ಕನ್ನಡ ಸುದ್ದಿ  /  Nation And-world  /  Isro Nrsc Recruitment 2023 Apply For 34 Research Scientist And Other Posts Check Details Here

ISRO NRSC recruitment 2023: ಇಸ್ರೋ ಎನ್‌ಆರ್‌ಎಸ್‌ಸಿ ನೇಮಕಾತಿ; 34 ಸಂಶೋಧನಾ ವಿಜ್ಞಾನಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ISRO NRSC recruitment 2023: ಇಸ್ರೋದ NRSCಯು ತನ್ನಲ್ಲಿರುವ ಜೂನಿಯರ್ ರಿಸರ್ಚ್ ಫೆಲೋ (JRF), ರಿಸರ್ಚ್ ಸೈಂಟಿಸ್ಟ್ (RS), ಪ್ರಾಜೆಕ್ಟ್ ಅಸೋಸಿಯೇಟ್-I ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್-I ಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಇಸ್ರೋ ನೇಮಕಾತಿ
ಇಸ್ರೋ ನೇಮಕಾತಿ (File Photo)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ಜೂನಿಯರ್ ರಿಸರ್ಚ್ ಫೆಲೋ (JRF), ರಿಸರ್ಚ್ ಸೈಂಟಿಸ್ಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 7. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ www.nrsc.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ISRO NRSC ನೇಮಕಾತಿ 2023 ಹುದ್ದೆಯ ವಿವರಗಳು: ಜೂನಿಯರ್ ರಿಸರ್ಚ್ ಫೆಲೋ (JRF), ರಿಸರ್ಚ್ ಸೈಂಟಿಸ್ಟ್ (RS), ಪ್ರಾಜೆಕ್ಟ್ ಅಸೋಸಿಯೇಟ್-I ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್-I ನ 34 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ಅನ್ನು ನಡೆಸಲಾಗುತ್ತಿದೆ.

ISRO NRSC ನೇಮಕಾತಿ 2023: ಅರ್ಜಿ ಸಲ್ಲಿಸುವುದು ಹೇಗೆ?

  • ಎನ್‌ಆರ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ www.nrsc.gov.in ಗೆ ಭೇಟಿ ನೀಡಿ.
  • ಹೋಮ್‌ ಪೇಜ್‌ನಲ್ಲಿ ಕೆರಿಯರ್‌ ಟ್ಯಾಬ್‌ ಕ್ಲಿಕ್‌ ಮಾಡಿ
  • ಮುಂದೆ, “Click Here to Apply for Recruitment of various Temporary Research Personnel” ಮೇಲೆ ಕ್ಲಿಕ್‌ ಮಾಡಿ
  • ಅರ್ಜಿ ಫಾರಮ್‌ ಅನ್ನು ಭರ್ತಿ ಮಾಡಿ
  • ಅಗತ್ಯ ಎಲ್ಲ ದಾಖಲೆಗಳನ್ನು ಅಪ್ಲೋಡ್‌ ಮಾಡಿ ಮತ್ತು ಅರ್ಜಿಯನ್ನು ಸಬ್‌ಮಿಟ್‌ ಮಾಡಿ
  • ಅದರ ಪ್ರಿಂಟ್‌ಔಟ್‌ ತೆಗೆದು ಇರಿಸಿಕೊಳ್ಳಿ. ಭವಿಷ್ಯದ ಅಗತ್ಯಗಳಿಗೆ ಅವು ಬೇಕಾಗಬಹುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲ್ಲಿ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು. ಇಲ್ಲಿ ಕ್ಲಿಕ್‌ ಮಾಡಿ

ಗಮನಿಸಬಹುದಾದ ಸುದ್ದಿಗಳು

ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

BVB-BBMP School Admission: ಬೆಂಗಳೂರಿನ ಶ್ರೀರಾಮಪುರ ಕ್ರಾಂತಿಕವಿ ಸರ್ವಜ್ಞರಸ್ತೆಯ 215ನೇ ಮುಖ್ಯರಸ್ತೆಯ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರಕ್ಕೆ ಅಡ್ಮಿಷನ್‌ ಶುರುವಾಗುತ್ತಿದೆ. ಮಾರ್ಚ್‌ 27ರಿಂದ ಅಡ್ಮಿಷನ್‌ ಶುರುವಾಗುತ್ತಿದ್ದು, ಏಪ್ರಿಲ್‌ 10ರ ತನಕ ಅರ್ಜಿ ವಿತರಣೆ ನಡೆಯಲಿದೆ ಎಂದು ಪಾಲಿಕೆ ಹೇಳಿದೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.Ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೂನಿವರ್ಸಿಟಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪ್ರವೇಶಾತಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

Bengaluru Agri University Admission: ಕೃಷಿಗೆ ಸಂಬಂಧಿಸಿದ ಎರಡು ಡಿಪ್ಲೊಮಾ ಕೋರ್ಸ್‌ ಮತ್ತು ಐದು ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಬೆಂಗಳೂರಿನ ಕೃಷಿ ವಿವಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕ ಈ ಕೋರ್ಸ್‌ಗಳನ್ನು ನಡೆಸುತ್ತದೆ. ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕವು ಎರಡು ಡಿಪ್ಲೊಮಾ ಕೋರ್ಸ್ ಹಾಗೂ ಐದು ಸರ್ಟಿಫಿಕೇಟ್ ಕೋರ್ಸ್‌ಗಳ 2023-24ನೇ ಶೈಕ್ಷಣಿಕ ಸಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅದು ಅರ್ಜಿಗಳನ್ನು ಆಹ್ವಾನಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point