಿಷನ್‌ಗಾಗಿ 36 ಉಪಗ್ರಹಗಳನ್ನು ತನ್ನ ಒಡಲಲ್ಲಿ ಒಟ್ಟುಕೊಂಡ ಈ ರಾಕೆಟ್‌ ಆಂಧ್ರಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ನೆಗೆದಿದೆ.

ಎಲ್‌ವಿಎಂ3 ರಾಕೆಟ್‌ನ ಎರಡನೇ ವಾಣಿಜ್ಯ ಉಡಾವಣೆಯ ಕ್ಷಣಗಣನೆಯನ್ನು ಶನಿವಾರ ಆರಂಭಿಸಲಾಗಿತ್ತು. 43.5 ಮೀಟರ್ ಎತ್ತರದ ರಾಕೆಟ್ ಅನ್ನುಇಂದು ಬೆಳಗ್ಗೆ 9 ಗಂಟೆಗೆ ಲಾಂಚ್‌ ಮಾಡಲಾಯಿತು. 5,805 ಕೆಜಿ ತೂಕದ 36 ಮೊದಲ ತಲೆಮಾರಿನ ಉಪಗ್ರಹಗಳನ್ನು ಸುಮಾರು 87.4 ಡಿಗ್ರಿಗಳ ಇಳಿಜಾರಿನೊಂದಿಗೆ 450 ಕಿಲೋಮೀಟರ್ ವೃತ್ತಾಕಾರದ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಂಗ್ಲೆಂಡ್‌ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್‌ನ (ಒನ್‌ವೆಬ್) 36 ಉಪಗ್ರಹಗಳನ್ನು ಇಂದು ಕೆಳ ಭೂಸ್ಥಾಯಿ ಕಕ್ಷೆಯಲ್ಲಿ (ಎಲ್‌ಇಒ) ಎಲ್‌ವಿಎಂ -III ಇಳಿಸಲಿದೆ. ಒನ್‌ವೆಬ್‌ ಗ್ರೂಪ್‌ನ 72 ಉಪಗ್ರಹಗಳನ್ನು ಕೆಳಭೂಸ್ಥಾಯಿ ಕಕ್ಷೆಗೆ ತಲುಪಿಸುವ ಒಪ್ಪಂದವನ್ನು ಈ ಕಂಪನಿಯು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಮಾಡಿಕೊಂಡಿದೆ.

ಒನ್‌ವೆಬ್‌ ಎನ್ನುವುದು ಸರಕಾರ ಮತ್ತು ವ್ಯವಹಾರಗಳಿಗೆ ಜಾಗತಿಕ ಸಂವಹನ ಜಾಲ ರೂಪಿಸುವ ಜಾಗತಿಕ ಸಂವಹನ ಜಾಲವಾಗಿದೆ. ಒನ್‌ವೆಬ್‌ಗೆ ಭಾರ್ತಿ ಎಂಟರ್‌ಪ್ರೈಸಸ್‌ ಪ್ರಮುಖ ಹೂಡಿಕೆದಾರ ಕಂಪನಿಯಾಗಿದೆ. ಈಗಾಗಲೇ ಒನ್‌ ವೆಬ್‌ನ ಮೊದಲ ಹಂತದ ಉಪಗ್ರಹಗಳನ್ನು ಇಸ್ರೊ ರಾಕೆಟ್‌ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿದೆ. ಫೆಬ್ರವರಿಯಲ್ಲಿ SSLV-D2/EOS07 ಉಡಾವಣೆ ಮಾಡಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ 35 ಒನ್‌ವೆಬ್‌ ಉಪಗ್ರಹಗಳನ್ನು ತನ್ನ ಬೃಹತ್‌ ರಾಕೆಟ್‌ ಜಿಎಸ್‌ಎಲ್‌ವಿ ಮಾರ್ಕ್‌ 3 ಮೂಲಕ ನಿಗದಿತ ಕಕ್ಷೆಗೆ ತಲುಪಿಸಿತ್ತು.

ಒನ್‌ವೆಬ್‌ ಪ್ರಾಜೆಕ್ಟ್‌ ಭಾರತಕ್ಕೆ ಅತ್ಯಂತ ಮಹತ್ವದ ಪ್ರಾಜೆಕ್ಟ್‌ ಆಗಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ವಾಣಿಜ್ಯ ಉಡಾವಣಾ ಮಾರುಕಟ್ಟೆಗೆ ಪ್ರವೇಶಿಸಿದಂತಾಗಿದೆ. ಈ ರೀತಿ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ವಾಣಿಜ್ಯ ವ್ಯವಹಾರದಲ್ಲಿ ಅಮೆರಿಕ ಮತ್ತು ಐರೋಪ್ಯ ಕಂಪನಿಗಳು ಪಾರಮ್ಯ ಪಡೆದಿದ್ದವು. ಈ ಹಿಂದೆಯೂ ಕೆಲವು ವಾಣಿಜ್ಯ ಉದ್ದೇಶದ ಉಡಾವಣೆಗಳನ್ನು ಇಸ್ರೊ ಕೈಗೊಂಡಿದೆ. ಹಲವು ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಒನ್‌ವೆಬ್‌ ಎನ್ನುವುದು ಜಾಗತಿಕ ಸಂವಹನ ನೆಟ್ವರ್ಕ್‌ ಆಗಿದೆ. ಇದು ಬಾಹ್ಯಾಕಾಶದಿಂದ ಭೂಮಿಗೆ ಇಂಟರ್ನೆಟ್‌ ಒದಗಿಸಲಿದೆ. ಸರಕಾರಗಳಿಗೆ, ವ್ಯವಹಾರಗಳಿಗೆ ಮತ್ತು ಸಮುದಾಯಗಳಿಗೆ ಅಂತರಿಕ್ಷದಿಂದ ಭೂಮಿಗೆ ಇಂಟರ್‌ನೆಟ್‌ ಒದಗಿಸುವ ಉದ್ದೇಶವನ್ನು ಒನ್‌ವೆಬ್‌ ಹೊಂದಿದೆ.

ಭೂಮಿಯ ಕೆಳಸ್ಥಾಯಿ ಕಕ್ಷೆಯಲ್ಲಿ ಹನ್ನೆರಡು ಆರ್ಬಿಟಲ್‌ ವಿಮಾನಗಳಲ್ಲಿ ಈ ಉಪಗ್ರಹಗಳು ಇರಲಿವೆ. ಈ ಕಕ್ಷೀಯ ವಿಮಾನಗಳಲ್ಲಿ ತಲಾ 49 ಉಪಗ್ರಹಗಳನ್ನು ಅಳವಡಿಸುವ ಯೋಜನೆಯನ್ನು ಒನ್‌ವೆಬ್‌ ಹೊಂದಿದೆ. ಈ ಮೂಲಕ ಅಂತರಿಕ್ಷದಲ್ಲಿ ಒಟ್ಟು 648 ಉಪಗ್ರಹಗಳು ಇರಬೇಕಿರುತ್ತದೆ.

ಜಿಎಸ್‌ಎಲ್‌ವಿ ಮಾರ್ಕ್‌ 3 ರಾಕೆಟ್‌ ಎನ್ನುವುದು ಮೂರು ಹಂತದ ಭಾರಿ ಲಿಫ್ಟ್‌ ಲಾಂಚ್‌ ವೆಹಿಕಲ್‌. ಇದರಲ್ಲಿ ಎರಡು ಹಂತದ ಸಾಲಿಡ್‌ ಸ್ಟ್ರಾಪ್‌ ಆನ್‌ ಮೋಟಾರ್‌ಗಳು ಇವೆ. ಅಂದರೆ, ಸಾಲಿಡ್‌ ಇಂಧನಗಳನ್ನು ಉರಿಸಿ ಚಾಲು ಆಗುವ ವ್ಯವಸ್ಥೆಯಿದೆ. ಜತೆಗೆ, ಕೋರ್‌ ಸ್ಟೇಜ್‌ ಲಿಕ್ವಿಡ್‌ ಬೂಸ್ಟರ್‌ ಇದೆ. ಅಂದರೆ, ಲಿಕ್ವಿಡ್‌ ಇಂಧನಗಳನ್ನು ಉರಿಸಲು ಬಳಕೆಯಾಗುತ್ತದೆ. ಇದರೊಂದಿಗೆ ಮೇಲ್ಮಟ್ಟದಲ್ಲಿ ಕ್ರಯೋಜೆನಿಕ್‌ ಎಂಜಿನ್‌ ಇದೆ. ಇದು ಲಿಕ್ವಿಡ್‌ ಆಕ್ಸಿಜನ್‌ ಒಳಗೊಂಡ ಲಿಕ್ವಿಡ್‌ ಹೈಡ್ರೊಜನ್‌ ಇಂಧನವನ್ನು ಉರಿಸುತ್ತದೆ.

IPL_Entry_Point