ರೈಲ್ವೆ ನೇಮಕಾತಿ ಮಂಡಳಿಯಿಂದ ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿ; 1376 ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೆ ನೇಮಕಾತಿ ಮಂಡಳಿಯು ಪ್ಯಾರಾಮೆಡಿಕಲ್ ಸ್ಟಾಫ್ ನೇಮಕಾತಿ ಮಾಡುತ್ತಿದ್ದು, ಒಟ್ಟು 1376 ಉದ್ಯೋಗಾವಕಾಶಗಳಿಗೆ ಅರ್ಜಿ ಆಹ್ವಾನಿಸುತ್ತಿದೆ. ಖಾಲಿ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ದಿನಾಂಕ, ಶುಲ್ಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ರೈಲ್ವೆ ನೇಮಕಾತಿ ಮಂಡಳಿ (Railway Recruitment Board -RRB)ಯು ಪ್ಯಾರಾಮೆಡಿಕಲ್ ಸ್ಟಾಫ್ ನೇಮಕಾತಿ 2024ಕ್ಕೆ ಅರ್ಜಿ ಪ್ರಕ್ರಿಯೆ ಆರಂಭಿಸುತ್ತಿದೆ. ನರ್ಸಿಂಗ್ ಸೂಪರಿಂಟೆಂಡೆಂಟ್, ರೇಡಿಯೋಗ್ರಾಫರ್, ಆಪ್ಟೋಮೆಟ್ರಿಸ್ಟ್ ಸೇರಿದಂತೆ 20 ವಿವಿಧ ಅರೆವೈದ್ಯಕೀಯ ವೃತ್ತಿಗಳಿಗಾಗಿ ಒಟ್ಟು 1,376 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆಗಸ್ಟ್ 17ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
ಕೊನೆಯ ದಿನ ಯಾವಾಗ?
ಆಗಸ್ಟ್ 17ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಸೆಪ್ಟೆಂಬರ್ 16ರವರೆಗೆ ಸಲ್ಲಿಸಲು ಅವಕಾಶವಿದೆ.
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಅಭ್ಯರ್ಥಿಗಳು ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇದರಲ್ಲಿ ವೃತ್ತಿಪರ ಸಾಮರ್ಥ್ಯ, ಸಾಮಾನ್ಯ ಅರಿವು, ಅಂಕಗಣಿತ, ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಸಾಮಾನ್ಯ ವಿಜ್ಞಾನ ಸೇರಿರುತ್ತದೆ. ಪರೀಕ್ಷೆಯ ದಿನಾಂಕವನ್ನು ರೈಲ್ವೆ ನೇಮಕಾತಿ ಮಂಡಳಿ ಇನ್ನಷ್ಟೇ ಪ್ರಕಟಿಸಬೇಕಿದೆ.
ದಾಖಲೆ ಪರಿಶೀಲನೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಪಾಸಾದವರು ತಮ್ಮ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಬೇಕಾಗುತ್ತದೆ.
ವೈದ್ಯಕೀಯ ಪರೀಕ್ಷೆ: ದಾಖಲೆಗಳ ಪರಿಶೀಲನೆಯ ನಂತರ, ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಆಯಾ ಹುದ್ದೆಗೆ ಅಗತ್ಯವಾದ ದೈಹಿಕ ಮಾನದಂಡಗಳನ್ನು ಖಚಿತಪಡಿಸಲಾಗುತ್ತದೆ.
ಅಪ್ಲಿಕೇಶನ್ ಶುಲ್ಕ ವಿವರ
ಜನರಲ್, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 500 ರೂಪಾಯಿ ಅರ್ಜಿ ಶುಲ್ಕವಿದೆ. ಎಸ್‌ಸಿ, ಎಸ್‌ಟಿ, ವಿಕಲಚೇತನರು, ಮಹಿಳೆ, ತೃತೀಯ ಲಿಂಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 250 ರೂ ಶುಲ್ಕವಿದೆ.
ಖಾಲಿ ಹುದ್ದೆಗಳು ಹೀಗಿವೆ
- ಡಯೆಟಿಷಿಯನ್: 5
- ನರ್ಸಿಂಗ್ ಸೂಪರಿಂಟೆಂಡೆಂಟ್: 713
- ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್: 4
- ಕ್ಲಿನಿಕಲ್ ಸೈಕಾಲಜಿಸ್ಟ್: 7
- ಡೆಂಟಲ್ ಹೈಜೀನಿಸ್ಟ್: 3
- ಡಯಾಲಿಸಿಸ್ ಟೆಕ್ನೀಶಿಯನ್: 20
- ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಗ್ರೇಡ್ III: 126
- ಪ್ರಯೋಗಾಲಯ ಸೂಪರಿಂಟೆಂಡೆಂಟ್: 27
- ಪರ್ಫ್ಯೂಷನಿಸ್ಟ್: 2
- ಫಿಸಿಯೋಥೆರಪಿಸ್ಟ್ ಗ್ರೇಡ್ II: 20
- ಆಕ್ಯುಪೇಷನಲ್ ಥೆರಪಿಸ್ಟ್: 2
- ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ: 2
- ಫಾರ್ಮಾಸಿಸ್ಟ್ (ಎಂಟ್ರಿ ಗೇಟ್): 246
- ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ: 64
- ಸ್ಪೀಚ್ ಥೆರಪಿಸ್ಟ್: 1
- ಕಾರ್ಡಿಯಾಕ್ ಟೆಕ್ನಿಷಿಯನ್: 4
- ಆಪ್ಟೋಮೆಟ್ರಿಸ್ಟ್: 4
- ಇಸಿಜಿ ತಂತ್ರಜ್ಞ: 13
- ಪ್ರಯೋಗಾಲಯ ಸಹಾಯಕ ಗ್ರೇಡ್-II: 94
- ಫೀಲ್ಡ್ ವರ್ಕರ್: 19
ಅರ್ಜಿ ಸಲ್ಲಿಸುವ ಹಂತಗಳು
- ಮೊದಲಿಗೆ ಅಧಿಕೃತ ವೆಬ್‌ಸೈಟ್ indianrailways.gov.in ಅಥವಾ rrbapply.gov.inಗೆ ಭೇಟಿ ನೀಡಿ
- RRB Paramedical Staff Recruitment 2024 ಲಿಂಕ್ ಮೇಲೆ ಕ್ಲಿಕ್ ಮಾಡಿ
- "ಅಪ್ಲೈ ಆನ್‌ಲೈನ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಸಬ್ಮಿಟ್ ಮಾಡಿ
- ಭವಿಷ್ಯದ ಬಳಕೆಗಾಗಿ ಅರ್ಜಿ ನಮೂನೆ ಪ್ರತಿಯನ್ನು ಡೌನ್‌ಲೋಡ್ ಮಾಡಿ.
ಇನ್ನಷ್ಟು ಉದ್ಯೋಗ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Bank Jobs: ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ; 300 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ