ಕನ್ನಡ ಸುದ್ದಿ  /  Photo Gallery  /  Karnataka Sangha Qatar Karnataka Rajyotsava 2022 Celebrated In Doha Qatar

Karnataka Sangha Qatar: ಕರ್ನಾಟಕ ಸಂಘ ಕತಾರ್‌ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮಾಚರಣೆ ಫೋಟೋ ವರದಿ ಇಲ್ಲಿದೆ

Karnataka Sangha Qatar: ದೋಹಾದ ಡಿ ಪಿ ಎಸ್ ಶಾಲೆಯ 1000ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಕರ್ನಾಟಕ ಸಂಘ ಕತಾರ್, 67ನೇ ಕರ್ನಾಟಕ ರಾಜ್ಯೋತ್ಸವನ್ನು ನವೆಂಬರ್‌ 4ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು. ಇದರ ಸಚಿತ್ರ ವರದಿ ಇಲ್ಲಿದೆ ಗ

ಬಾರಿಸು ಕನ್ನಡ ದಿಂಡಿಮವ ಗಾನದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ ಶುರುವಾಯಿತು. ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ವಿಶೇಷ. ಸುಮಾ ಮಹೇಶ್ ಗೌಡ  ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವ ಅತಿಥಿ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.
icon

(1 / 6)

ಟಿ.ಎಸ್. ನಾಗಾಭರಣ ಅವರಿಗೆ ಕತಾರ್ ಕನ್ನಡ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಟಿ ಎಸ್ ನಾಗಾಭರಣ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಘವು ನೆಡೆಸುತ್ತಿರುವ ಕನ್ನಡ ಶಾಲೆಯ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೆಡೆಸುತ್ತಿರುವ ಅಭಿಯಾನಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು. ಸಂಘದ ಸದಸ್ಯರು ಅನೂಪ್ ಭಂಡಾರಿ ಹಾಗೂ ಟಿ ಎಸ್ ನಾಗಾಭರಣ ಅವರ ಹಾಡುಗಳ ನೃತ್ಯ ಪ್ರದರ್ಶನ ಮಾಡಿದರು. ಕನ್ನಡ ಉಳಿಸಿ ಬೆಳೆಸಿ ಎಂಬ ನೀತಿ ಕಥೆಯ ನಾಟಕ ಪ್ರದರ್ಶನ ಮಾಡಿದರು.
icon

(2 / 6)

ರವಿ ಹೆಗ್ಡೆ ಅವರು ತಮ್ಮ ಭಾಷಣದಲ್ಲಿ ಸಂಘದ ಕಾರ್ಯಗಳಿಗೆ ಅವರ ಮಾಧ್ಯಮದಿಂದ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತಾ, ತಂತ್ರಜ್ಞಾನದ ಉಪಯೋಗದಿಂದ ಹೇಗೆ ಭಾಷಾ ಬೆಳೆವಣಿಗೆ ಸಾಧ್ಯ ಎಂದು ತಿಳಿಸಿದರು.
icon

(3 / 6)

ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿರುವ ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿ, ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು.  ಯೋಗಿ ಗೌಡ ಅವರ ಚಿತ್ರ ನಟರು, ರಾಜಕೀಯ ವ್ಯಕ್ತಿಗಳು ಹಾಗೂ ಪತ್ರಿಕಾ ಮಾಧ್ಯಮದ ದಿಗ್ಗಜರ ಮಿಮಿಕ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
icon

(4 / 6)

ಕಾರ್ಯಕ್ರಮದಲ್ಲಿ ಪ್ರಸಿದ್ದ ನಟ, ನಿರ್ದೇಶಕ ಟಿ ಎಸ್ ನಾಗಾಭರಣ, ಕನ್ನಡ ಪ್ರಭ, ಸುವರ್ಣ ನ್ಯೂಸ್‌ನ ಮುಖ್ಯಸ್ಥ ರವಿ ಹೆಗ್ಡೆ, ಪ್ರಸಿದ್ದ ನಟ, ನಿರ್ದೇಶಕ ಅನೂಪ್ ಭಂಡಾರಿ, ಪ್ರಸಿದ್ದ ಮಿಮಿಕ್ರಿ ಕಲಾವಿದ ಯೋಗಿ ಗೌಡ, ಭಾರತ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಪಾಲ್ಗೊಂಡಿದ್ದರು.
icon

(5 / 6)

ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಸಂಜನಾ ಜೀವನ್ ಸಂಯೋಜಿಸಿದ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತಿರುವ ಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ನೃತ್ಯವು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಸಂಘದ ಅಧ್ಯಕ್ಷ ಮಹೇಶ್ ಗೌಡ ಸ್ವಾಗತಿಸಿದರು. ಕರ್ನಾಟಕ ಸಂಘ ಹಾಗೂ ಅದರ  ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ರಾಜ ಮನೆತನ,  ದೇಶ ಪ್ರೇಮ ಹಾಗೂ ಅಪ್ಪು ಸ್ಮರಣಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.ಸಂಘದ  ಸಾಂಸ್ಕೃತಿಕ ಕಾರ್ಯದರ್ಶಿ ಸುಶೀಲ ಸುನಿಲ್ ವಂದಿಸಿದರು.
icon

(6 / 6)

IPL_Entry_Point

ಇತರ ಗ್ಯಾಲರಿಗಳು