ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ

ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ

ತಾಂತ್ರಿಕ ಪದವಿ ಕೋರ್ಸ್ 142 ನೇಮಕಾತಿ 2025ರ ಪ್ರಮುಖ ಅಂಶವೆಂದರೆ, ಈ ಬಾರಿ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಇತರ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ (ಭಾರತೀಯ ಸೈನಿಕರು ಭಾರತ ಮಾತೆಗೆ ವಿಜಯ ಘೋಷಣೆ ಮಾಡುತ್ತಿರುವ ಸಂಗ್ರಹ ಚಿತ್ರ)
ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ (ಭಾರತೀಯ ಸೈನಿಕರು ಭಾರತ ಮಾತೆಗೆ ವಿಜಯ ಘೋಷಣೆ ಮಾಡುತ್ತಿರುವ ಸಂಗ್ರಹ ಚಿತ್ರ) ( AP)

ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸುವ ಇರಾದೆ ಹೊಂದಿದ್ದರೆ ಇಲ್ಲೊಂದು ಅವಕಾಶವಿದೆ. ಭಾರತೀಯ ಸೇನೆಯು 2026ರ ಜನವರಿಯಿಂದ ತಾಂತ್ರಿಕ ಪದವಿ ಕೋರ್ಸ್ (Technical Graduate Course -TGC 142) ಆರಂಭಿಸುವುದಾಗಿ ಘೋಷಿಸಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಯಾವುದೇ ಲಿಖಿತ ಪರೀಕ್ಷೆಯ ಅಗತ್ಯವಿಲ್ಲದೆ ಕಾಯಂ ನಿಯೋಜಿತ ಅಧಿಕಾರಿಗಳಾಗಿ (permanent commissioned officers) ಸೇರಲು ಇದೊಂದು ಸುವರ್ಣ ಅವಕಾಶವಾಗಲಿದೆ. ಇಲ್ಲಿ ಸ್ಟೈಫಂಡ್ ಜೊತೆಗೆ ಒಂದು ವರ್ಷದ ಕೋರ್ಸ್‌ ಪೂರ್ಣಗೊಳಿಸಬೇಕಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಹತೆ, ಆಯ್ಕೆ ಪ್ರಕ್ರಿಯೆ, ತರಬೇತಿ ಮತ್ತು ಅರ್ಜಿ ಸಲ್ಲಿಕೆ ವಿಧಾನದ ಕುರಿತ ವಿವರ ಇಲ್ಲಿದೆ.

ತಾಂತ್ರಿಕ ಪದವಿ ಕೋರ್ಸ್ (TGC-142) ಅಡಿಯಲ್ಲಿ ಭಾರತೀಯ ಸೇನಾ ನೇಮಕಾತಿಯಲ್ಲಿ ಅವಿವಾಹಿತ ಪುರುಷ ಎಂಜಿನಿಯರಿಂಗ್ ಪದವೀಧರರು ಭಾಗಿಯಾಗಬಹುದು. ಈ ನೇಮಕಾತಿಯಲ್ಲಿ ಸಾಮಾನ್ಯ ಲಿಖಿತ ಪರೀಕ್ಷೆ ಇರುವುದಿಲ್ಲ. SSB ಸಂದರ್ಶನದ ಮೂಲಕ ಆಫೀಸರ್ ಕೇಡರ್‌ಗೆ ನೇರವಾಗಿ ಅವಕಾಶ ನೀಡುತ್ತದೆ.

ನೇಮಕಾತಿಗೆ ಸಂಬಂಧಿಸಿದ ವಿವರಗಳು

  • ಕೋರ್ಸ್: ತಾಂತ್ರಿಕ ಪದವಿ ಕೋರ್ಸ್ (TGC-142)
  • ತರಬೇತಿ ಪ್ರಾರಂಭ ದಿನಾಂಕ: ಜನವರಿ 2026
  • ತರಬೇತಿ ಮುಕ್ತಾಯ ದಿನಾಂಕ: ಡಿಸೆಂಬರ್ 2026‌ (12 ತಿಂಗಳು)
  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
  • ಅರ್ಜಿ ಸಲ್ಲಿಸುವ ವಿಂಡೋ: 2025ರ ಏಪ್ರಿಲ್ 30ರಂದು ಆರಂಭವಾಗಿದ್ದು ಮೇ 29ರ ಮಧ್ಯಾಹ್ನ 3 ಗಂಟೆಯವರೆಗೆ.
  • ಅಧಿಕೃತ ವೆಬ್‌ಸೈಟ್: joinindianarmy.nic.in

ಅರ್ಹತಾ ಮಾನದಂಡಗಳು

1. ಶೈಕ್ಷಣಿಕ ಅರ್ಹತೆ: ಅರ್ಜಿದಾರರು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಇ. ಅಥವಾ ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ಕೋರ್ಸ್ ಪ್ರಾರಂಭವಾಗುವ ಮೊದಲು ಪದವಿಯಲ್ಲಿ ಉತ್ತೀರ್ಣರಾದ ಪುರಾವೆಯನ್ನು ಸಲ್ಲಿಸಿದರೆ, ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.

2. ವಯಸ್ಸಿನ ಮಿತಿ: ಅಭ್ಯರ್ಥಿಯು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ 20 ರಿಂದ 27 ವರ್ಷಗಳ ನಡುವೆ ಇರಬೇಕು. ಅಂದರೆ ಅಭ್ಯರ್ಥಿಗಳು 1999ರ ಜನವರಿ 2ರಿಂದ 2006ರ ಜನವರಿ 1ರ ನಡುವೆ ಜನಿಸಿರಬೇಕು.

3. ಲಿಂಗ ಮತ್ತು ವೈವಾಹಿಕ ಸ್ಥಿತಿ: ಈ ಕೋರ್ಸ್‌ಗೆ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು.

4. ರಾಷ್ಟ್ರೀಯತೆ: ಭಾರತದ ನಾಗರಿಕರಾಗಿರಬೇಕು, ಅಥವಾ ನೇಪಾಳ/ಭೂತಾನ್‌ನ ಪ್ರಜೆಯಾಗಿರಬೇಕು. 1962ರ ಜನವರಿ 1ಕ್ಕಿಂತ ಮೊದಲು ಭಾರತಕ್ಕೆ ಬಂದ ಟಿಬೆಟಿಯನ್ ನಿರಾಶ್ರಿತರಾಗಿರಬೇಕು.

ಲಿಖಿತ ಪರೀಕ್ಷೆ ಇಲ್ಲ

TGC 142 ನೇಮಕಾತಿ 2025ರ ಪ್ರಮುಖ ಅಂಶವೆಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಇತರ ಅರ್ಹತಾ ನಿಯತಾಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಸೇವಾ ಆಯ್ಕೆ ಮಂಡಳಿ (SSB) ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.

ಎಸ್‌ಎಸ್‌ಬಿ ಸಂದರ್ಶನ ಪ್ರಕ್ರಿಯೆ

  • ಹಂತ 1 - ಸ್ಕ್ರೀನಿಂಗ್ ಪರೀಕ್ಷೆ
  • ಹಂತ 2 - ಸೈಕಾಲಜಿಕಲ್ ಟೆಸ್ಟ್, ಗುಂಪು ಕಾರ್ಯಗಳು, ವೈಯಕ್ತಿಕ ಸಂದರ್ಶನ
  • ಹಂತ 3 - ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ
  • SSB ಕಾರ್ಯಕ್ಷಮತೆ ಮತ್ತು ವೈದ್ಯಕೀಯ ಫಿಟ್‌ನೆಸ್ ಆಧರಿಸಿ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ

SSB ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಡೆಹ್ರಾಡೂನ್‌ನ ಪ್ರತಿಷ್ಠಿತ ಭಾರತೀಯ ಮಿಲಿಟರಿ ಅಕಾಡೆಮಿ (IMA)ಯಲ್ಲಿ 12 ತಿಂಗಳ ಕಠಿಣ ತರಬೇತಿಗೆ ಹಾಜರಾಗಬೇಕು. ಈ ತರಬೇತಿಗೆ ಮಾಸಿಕ 56,400 ರೂ.ನಂತೆ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಗುತ್ತದೆ. ಭಾರತದ ರಕ್ಷಣಾ ಸಿಬ್ಬಂದಿಯ ಭಾಗವಾಗುತ್ತಾರೆ.

ವೇತನ ಮತ್ತು ಸವಲತ್ತುಗಳು

1. ತರಬೇತಿ ಸಮಯದಲ್ಲಿ ಸ್ಟೈಫಂಡ್: ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಸಮಯದಲ್ಲಿ ಅಭ್ಯರ್ಥಿಗಳು ತಿಂಗಳಿಗೆ 56,400 ರೂ. ಸ್ಟೈಫಂಡ್ ಕೊಡಲಾಗುತ್ತದೆ.

2. ಲೆಫ್ಟಿನೆಂಟ್ ಆಗಿ ಯಶಸ್ವಿಯಾಗಿ ನೇಮಕಗೊಂಡ ನಂತರ ಮೂಲ ವೇತನವು 56,100ರಿಂದ 1,77,500ರೂ. ವರೆಗೆ ಇರಲಿದೆ. ಜೊತೆಗೆ ಮಿಲಿಟರಿ ಸೇವಾ ವೇತನ (MSP) ತಿಂಗಳಿಗೆ 15,500 ರೂ. ಇರುತ್ತದೆ. ಇದರೊಂದಿಗೆ DA, HRA, ಸಮವಸ್ತ್ರ ಭತ್ಯೆ, ಸಾರಿಗೆ ಭತ್ಯೆ ಮತ್ತು ಇತರವುಗಳು ಕೂಡಾ ಇರುತ್ತದೆ. ವಾರ್ಷಿಕ ವೇತನ ಪ್ಯಾಕೇಜ್ ಅಂದಾಜು 17ರಿಂದ 18 ಲಕ್ಷ ರೂ. ಇರುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.