ಕನ್ನಡ ಸುದ್ದಿ  /  Nation And-world  /  K Satyanarayana Raju Takes Charge As Canara Bank Md And Ceo

K Satyanarayana Raju: ಕೆನರಾ ಬ್ಯಾಂಕ್‌ಗೆ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ನೇಮಕ, ಕೆ. ಸತ್ಯನಾರಾಯಣ ರಾಜು ಪರಿಚಯ

Canara Bank MD and CEO: ಕೇಂದ್ರ ಸರಕಾರವು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಕೆ. ಸತ್ಯನಾರಾಯಣ ರಾಜು ಅವರನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಿದೆ.

K Satyanarayana Raju: ಕೆನರಾ ಬ್ಯಾಂಕ್‌ಗೆ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ
K Satyanarayana Raju: ಕೆನರಾ ಬ್ಯಾಂಕ್‌ಗೆ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ (Photo- Canara bank website)

ನವದೆಹಲಿ: ಕೇಂದ್ರ ಸರಕಾರವು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಕೆ. ಸತ್ಯನಾರಾಯಣ ರಾಜು ಅವರನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಿದೆ. ಅವರು ಇಂದಿನಿಂದಲೇ ಅನ್ವಯವಾಗುವಂತೆ ಈ ಹುದ್ದೆಗೆ ನೇಮಕವಾಗಿದ್ದು, ಡಿಸೆಂಬರ್‌ 31, 2025ರಂದು ನಿವೃತ್ತಿಯಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿರಲಿದ್ದಾರೆ.

ಕೆ. ಸತ್ಯನಾರಾಯಣ ರಾಜು ಪರಿಚಯ

  • 1965ರಲ್ಲಿ ಜನಿಸಿದ ಸತ್ಯನಾರಾಯಣ ರಾಜು ಭೌತಶಾಸ್ತ್ರ ದಲ್ಲಿ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆಇದ್ದಾರೆ. ಜತೆಗೆ ಸಿಎಐಐಬಿ ವಿದ್ಯಾರ್ಹತೆ ಹೊಂದಿದ್ದಾರೆ.
  • ಇವರು ವಿಜಯ ಬ್ಯಾಂಕ್‌ಗೆ 1988 ಸೇರಿದರು. ಬಳಿಕ ಬ್ಯಾಂಕ್‌ ಆಫ್‌ ಬರೋಡಾದ ಚೀಫ್‌ ಜನರಲ್‌ ಮ್ಯಾನೇಜರ್‌ ಹುದ್ದೆಯ ಹಂತದವರೆಗೆ ಬೆಳೆದರು. ತನ್ನ 33 ವರ್ಷದ ದೀರ್ಘ ಬ್ಯಾಂಕಿಂಗ್‌ ಕರಿಯರ್‌ನಲ್ಲಿ ಇವರು ವಿವಿಧ ಶಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
  • ಶಿವಮೊಗ್ಗ, ವಿಜಯವಾಡ, ಹೈದರಾಬಾದ್‌ ಮತ್ತು ಮುಂಬೈಯಲ್ಲಿ ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ಪ್ರಾದೇಶಿಕ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
  • ಬ್ಯಾಂಕ್‌ನ ಪ್ರಮುಖ ವಲಯವಾದ ಮುಂಬೈ ಝೋನ್‌ನಲ್ಲಿ ಮುಖ್ಯಸ್ಥರಾಗಿದ್ದರು.
  • ಬ್ರ್ಯಾಂಚ್‌ ಬ್ಯಾಂಕಿಂಗ್‌, ಕಾರ್ಪೊರೇಟ್‌ ಕ್ರೆಡಿಟ್‌, ರಿಟೇಲ್‌ ಕ್ರೆಡಿಟ್‌, ಅಗ್ರಿ ಫೈನಾನ್ಸಿಂಗ್‌, ಕ್ರೆಡಿಟ್‌ ಮಾನಿಟರಿಂಗ್‌, ಕ್ರೆಡಿಟ್‌ ರಿಕವರಿ ಇತ್ಯಾದಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
  • ಬ್ಯಾಂಕ್‌ ಆಫ್‌ ಬರೋಡಾದ ಅಂಗಸಂಸ್ಥೆಯಾದ ಬಿಒಬಿ ಫೈನಾನ್ಶಿಯಲ್‌ ಸೊಲ್ಯುಷನ್ಸ್‌ ಲಿಮಿಟೆಡ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
  • ಬಿಒಬಿ- ಐಐಟಿ ಇನ್ನೋವೇಷನ್‌ ಕೇಂದ್ರದ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
  • ಇವರು ಕೆನರಾ ಬ್ಯಾಂಕ್‌ನ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿ 2021ರ ಮಾರ್ಚ್‌ 10ರಂದು ಅಧಿಕಾರ ವಹಿಸಿಕೊಂಡಿದ್ದರು.

ಕೆನರಾ ಬ್ಯಾಂಕ್‌ನ ಲಾಭ ಹೆಚ್ಚಳ

ಇತ್ತೀಚೆಗೆ ಕೆನರಾ ಬ್ಯಾಂಕ್‌ ಡಿಸೆಂಬರ್ ತ್ರೈಮಾಸಿಕದ ವರದಿ ಪ್ರಕಟಿಸಿದೆ. ಬ್ಯಾಂಕ್‌ನ ಲಾಭದಲ್ಲಿ ಶೇಕಡ 92ರಷ್ಟು ಏರಿಕೆ ಆಗಿದೆ. ಬಡ್ಡಿಯಿಂದ ಸಿಗುವ ಆದಾಯವು ಹೆಚ್ಚಳ ಆಗಿದ್ದು ಹಾಗೂ ಅನುತ್ಪಾದಕ ಸಾಲಗಳ ಪ್ರಮಾಣವು ಕಡಿಮೆ ಆಗಿದೆ.

2022–23ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ 2,882 ಕೋಟಿ ರೂಪಾಯಿ ಲಾಭ ದಾಖಲಿಸಿದೆ.ಇದಕ್ಕೂ ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಲಾಭ 1,502 ಕೋಟಿ ರೂಪಾಯಿ ಆಗಿತ್ತು. ಬಡ್ಡಿಯಿಂದ ಸಿಗುವ ಆದಾಯವು 22,231 ಕೋಟಿಗೆ ಹೆಚ್ಚಳವಾಗಿದೆ. ಆದರೆ, ಕಳೆದ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಇದು ಕೇವಲ 17,701 ಕೋಟಿ ರೂ. ಆಗಿದೆ. ಹಿಂದಿನ ವರ್ಷಕ್ಕಿಂತ ಕೊಂಚ ಕಡಿಮೆ ಲಾಭ ಪಡೆದಿದೆ.

ಕೆನರಾ ಬ್ಯಾಂಕ್‌ ಬಗ್ಗೆ

ವಿಕಿಪೀಡಿಯಾದಲ್ಲಿರುವ ಮಾಹಿತಿಯಂತೆ, ಕೆನರಾ ಬ್ಯಾಂಕ್ 1906 ರಲ್ಲಿ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಸ್ಥಾಪಿತವಾಯಿತು. ಅಮ್ಮೆಂಬಾಳ್ ಸುಬ್ಬರಾವ್ ಪೈ ಇದರ ಸ್ಥಾಪಕರು. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೆನರಾ ಬ್ಯಾಂಕ್ ಸಹ ಒಂದು. ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು 1910 ರಲ್ಲಿ ಬದಲಾಯಿಸಲಾಯಿತು. ಇದನ್ನು 19 ಜುಲೈ, 1969ರಲ್ಲಿ ರಾಷ್ಟ್ರೀಕರಿಸಲಾಯಿತು. ಭಾರತವಲ್ಲದೇ ಲಂಡನ್, ಮಾಸ್ಕೋ, ಹಾಂಗ್‌ಕಾಂಗ್, ದೋಹಾ, ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ. ಇತ್ತೀಚಿಗೆ ಅಂದರೆ 2020ರ ಏಪ್ರಿಲ್‌ 1ರಂದು ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ವಿಲೀನಗೊಂಡಿತ್ತು.

IPL_Entry_Point