ಕನ್ನಡ ಸುದ್ದಿ  /  Photo Gallery  /  Kasaragod News: Mopala Shree Mahavishnu Temple Committee Meeting At Edneer And Yuvajana Committee Constituted

Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಯುವಜನ ಸಮಿತಿ ರಚನೆ

Kasaragod News: ಕಾಸರಗೋಡು ಜಿಲ್ಲೆ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆ ಇತ್ತೀಚೆಗೆ ಎಡನೀರಿನಲ್ಲಿ ನಡೆಯಿತು. ಸಭೆಯಲ್ಲಿ ಯುವಜನ ಸಮಿತಿ ರಚಿಸಲಾಯಿತು. 

ಚೆರ್ಕಳ-ಕಲ್ಲಡ್ಕ ರಸ್ತೆಯ ಎಡನೀರು ಸಮೀಪ ಶಿಥಿಲ ಸ್ಥಿತಿಯಲ್ಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಯುವಜನ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ (ನ.6) ಎಡನೀರಿನಲ್ಲಿ ನಡೆಯಿತು. ದೇವಸ್ಥಾನ ಸುಮಾರು 450 ವರ್ಷ ಹಿಂದೆ ಶಿಥಿಲವಾಗಿ ಹೋಗಿತ್ತು. ಶ್ರೀ ಎಡನೀರು ಸಚ್ಚಿದಾನಂದ ಶ್ರಿಪಾದಂಗಳವರ ದಿವ್ಯ ಅನುಗ್ರಹದೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ನವೀನ ಕುಮಾರ ಭಟ್ ಕುಂಜರಕಾನ ವಹಿಸಿದ್ದರು. ಅವರು ಕ್ಷೇತ್ರ ನಿರ್ಮಾಣದ ಕುರಿತು ಮುಂದಿನ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದರು.
icon

(1 / 3)

ಯುವಜನ ಸಮಿತಿ ರಚನೆ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು. ಯುವಜನ ಸಮಿತಿ ಅಧ್ಯಕ್ಷ - ರಾಜನ್ ಮುಳಿಯಾರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಲ್ಲುಗದ್ದೆ, ಖಜಾಂಜಿ - ಹರೀಶ್ ಚಾಪಾಡಿ, ಉಪಾಧ್ಯಕ್ಷರು - ಹರಿ ಪ್ರಸಾದ್ ಕೆ.ಕೆ.ಪುರಂ, ಸುರೇಶ್ ಬಾಬು ಕಾನತ್ತೂರು, ಪ್ರಸಾದ್ ಬೇವಿಂಜೆ, ಅಗ್ನೇಷ್ ಕಳೆರಿ, ಕೃಷ್ಣ ಚಾಪಾಡಿ. ಜತೆ ಕಾರ್ಯದರ್ಶಿಗಳು - ಸತೀಶ್ ಕೆಮ್ಮಂಗ್ಗಾಯ, ಕೃಷ್ಣ ಬೋಳುಗುಡ್ಡೆ, ಸಂಜೀವ ಚೆಂಬೈಲ್, ರಂಜಿತ್ ಕೆ.ಕೆ.ಪುರಂ, ಸತೀಶ್ ಚಾಪಾಡಿ.
icon

(2 / 3)

ಯುವ ಜನ ಸಮಿತಿ ಅಧ್ಯಕ್ಷ ರಾಜನ್ ಮುಳಿಯಾರ್, ಪ್ರಸಾದ್ ಬೇವಿಂಜೆ, ಸುರೇಶ್ ಬಾಬು ಕಾನತ್ತೂರು, ಕೆ.ವಿ.ಬಾಲಕೃಷ್ಣ ಆಚಾರಿ , ವಾಮನ ಆಚಾರ್ಯ ಬೋವಿಕಾನ , ವಾಸುದೇವಭಟ್ ಚೂರಿಮೂಲೆ ಮೊದಲಾದವರು ಮಾತನಾಡಿದರು. ಕೆ.ಎಂ .ಶರ್ಮ ಎಡನೀರು ಸ್ವಾಗತಿಸಿ ವಿವಿಧ ಸಮಿತಿಗಳ ರಚನೆ ಕುರಿತು ವಿವರಿಸಿದರು. ಸತೀಶ್ ಕೆಮ್ಮಂಗಾಯಾ ವಂದಿಸಿದರು.
icon

(3 / 3)

IPL_Entry_Point

ಇತರ ಗ್ಯಾಲರಿಗಳು