ಜೆಇಇ ಮೇನ್‌ ರಿಸಲ್ಟ್ 2025: ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್‌ಟಿಎ ಸ್ಕೋರ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜೆಇಇ ಮೇನ್‌ ರಿಸಲ್ಟ್ 2025: ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್‌ಟಿಎ ಸ್ಕೋರ್‌

ಜೆಇಇ ಮೇನ್‌ ರಿಸಲ್ಟ್ 2025: ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್‌ಟಿಎ ಸ್ಕೋರ್‌

JEE Main Result 2025: ಜೆಇಇ ಮೇನ್ಸ್ 2025ರ ಸೆಷನ್ 1ರ ಫಲಿತಾಂಶ ಇಂದು (ಫೆ 11) ಪ್ರಕಟವಾಗಿದೆ. ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇಕಡ 100 ಅಂಕ ಬಂದಿದೆ.

JEE Main Result 2025: 14 students scored 100.
JEE Main Result 2025: 14 students scored 100.

JEE Main Result 2025: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇಂದು (ಫೆ 11) ಜೆಇಇ ಮೇನ್ಸ್ 2025 ಸೆಷನ್ 1ರ ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳು ಶೇಕಡ 100 ಎನ್‌ಟಿಎ ಸ್ಕೋರ್ ಮಾಡಿ ಗಮನಸೆಳೆದಿದ್ದಾರೆ. ಜೆಇಇ ಮೇನ್ಸ್ 2025 ಸೆಷನ್ 1ರ ಪರೀಕ್ಷೆಯನ್ನು ಎನ್‌ಟಿಎ 2025ರ ಜನವರಿ 22 ರಿಂದ 29ರ ತನಕ ದೇಶದ 304 ನಗರಗಳ 618 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತ್ತು. ಇದರಲ್ಲಿ 15 ಪರೀಕ್ಷಾ ಕೇಂದ್ರಗಳು ವಿದೇಶದಲ್ಲಿದ್ದವು.

ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್‌ಟಿಎ ಸ್ಕೋರ್‌

ಜೆಇಇ ಮೇನ್ಸ್ 2025 ಸೆಷನ್ 1ರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್‌ಟಿಎ ಸ್ಕೋರ್‌ ಸಿಕ್ಕಿದೆ. 14 ವಿದ್ಯಾರ್ಥಿಗಳ ವಿವರ ಹೀಗಿದೆ- ರಾಜಸ್ಥಾನದ ಆಯುಷ್ ಸಿಂಘಾಲ್, ಕರ್ನಾಟಕದ ಕುಶಾಗ್ರ ಗುಪ್ತಾ, ದೆಹಲಿ ಎನ್‌ಸಿಟಿಯ ದಕ್ಷ್, ದೆಹಲಿ ಎನ್‌ಸಿಟಿಯ ಹರ್ಷ ಝಾ, ರಾಜಸ್ಥಾನದ ರಜಿತ್ ಗುಪ್ತಾ, ಉತ್ತರ ಪ್ರದೇಶದ ಶ್ರೇಯಸ್ ಲೋಹಿಯಾ, ರಾಜಸ್ಥಾನದ ಸಕ್ಷಮ್‌ ಜಿಂದಾಲ್‌, ಉತ್ತರ ಪ್ರದೇಶದ ಸೌರವ್‌, ಮಹಾರಾಷ್ಟ್ರದ ವಿಶಾದ್‌ ಜೈನ್‌, ರಾಜಸ್ಥಾನದ ಆರ್ನವ್‌ ಸಿಂಗ್, ಗುಜರಾತ್‌ನ ಶಿವೇನ್ ವಿಕಾಸ್ ತೋಶ್ನಿವಾಲ್‌, ಆಂಧ್ರಪ್ರದೇಶದ ಸಾಯಿ ಮನೋಜ್ಞಾ ಗುತಿಕೊಂಡ, ರಾಜಸ್ಥಾನದ ಓಮ್ ಪ್ರಕಾಶ್ ಬೆಹೆರಾ, ತೆಲಂಗಾಣದ ಬನಿ ಬ್ರತ ಮಾಜೀ.

ಪುರುಷ ಮತ್ತು ಮಹಿಳಾ ಟಾಪರ್‌ಗಳ ಸಂಖ್ಯೆ ಗಮನಿಸಿದರೆ, 13 ಪುರುಷ ಅಭ್ಯರ್ಥಿಗಳು ಮತ್ತು 1 ಮಹಿಳಾ ಅಭ್ಯರ್ಥಿ (ಬಿ.ಇ. /ಬಿ. ಟೆಕ್) ಪೇಪರ್ 1 ರಲ್ಲಿ 100 ಎನ್‌ಟಿಎ ಸ್ಕೋರ್ ಪಡೆದರು. ರಾಜ್ಯವಾರು ಟಾಪರ್ಸ್ ಪಟ್ಟಿಯಲ್ಲಿ ಎನ್‌ಟಿಎ 100 ಸ್ಕೋರ್ ಮಾಡಿದ ಅಭ್ಯರ್ಥಿಗಳ ಅಂಕಗಳು 100 ರಿಂದ 90.6976 ರವರೆಗೆ ಅಂಕ ಪಡೆದ ಒಟ್ಟು 44 ಅಭ್ಯರ್ಥಿಗಳ ಹೆಸರುಗಳಿವೆ. ಆಂಧ್ರಪ್ರದೇಶದ ಸಾಯಿ ಮನೋಜ್ಞಾ ಗುತಿಕೊಂಡಾ ಅವರು ಎನ್‌ಟಿಎ 100 ಸ್ಕೋರ್ ಮಾಡಿದ ಏಕೈಕ ಮಹಿಳಾ ಅಭ್ಯರ್ಥಿ.

ಜೆಇಇ ಮೇನ್‌ ರಿಸಲ್ಟ್ 2025: ರಾಜಸ್ಥಾನದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚು

ಜೆಇಇ ಮೇನ್ ರಿಸಲ್ಟ್ ಪ್ರಕಟಿಸಿರುವ ಎನ್‌ಟಿಎ, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ 39 ಅಭ್ಯರ್ಥಿಗಳ ಫಲಿತಾಂಶ ತಡೆ ಹಿಡಿದಿರುವುದಾಗಿ ತಿಳಿಸಿದೆ. ಎನ್‌ಟಿಎ 100 ಸ್ಕೋರ್ ಮಾಡಿದವರ ಪೈಕಿ ರಾಜಸ್ಥಾನದ ಅಭ್ಯರ್ಥಿಗಳು ಹೆಚ್ಚಿದ್ದಾರೆ. ಜನರಲ್‌ ಕೆಟಗರಿಯ 12 ಅಭ್ಯರ್ಥಿಗಳು ಎನ್‌ಟಿಎ 100 ಸ್ಕೋರ್ ಮಾಡಿದ್ದಾರೆ.

ಎಸ್‌ಟಿ ಕೆಟಗರಿಯಲ್ಲಿ ಎನ್‌ಟಿಎ ಸ್ಕೋರ್ 99.97 ಪಡೆದ ಪಾರ್ಥ ಸೆಹ್ರಾ ಮೊದಲ ಸ್ಥಾನದಲ್ಲಿದ್ದಾರೆ. ಇದೇ ರೀತಿ, ಆಂಧ್ರ ಪ್ರದೇಶದ ಹನ್ನೆರಡನೇ ತರಗತಿ ವಿದ್ಯಾರ್ಥಿ ಕೋಟಿಪಳ್ಳಿ ಯಶವಂತ್ ಸಾತ್ವಿಕ್ ಇಡಬ್ಲ್ಯುಎಸ್ ಜನರಲ್ ಕೆಟಗರಿಯಲ್ಲಿ 99.9968125 ಎನ್‌ಟಿಎ ಸ್ಕೋರ್‌ನೊಂದಿಗೆ ಟಾಪರ್ ಆಗಿದ್ದಾರೆ.

ಒಬಿಸಿ ಎನ್‌ಸಿಎಲ್ ಕೆಟಗರಿಯಲ್ಲಿ ದೆಹಲಿ ಎನ್‌ಸಿಟಿಯ 12ನೇ ತರಗತಿ ವಿದ್ಯಾರ್ಥಿ ದಕ್ಷ್ 100 ಎನ್‌ಟಿಎ ಸ್ಕೋರ್‌ನೊಂದಿಗೆ ಮೊದಲಿಗರಾಗಿದ್ದಾರೆ. ಎಸ್‌ಟಿ ಕೆಟಗರಿಯಲ್ಲಿ ಉತ್ತರ ಪ್ರದೇಶದ ಶ್ರೇಯಸ್ ಲೋಹಿಯಾ ಟಾಪರ್‌. ಅಂಗವಿಕಲರ ಕೆಟಗರಿಯಲ್ಲಿ ಛತ್ತೀಸ್‌ಗಢದ 12ನೇ ತರಗತಿ ವಿದ್ಯಾರ್ಥಿ ಹರ್ಷಲ್ ಗುಪ್ತಾ 99.95459990 ಎನ್‌ಟಿಎ ಸ್ಕೋರ್‌ನೊಂದಿಗೆ ಟಾಪರ್ ಆಗಿದ್ದಾರೆ.

ಜೆಇಇ ಮೇನ್‌ ರಿಸಲ್ಟ್ 2025 - ಪರಿಶೀಲಿಸುವುದು ಹೇಗೆ

ಹಂತ 1 - ಜೆಇಇ ಮೇನ್‌ ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ jeemain.nta.nic.in ಗೆ ಹೋಗಬೇಕು

ಹಂತ 2 - ಮುಖಪುಟದಲ್ಲಿರುವ ಸೆಷನ್ 1 ಸ್ಕೋರ್‌ಕಾರ್ಡ್‌ ಡೌನ್‌ಲೋಡ್ ಲಿಂಕ್ ಕ್ಲಿಕ್ ಮಾಡಬೇಕು

ಹಂತ 3 - ಅಗತ್ಯ ಮಾಹಿತಿ ಭರ್ತಿ ಮಾಡಿ, ಲಾಗಿನ್ ಆಗಬೇಕು

ಹಂತ 4 - ನಿಮ್ಮ ಮಾರ್ಕ್‌ ಪರಿಶೀಲಿಸಿ ಮತ್ತು ಫಲಿತಾಂಶವನ್ನು ಡೌನ್‌ಲೋಡ್ ಮಾಡಿ

ಹಂತ 5 - ಡೌನ್‌ಲೋಡ್ ಮಾಡಿದ ಫಲಿತಾಂಶದ ಪ್ರತಿಯನ್ನು ಮುದ್ರಿಸಿ, ಭವಿಷ್ಯದ ಅಗತ್ಯಕ್ಕಾಗಿ ಜೋಪಾನ ಮಾಡಿಟ್ಟುಕೊಳ್ಳಿ

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.