ಕನ್ನಡ ಸುದ್ದಿ  /  Nation And-world  /  Jitendra Singh Launches India's First Saline Water Led Lamps, What Is Saline Water Lamps? How It Works

ಸಮುದ್ರದ ನೀರು, ಉಪ್ಪು ನೀರಿನಿಂದ ಬೆಳಗುವ ಎಲ್‌ಇಡಿ ದೀಪ ಬಿಡುಗಡೆ ಮಾಡಿದ ಜಿತೇಂದ್ರ ಸಿಂಗ್‌, ಏನಿದು ಸಲೈನ್‌ ವಾಟರ್‌ ಎಲ್‌ಇಡಿ?

ಸಮುದ್ರ ನೀರನ್ನು ಬಳಸಿ ಎಲ್‌ಇಡಿ ದೀಪಗಳು ಬೆಳಗವು ಲವಣಯುಕ್ತ ನೀರಿನ ಲ್ಯಾಂಟರ್ನ್‌ (Saline Water lantern) ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಬಿಡುಗಡೆ ಮಾಡಿದ್ದಾರೆ. ಚೆನ್ನೈನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಒಸೀನ್‌ ಟೆಕ್ನಾಲಜಿ (ಎನ್‌ಇಒಟಿ) ತಂಡವು ರೋಶಿನಿ ಹೆಸರಿನ ಈ ಲ್ಯಾಂಪ್‌ ಅಭಿವೃದ್ಧಿಪಡಿಸಿದೆ.

ಸಮುದ್ರದ ನೀರು, ಉಪ್ಪು ನೀರಿನಿಂದ ಬೆಳಗುವ ಎಲ್‌ಇಡಿ ದೀಪ ಬಿಡುಗಡೆ ಮಾಡಿದ ಜಿತೇಂದ್ರ ಸಿಂಗ್‌
ಸಮುದ್ರದ ನೀರು, ಉಪ್ಪು ನೀರಿನಿಂದ ಬೆಳಗುವ ಎಲ್‌ಇಡಿ ದೀಪ ಬಿಡುಗಡೆ ಮಾಡಿದ ಜಿತೇಂದ್ರ ಸಿಂಗ್‌ (ANI)

ನವದೆಹಲಿ: ಸಮುದ್ರ ನೀರನ್ನು ಬಳಸಿ ಎಲ್‌ಇಡಿ ದೀಪಗಳು ಬೆಳಗವು ಲವಣಯುಕ್ತ ನೀರಿನ ಲ್ಯಾಂಟರ್ನ್‌ (Saline Water lantern) ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಬಿಡುಗಡೆ ಮಾಡಿದ್ದಾರೆ. ಚೆನ್ನೈನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಒಸೀನ್‌ ಟೆಕ್ನಾಲಜಿ (ಎನ್‌ಇಒಟಿ) ತಂಡವು ರೋಶಿನಿ ಹೆಸರಿನ ಈ ಲ್ಯಾಂಪ್‌ ಅಭಿವೃದ್ಧಿಪಡಿಸಿದೆ.

ಚೆನ್ನೈನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಒಸೀನ್‌ ಟೆಕ್ನಾಲಜಿ (ಎನ್‌ಇಒಟಿ) ನಿರ್ವಹಿಸುವ ಕರಾವಳಿ ಸಂಶೋಧನಾ ಹಡಗು ಸಾಗರ್‌ ಅನ್ವೀಶಿಕಾಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಲವಣಯುಕ್ತ ನೀರಿನಿಂದ ಬೆಳಗುವ ಈ ಎಲ್‌ಇಡಿ ದೀಪವನ್ನು ಅವರು ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವಿನೂತನ ಲ್ಯಾಟರ್ನ್‌ ಅಭಿವೃದ್ಧಿಪಡಿಸಲಾಗಿದೆ.

ಭಾರತದ 7500 ಕಿಲೋಮೀಟರ್‌ ವ್ಯಾಪ್ತಿಯ ಕರಾವಳಿ ಬೆಲ್ಟ್‌ನಲ್ಲಿರುವ ಮೀನುಗಾರಿಕಾ ಸಮುದಾಯಕ್ಕೆ ಮತ್ತು ಬಡವರ ಬದುಕನ್ನು ಸುಲಭಗೊಳಿಸಲು ಮತ್ತು ಅವರ ಮನೆಗಳನ್ನು ಬೆಳಗಲು ಈ ಸಲೈನ್‌ ವಾಟರ್‌ ಲ್ಯಾಟರ್ನ್‌ ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015ರಲ್ಲಿ ಆರಂಭಿಸಿದ ಉಜ್ವಲ ಯೋಜನೆಯಡಿ ಎಲ್ಲರ ಮನೆಗೂ ಎಲ್‌ಇಡಿ ಬಲ್ಬ್‌ ವಿತರಣೆ ಮಾಡುವ ಕಾರ್ಯಕ್ರಮಕ್ಕೂ ಈ ಸಲೈನ್‌ ವಾಟರ್‌ ಲ್ಯಾಟರ್ನ್‌ ಪೂರಕವಾಗಿದೆ ಎಂದು ಸಿಂಗ್‌ ಅಭಿಪ್ರಾಯಪಟಿದ್ದಾರೆ.

ಇದರೊಂದಿಗೆ ರೋಶಿನಿಯು ಸೋಲಾರ್‌ ಸ್ಟಡಿ ಲ್ಯಾಂಪ್‌ ಯೋಜನೆಗೂ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಪರಿಸರಕ್ಕೆ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡಬಹುದು. ಮುಗಿದುಹೋಗಬಲ್ಲ ಇಂಧನಗಳ ಬಳಕೆಯನ್ನೂ ಇದ್ದು ತಗ್ಗಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮುದ್ರ ನೀರು ಇಲ್ಲದಿದ್ದರೆ ಏನು ಮಾಡುವುದು?

ಈ ಲ್ಯಾಟರ್ನ್‌ ಅನ್ನು ಸಮುದ್ರದ ನೀರಿನ ಲಭ್ಯತೆ ಇಲ್ಲದ ಕಡೆಯೂ ಬಳಸಬಹುದು ಎಂದು ಸಿಂಗ್‌ ಮಾಹಿತಿ ನೀಡಿದ್ದಾರೆ. ಲವಣಯುಕ್ತ ನೀರು ಅಥವಾ ಸಾಮಾನ್ಯ ನೀರಿಗೆ ಸಾಮಾನ್ಯ ಉಪ್ಪು ಮಿಶ್ರ ಮಾಡಿ ಬಳಸಬಹುದು. ಇದು ಕಡಿಮೆ ವೆಚ್ಚದಾಯಕ ಮತ್ತು ಸುಲಭ ನಿರ್ವಹಣೆ ಗುಣವನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರೋಶಿನಿ ಲ್ಯಾಂಪ್‌ ಅಭಿವೃದ್ಧಿಪಡಿಸಿರುವುದಕ್ಕೆ ಇವರು ಎನ್‌ಇಒಟಿ ತಂಡವನ್ನು ಅಭಿನಂದಿಸಿದ್ದಾರೆ. ಈ ತಂತ್ರಜ್ಞಾನವನ್ನು ಸಮೂಹ ಬಳಕೆಗೆ ನೀಡುವಂತೆ ಅವರು ಸಲಹೆ ನೀಡಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶ ಮತ್ತು ವಿಪತ್ತು ಪ್ರದೇಶಗಳಲ್ಲಿ ಇದರ ಬಳಕೆಗೆ ಪ್ರೋತ್ಸಾಹ ನೀಡಬಹುದು ಎಂದು ಅವರು ಹೇಳಿದ್ದಾರೆ.

ಸಾಲ್ಟ್‌ ಲೈಟ್‌ ಹೇಗೆ ಕೆಲಸ ಮಾಡುತ್ತದೆ?

ಈ ರೀತಿಯ ತಂತ್ರಜ್ಞಾನವನ್ನು ಈ ಹಿಂದೆ ಅಮೆರಿಕದ ಕಂಪನಿಯೊಂದು ಪರಿಚಯಿಸಿತ್ತು. ಕೊಲಂಬಿಯಾದ ರಿನೇವಬಲ್‌ ಎನರ್ಜಿ ಸ್ಟಾರ್ಟಪ್‌ ಇ-ದಿನಾ ಮತ್ತು ಡಬ್ಲ್ಯುಪಿಪಿ ವಂಡರ್‌ಮೆನ್‌ ಥಾಮ್ಸನ್‌ ಕೊಲಂಬಿಯಾ ವಿಭಾಗವು ಉಪ್ಪು ನೀರನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಸಾಧನವನ್ನು ಅಭಿವೃದ್ಧಿಪಡಿಸಿತ್ತು.

ಈ ಸ್ಟಾರ್ಟಪ್‌ ಅಭಿವೃದ್ಧಿಪಡಿಸಿದ ವಾಟರ್‌ ಲೈಟ್‌ ಕೂಡ ಇದೀಗ ಭಾರತ ಅಭಿವೃದ್ಧಿಪಡಿಸಿದ ಲ್ಯಾಟರ್ನ್‌ ಅನ್ನು ಹೋಲುತ್ತದೆ. ಅರ್ಧ ಲೀಟರ್‌ ಉಪ್ಪು ನೀರಲ್ಲಿ 45 ದಿನ ಲೈಟ್‌ ಉರಿಯುತ್ತದೆ ಎಂದು ವಂಡರ್‌ಮೆನ್‌ ಥಾಪ್ಸನ್‌ ಮಾಹಿತಿ ನೀಡಿತ್ತು.

ವಾಟರ್‌ಲೈಟ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಹೆಚ್ಚಿನವರಲ್ಲಿ ಇರಬಹುದು. ವಾಟರ್‌ಲೈಟ್‌ ಅಯಾನೀಕರಣದ ಮೂಲಕ ಕಾರ್ಯನಿರ್ಹಿಸುತ್ತದೆ. ಉಪ್ಪು ನೀರಿನ ಎಲೆಕ್ಟ್ರೋಲೈಟ್‌ಗಳು ವಾಟರ್‌ಲೈಟ್‌ ಸಾಧನದೊಳಗಿರುವ ಮ್ಯಾಗ್ನೇಶಿಯಂ ಜತೆ ಪ್ರತಿಕ್ರಿಯಿಸಿ ಬೆಳಕು ಉತ್ಪಾದಿಸುತ್ತದೆ. ಅಂದಹಾಗೆ ಈ ವಾಟರ್‌ಲೈಟ್‌ ಮನುಷ್ಯರು ಅಥವಾ ಪ್ರಾಣಿಗಳ ಮೂತ್ರದ ಮೂಲಕವೂ ಕಾರ್ಯನಿರ್ವಹಿಸುತ್ತದೆ ಎಂದು ಥಾಪ್ಸನ್‌ ಮಾಹಿತಿ ನೀಡಿತ್ತು.

ಆದರೆ, ಭಾರತದಲ್ಲಿ ಉತ್ಪಾದಿಸಿರುವ ಲ್ಯಾಟರ್ನ್‌ ಮೂತ್ರದ ಮೂಲಕ ಕಾರ್ಯನಿರ್ವಹಿಸಬಹುದಾಗಿದ್ದರೂ (ನೀರಿಗೆ ಉಪ್ಪು ಸೇರಿಸಿದರೆ ಅಥವಾ ಲವಣಯುಕ್ತ ನೀರು ಎಂದಿದೆ) ಅಧಿಕೃತವಾಗಿ ತಿಳಿಸಿಲ್ಲ. ಮನೆಯೊಳಗೆ ಮೂತ್ರದ ದೀಪ ಬಳಸುವುದೂ ಕಷ್ಟವೆನ್ನುವುದು ಇದಕ್ಕೆ ಕಾರಣವಾಗಿರಬಹುದು ಅಥವಾ ಈ ಲ್ಯಾಟರ್ನ್‌ ಕುರಿತು ಕೆಟ್ಟ ಪ್ರಚಾರವಾಗಬಹುದೆಂಬ ಆತಂಕವೂ ಇರಬಹುದು ಎನ್ನಲಾಗಿದೆ.

ವಿಭಾಗ