ಡಿಆರ್‌ಡಿಒ ಆರ್‌ಎಸಿ ವಿಜ್ಞಾನಿ ನೇಮಕಾತಿ 2025; 148 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ
ಡಿಆರ್‌ಡಿಒ ಆರ್‌ಎಸಿ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದೆ. 148 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತ ಅಧಿಸೂಚನೆ ಹಾಗೂ ವಿವರ ಇಲ್ಲಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research & Development Organization) ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ, (ಡಿಆರ್‌ಡಿಒ-ಆರ್‌ಎಸಿ) ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು rac.gov.in ಡಿಆರ್‌ಡಿಒ ಆರ್‌ಎಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವು ಎಂಪ್ಲಾಯ್ಮೆಂಟ್ ನ್ಯೂಸ್‌ನಲ್ಲಿ ಪ್ರಕಟವಾದ ದಿನಾಂಕದಿಂದ 21 ದಿನಗಳವರೆಗೆ ಇರುವ ಸಾಧ್ಯತೆ ಇದೆ. ಇದು ಜೂನ್ 2025ರ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸಂಸ್ಥೆಯಲ್ಲಿ 148 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿವೆ.
ಖಾಲಿ ಹುದ್ದೆಗಳ ವಿವರ
1. ಡಿಆರ್‌ಡಿಒದಲ್ಲಿ ಸೈಂಟಿಸ್ಟ್ 'ಬಿ' : 127 ಹುದ್ದೆಗಳು
2. ಎಡಿಎಯಲ್ಲಿ ಸೈಂಟಿಸ್ಟ್ / ಎಂಜಿನಿಯರ್ 'ಬಿ' : 9 ಹುದ್ದೆಗಳು
3. ಸೈಂಟಿಸ್ಟ್ 'ಬಿ' ಎನ್‌ಕೇಡ್ರೆಡ್ ಹುದ್ದೆಗಳು: 12 ಹುದ್ದೆಗಳು
ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳನ್ನು ಗೇಟ್ ಸ್ಕೋರ್ (GATE) ಆಧಾರದ ಮೇಲೆ 1:10ರ ಅನುಪಾತದಲ್ಲಿ ಅವರ ಲಭ್ಯತೆಗೆ ಒಳಪಟ್ಟು ವಿಭಾಗವಾರು ವರ್ಗವಾರು ಮೆರಿಟ್ ಪಟ್ಟಿಯ ಕ್ರಮದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಗೇಟ್ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಆರ್‌ಎಸಿ / ಡಿಆರ್‌ಡಿಒ ನಿರ್ಧರಿಸಿದಂತೆ ದೆಹಲಿ ಅಥವಾ ಇತರ ಯಾವುದೇ ಸ್ಥಳದಲ್ಲಿ ನಡೆಯಲಿರುವ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಅಭ್ಯರ್ಥಿಗಳನ್ನು ವಿಭಾಗವಾರು ಅರ್ಹತೆ, ಗೇಟ್ ಸ್ಕೋರ್‌ನ ಅಂಕಗಳ ಒಟ್ಟು 80 ಶೇ. ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಅಂಕಗಳ 20 ಶೇ. ವೈಟೇಜ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ (ಯುಆರ್), ಇಡಬ್ಲ್ಯೂಎಸ್ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳು 100 ರೂ. (ಮರುಪಾವತಿಸಲಾಗದ) ಅರ್ಜಿ ಶುಲ್ಕವನ್ನು ಆನ್‌ಲೈನ್‌ಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ/ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಡಿಆರ್‌ಡಿಒ-ಆರ್‌ಎಸಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
ಅರ್ಹತಾ ಮಾನದಂಡಗಳು
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ವಿವರವಾದ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ