ಕರ್ನಾಟಕ ಹೈಕೋರ್ಟ್‌ನಲ್ಲಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ ದಾಖಲಿಸಿದ ಕೇಸ್; ಆಕ್ಷೇಪಣೆ ಸಲ್ಲಿಸಿದ ಕೇಂದ್ರ ಸರ್ಕಾರ, ವಿಚಾರಣೆ ಏ 3ಕ್ಕೆ
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಪ್ರಕಾರ ಕೇಂದ್ರ ಸರ್ಕಾರ ನೀಡಿದ ನೋಟಿಸ್ ಬಗ್ಗೆ ಮೈಕ್ರೋಬ್ಲಾಗಿಂಗ್ ತಾಣ ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಿಸಿದ ದಾವೆಯ ವಿಚಾರಣೆ ಗುರುವಾರ (ಮಾರ್ಚ್ 27) ನಡೆಯಿತು. ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿದ ಬಳಿಕ ವಿಚಾರಣೆ ಏಪ್ರಿಲ್ 3ಕ್ಕೆ ಮುಂದೂಡಲ್ಪಟ್ಟಿದೆ.

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (3)(ಬಿ) ಪ್ರಕಾರ ಅನುಚಿತ ಕಂಟೆಂಟ್ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ವಾರದ ಹಿಂದೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ (ಮಾರ್ಚ್ 27) ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ಅನ್ನು ಸಲ್ಲಿಸಿದ್ದು, ಎಕ್ಸ್ ತಾಣವು ಮಧ್ಯವರ್ತಿ ಕಟ್ಟುಪಾಡುಗಳನ್ನು ತಪ್ಪಿಸವುದಕ್ಕೆ ಪ್ರಯತ್ನಿಸುತ್ತಿದೆ. ಥರ್ಡ್ ಪಾರ್ಟಿ ಕಂಟೆಂಟ್‌ಗೆ ಅವಕಾಶ ಕೊಟ್ಟು ಅದರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಪ್ರತಿಪಾದಿಸಿದೆ. ಕರ್ನಾಟಕ ಹೈಕೋರ್ಟ್ ಈ ಕೇಸ್‌ನ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರ vs ಎಕ್ಸ್; ಕರ್ನಾಟಕ ಹೈಕೋರ್ಟ್‌ನಲ್ಲಿ ಏನಾಯಿತು
ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚಿನ ರಣವೀರ್ ಅಲಹಾಬಾಡಿಯಾ ಪ್ರಕರಣದಲ್ಲಿ ನೀಡಿದ ಅವಲೋಕನಗಳನ್ನು ಕೇಂದ್ರ ಸರ್ಕಾರವು ಉಲ್ಲೇಖಿಸಿದೆ. ಅಪೆಕ್ಸ್ ಕೋರ್ಟ್ ಸಹ ಸಾಮಾಜಿಕ ಮಾಧ್ಯಮದಲ್ಲಿ ಕಾನೂನುಬಾಹಿರ ಅನುಚಿತ ಕಂಟೆಂಟ್‌ಗಳಿಂದ ಉಂಟಾಗುವ ಸಮಸ್ಯೆಗಳನ್ನು ಮತ್ತು ಮಧ್ಯವರ್ತಿಗಳ ಸರಿಯಾದ ಶ್ರದ್ಧೆ ಕಟ್ಟುಪಾಡುಗಳ ಮಹತ್ವವನ್ನು ಗುರುತಿಸಿತ್ತು.
ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣೆ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ಈ ಎಲ್ಲ ವಿಷಯಗಳನ್ನು ನಮೂದಿಸಿದೆ. ಕೇಂದ್ರ ಸರ್ಕಾರವು ಎಕ್ಸ್ ಸಲ್ಲಿಸಿರುವ ದಾವೆಯನ್ನು ಸಾರಾಸಗಟಾಗಿ ವಜಾಗೊಳಿಸುವಂತೆ ನ್ಯಾಯಪೀಠವನ್ನು ಕೋರಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದು, ಹಿರಿಯ ನ್ಯಾಯವಾದಿ ಕೆಜಿ ರಾಘವನ್ ಎಕ್ಸ್ ಪರವಾಗಿ ವಾದ ಮಂಡಿಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಬಗ್ಗೆ ಕೇಂದ್ರ ಸರ್ಕಾರ ಹೇಳಿರುವುದೇನು
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ರ ರಕ್ಷಣೆ ಸಾಂವಿಧಾನಿಕ ಹಕ್ಕಲ್ಲ. ಆದರೆ ಮಧ್ಯವರ್ತಿ ಕರ್ತವ್ಯಗಳೊಂದಿಗೆ ಅಂತರ್ಗತವಾದ ಅಂಶಗಳನ್ನು ಒಳಗೊಂಡಿದೆ. ರಾಷ್ಟ್ರಹಿತ ಕಾಪಾಡುವಂತಹ ಸರಿಯಾದ ವರ್ತನೆಯನ್ನು ಪ್ರದರ್ಶಿಸಿದರೆ ಮಾತ್ರವೇ ಲಭ್ಯವಿರುವ ಷರತ್ತುಬದ್ಧ ರಕ್ಷಣೆ ಅದು ಎಂದು ಕೇಂದ್ರವು ತನ್ನ ಲಿಖಿತ ಸಲ್ಲಿಕೆಯಲ್ಲಿ ವಾದಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಮತ್ತು ಸೆಕ್ಷನ್ 79 (3) (ಬಿ) ನಡುವೆ ವ್ಯತ್ಯಾಸವನ್ನು ಹೊಂದಿದೆ. ವಿಭಿನ್ನ ಗುರಿಗಳನ್ನು ಹೊಂದಿದೆ. "ಎರಡು ಪರಸ್ಪರ ಪ್ರತ್ಯೇಕ ಉದ್ದೇಶಗಳೊಂದಿಗೆ" ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಸೆಕ್ಷನ್ 69 ಎ, ದಂಡ ಪರಿಣಾಮಗಳೊಂದಿಗೆ “ಆದೇಶ” ನೀಡಿದರೆ, ಸೆಕ್ಷನ್ 79 (3) (ಬಿ)" ನೋಟಿಸ್ ಜಾರಿಗೆ ಅವಕಾಶ ಮಾಡಿಕೊಡುತ್ತದೆ. ಅದನ್ನು "ನಿರ್ಲಕ್ಷಿಸಿದರೆ, ಸೆಕ್ಷನ್ 79 (1) ರ ಪ್ರಕಾರ ಇರುವ ಶಾಸನಬದ್ಧ ರಕ್ಷಣೆಯನ್ನು ತೆರವು ಮಾಡುತ್ತದೆ. ಸೆಕ್ಷನ್ 79 ಕೇವಲ ನೋಟಿಸ್ ಜಾರಿಗೊಳಿಸಿ ಮಾಹಿತಿ ನೀಡುವುದಕ್ಕೆ ಮಾತ್ರ ಅನುಮತಿಸುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (3) (ಬಿ)ಯನ್ನು ಅನುಸರಿಸುವಾಗ ಅದರ ಜತೆಗೆ ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ನಿಯಮ 3(1) ಕೂಡ ಸೇರಿಸಬೇಕು. ಅದರಲ್ಲಿ “ಅಗತ್ಯ ರಕ್ಷಣೆ” ಇದ್ದು, ಅದು ಅಧಿಕೃತ ಏಜೆನ್ಸಿಗೆ ಆ ರಕ್ಷಣೆಯನ್ನು ಒದಗಿಸುತ್ತದೆ. ಸರ್ಕಾರ ಮಾತ್ರವೇ ಈ ನೋಟಿಸ್ ಜಾರಿಗೊಳಿಸುವುದಕ್ಕೆ ಅಧಿಕಾರ ಹೊಂದಿದೆ. ಭಾರತ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಈ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (3) (ಬಿ)ಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಳಸಬಹುದು. ಆದರೆ ಸೆಕ್ಷನ್ 69 ಎ ಯನ್ನು ಕೇಂದ್ರ ಸರ್ಕಾರ ಮಾತ್ರ ಬಳಸುತ್ತದೆ. cle 226.

ವಿಭಾಗ