Job Alert: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ನಲ್ಲಿ ಇಂಜಿನಿಯರಿಂಗ್ ನೇಮಕಾತಿಗೆ ಅಧಿಸೂಚನೆ
ಇಂಜಿನಿಯರಿಂಗ್ ಮಾಡಿದವರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ನಲ್ಲಿ ಪೋಸ್ಟ್ ಖಾಲಿ ಇದೆ. ಒಟ್ಟು 276 ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ಪಿಸಿಎಲ್ ) ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ಇಂಜಿನಿಯರಿಂಗ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು : 276
1) ಮೆಕ್ಯಾನಿಕಲ್ ಇಂಜಿನಿಯರ್ - 57
2) ಎಲೆಕ್ಟ್ರಿಕಲ್ ಇಂಜಿನಿಯರ್ - 16
3) ಇನ್ ಸ್ಟ್ರುಮೆಂಟ್ ಇಂಜಿನಿಯರ್-36
4) ಸಿವಿಲ್ ಇಂಜಿನಿಯರ್ - 18
5) ಕೆಮಿಕಲ್ ಇಂಜಿನಿಯರ್ - 43
6) ಸೀನಿಯರ್ ಆಫೀಸರ್- 50
7) ಫೈರ್ ಅಂಡ್ ಸೇಫ್ಟಿ ಆಫೀಸರ್ -8
8) ಕ್ವಾಲಿಟ್ ಕಂಟ್ರೋಲ್ ಆಫೀಸರ್-9
9) ಚಾರ್ಟೆರ್ಡ್ ಅಕೌಂಟೆoಟ್ಸ್ -16
10) ಕಾನೂನು ಅಧಿಕಾರಿ -7
11) ಮೆಡಿಕಲ್ ಆಫೀಸರ್-4
12) ಜನರಲ್ ಮ್ಯಾನೇಜರ್ -1
13) ವೆಲ್ಫೇರ್ ಆಫೀಸರ್ - 1
14) ಸಿಸ್ಟಮ್ ಆಫೀಸರ್ -10
ಅರ್ಹತೆ : ಯಾವದೇ ವಿಭಾಗದ ಇಂಜಿನಿಯರಿಂಗ್ನಲ್ಲಿ ಬಿಇ ಅಥವಾ ಬಿ.ಬಿಟೆಕ್, ಎಂಬಿಎ, ಎಂಎಸ್ಸಿ, ಕಾನೂನಿನಲ್ಲಿ ಪದವಿ, ಎಂಬಿಬಿಎಸ್, ಡಿಪ್ಲೋಮ ಪದವಿಗಳ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ.
ವೇತನ : ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಯಿಂದ ಇನ್ಸ್ಟ್ರುಮೆಂಟೇಷನ್ ಹುದ್ದೆಯವರಗೆ 50.000 ರೂಪಾಯಿ ಇಂದ 1,60,000 ರೂ. ವೇತನ ಇರಲಿದೆ. ಅಂತೆಯೇ, ಸೀನಿಯರ್ ಆಫೀಸರ್ ಹುದ್ದೆಯಿಂದ ಕ್ವಾಲಿಟಿ ಕಂಟ್ರೋಲ್ ಆಫೀಸರ್ಗೆ 60,000 ರೂ. ದಿಂದ 1.80 ಲಕ್ಷ ರೂ. ಇರಲಿದೆ.
ಶುಲ್ಕ: ಜನರಲ್ ಕೆಟಗರಿಯ ಅಭ್ಯರ್ಥಿಯು 1,180 ರೂ ನೀಡಬೇಕು. ಇತರೆ ಎಲ್ಲ ಅಭ್ಯರ್ಥಿಗಳಿಗೂ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
- ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯ ವೆಬ್ ಸೈಟ್ https://www.hindustanpetroleum.com/careers ಗೆ ಲಾಗಿನ್ ಆಗಿ
- ನೋಂದಣಿ ಪ್ರಕ್ರಿಯೆ ಇದ್ದಲ್ಲಿ ಅದನ್ನು ಪೂರ್ಣಿಗೊಳಿಸಬೇಕು.
- ಆನ್ಲೈನ್ ಅರ್ಜಿ ನಮೂನೆ ದೊರೆಯಲಿದ್ದು, ಸೂಕ್ತ ಮಾಹಿತಿಗಳಿಂದ ಭರ್ತಿ ಮಾಡಬೇಕು
- ಸೂಕ್ತ ದಾಖಲೆಗಳನ್ನು ಲಗತ್ತಿ ಸಬೇಕು
-ಈ ಮೇಲಿನ ವೆಬ್ ಮೂಲಕ ಅರ್ಜಿ ಕಳುಹಿಸಬೇಕು.
ಆಯ್ಕೆ: ಕಂಪ್ಯೂಟರ್ ಆಧಾರಿತ, ಗುಂಪು ಚಟುವಟಿಕೆ ಹಾಗೂ ಸಂದರ್ಶನ ಇರುತ್ತೆ
ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ 1 ವರ್ಷ ತರಬೇತಿ ಅವಧಿ ಇರುತ್ತೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ 18.09.2023 (ಸೆಪ್ಟೆಂಬರ್ 18)
