Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಕ್ಷೇತ್ರ ನಿರ್ಮಾಣಕ್ಕೆ ಸಮಿತಿ ಸಭೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಕ್ಷೇತ್ರ ನಿರ್ಮಾಣಕ್ಕೆ ಸಮಿತಿ ಸಭೆ

Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಕ್ಷೇತ್ರ ನಿರ್ಮಾಣಕ್ಕೆ ಸಮಿತಿ ಸಭೆ

Kasaragod News: ಕಾಸರಗೋಡು ಜಿಲ್ಲೆ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಇತ್ತೀಚೆಗೆ ಎಡನೀರಿನಲ್ಲಿ ನಡೆಯಿತು.

ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಇತ್ತೀಚೆಗೆ ಎಡನೀರಿನಲ್ಲಿ ನಡೆಯಿತು.
ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಇತ್ತೀಚೆಗೆ ಎಡನೀರಿನಲ್ಲಿ ನಡೆಯಿತು.

ಕಾಸರಗೋಡು: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ, ಕ್ಷೇತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕೆ ಸಂಬಂಧಿಸಿ, ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಇತ್ತೀಚೆಗೆ ನಡೆಯಿತು. ಎಡನೀರು ಶ್ರೀ ಮಠದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಭೆ ಜರಗಿತು.

ಮಹಾಸಭೆಯ ಅಧ್ಯಕ್ಷೆ ವಹಿಸಿದ್ದ ನವೀನ ಕುಮಾರ.ಭಟ್ ಕುಂಜರಕಾನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಕ್ರೋಡೀಕರೀಸಿ ಸಭೆಗೆ ತಿಳಿಸಿದರು. ಅಲ್ಲದೆ, ಮುಂದೆ ಕೈಗೊಳ್ಳಬೇಕಾದ, ಅನುಷ್ಠಾನಗೊಳಿಸಬೇಕಾದ ಹಂತಗಳ ವಿವರವನ್ನು ನೀಡಿದರು.

ಬದಿಯಡ್ಕದ ವಸಂತ ಪೈ ಮಾತನಾಡಿ, ದೇವಸ್ಥಾನ ನಿರ್ಮಾಣದ ಮಹತ್ವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳಿದರು. ನಾವು ಹೂವಿನ ಎಸಳನ್ನು ಭಗವಂತನಿಗೆ ಕೊಟ್ಟರೆ ನಮಗೆ ಹೂವಿನ ರಾಶಿಯನ್ನೇ ಭಗವಂತನು ನೀಡುತ್ತಾನೆ ಎಂದರು.

ಸಭೆಯಲ್ಲಿ ವಿವಿಧ ಪ್ರಾದೇಶಿಕ ಸಮಿತಿ ,ಮಹಿಳಾ ಸಮಿತಿ,ಯುವಜನ ಸಮಿತಿಗಳನ್ನು ರೂಪೀಕರಿಸಲು ತೀರ್ಮಾನಿಸಲಾಯಿತು. ವಿಜ್ಞಾಪನ ಪತ್ರ ಕುರಿತು ಚರ್ಚಿಸಲಾಯಿತು.

ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಭಾಗವಹಿಸಿದ ಸ್ಥಳೀಯರು.
ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಭಾಗವಹಿಸಿದ ಸ್ಥಳೀಯರು.

ಕೆ.ವಿ.ಬಾಲಕೃಷ್ಣ ಆಚಾರಿ, ಅಂಬಾಡಿ ಪಾಟಾಳಿ ಕಳೇರಿ, ವಾಸುದೇವ ಭಟ್ ಚೂರಿಮೂಲೆ,ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕೆ.ಯಂ ಶರ್ಮ ಎಡನೀರು ಸ್ವಾಗತಿಸಿ ನಿರೂಪಣೆ ಮಾಡಿದರು. ಈಶ್ವರ ಭಟ್ ಸಮಿತಿಯ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಪ್ರಶಾಂತ ಕಲ್ಲುಗದ್ದೆ, ರಾಜನ್ ಮುಳಿಯಾರು ವಿಜ್ಞಾಪನೆ ಪತ್ರ ಕುರಿತು ವಿವರಣೆ ನೀಡಿದರು. ಜಗನ್ನಾಥ ಕೆ ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆ ಮಾಡಿದರು.

ಗಮನಿಸಬಹುದಾದ ಸುದ್ದಿಗಳು

1) ಏನಿದು ಕೋಟಿ ಕಂಠ ಗಾಯನ?

Koti kanta gayana Explained : ಕನ್ನಡ ಹಬ್ಬ, ಕರುನಾಡ ರಾಜ್ಯೋತ್ಸವಕ್ಕೂ ಮುನ್ನ ಜಗತ್ತಿನಾದ್ಯಂತ ಆಗಸ, ನೆಲ, ಜಲಗಳಿಂದ ಕನ್ನಡ ʻಕೋಟಿʼ ಕಂಠ ಗಾಯನ ಅನುರಣಿಸಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ತಯಾರಿ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಹೇಳಿರುವುದೇನು? ಇಲ್ಲಿದೆ ವಿವರ.

2) 'ದೇಶದ ಎಲ್ಲ ರಾಜ್ಯಗಳಲ್ಲೂ 2024ರ ವೇಳೆಗೆ ಎನ್‌ಐಎ ಶಾಖೆ ಸ್ಥಾಪನೆ'

ಪ್ರಸ್ತುತ ದೆಹಲಿ, ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಖನೌ, ಮುಂಬೈ, ಕೋಲ್ಕತ್ತಾ, ರಾಯಪುರ, ಜಮ್ಮು, ಚಂಡೀಗಢ, ರಾಂಚಿ, ಚೆನ್ನೈ, ಇಂಫಾಲ್, ಬೆಂಗಳೂರು ಮತ್ತು ಪಾಟ್ನಾದಲ್ಲಿ ಎನ್‌ಐಎ 15 ಶಾಖೆಗಳನ್ನು ಹೊಂದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

3) ಪ್ರಧಾನಿ ಮೋದಿ ನ.11ಕ್ಕೆ ಬೆಂಗಳೂರಿಗೆ

ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಮೋ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸಿದ್ಧತೆ ಕುರಿತು ಸಿಎಂ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

4) ಹಾಡಿನ ಜತೆಗೆ ಹೆಜ್ಜೆ ಹಾಕಿದ ಸಿ.ಟಿ.ರವಿ

Koti Kanta Gayana: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ಚಿಕ್ಕಮಗಳೂರಲ್ಲೂ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಬಸವರಾಜ್‌, ಶಾಸಕ ಸಿ.ಟಿ.ರವಿ ಮತ್ತು ಇತರೆ ಗಣ್ಯರು ಭಾಗವಹಿಸಿದ್ದರು. ಸಿ.ಟಿ.ರವಿ ಹಾಡಿನ ಜತೆಗೆ ಹೆಜ್ಜೆ ಹಾಕಿದ್ದು ಗಮನಸೆಳೆಯಿತು. ವಿಡಿಯೋ ಇಲ್ಲಿದೆ.

5) ಮೈಸೂರು ಅರಮನೆ ಎದುರು ಕೋಟಿ ಕಂಠ ಗಾಯನ

Koti Kanta Gayana: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಮೈಸೂರು ಅರಮನೆ ಎದುರು ಬೃಹತ್‌ ವೇದಿಕೆಯಲ್ಲಿ ಕೋಟಿ ಕಂಠ ಗಾಯನ ನಡೆಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪ ಸಿಂಹ ಮತ್ತು ಇತರೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಡಿಯೋ ಇಲ್ಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.