Kerala Lottery: ಓಣಂ ಲಾಟರಿಯಲ್ಲಿ ಗೆಲುವು, ಒಂದೇ ದಿನದಲ್ಲಿ 25 ಕೋಟಿ ರೂ. ಒಡೆಯನಾದ ಕೇರಳದ ಆಟೋ ಚಾಲಕ
ಕೇರಳದ ರಿಕ್ಷಾ ಚಾಲಕನೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ಒಂದು ದಿನದ ಹಿಂದೆ ಆತ ಖರೀದಿಸಿದ ಲಾಟರಿಗೆ ಬರೊಬ್ಬರಿ 25 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಈತ ಈ ಭರ್ಜರಿ ಮೊತ್ತವನ್ನುಗೆದ್ದಿದ್ದಾನೆ.
ತಿರುವನಂತಪುರ: ಕೇರಳದ ರಿಕ್ಷಾ ಚಾಲಕನೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ಒಂದು ದಿನದ ಹಿಂದೆ ಆತ ಖರೀದಿಸಿದ ಲಾಟರಿಗೆ ಬರೊಬ್ಬರಿ 25 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಈತ ಈ ಭರ್ಜರಿ ಮೊತ್ತವನ್ನುಗೆದ್ದಿದ್ದಾನೆ.
ತಿರುವನಂತಪರುದ ಶ್ರೀವರಹಂ ಎಂಬಲ್ಲಿನ ಅನೂಪ್ ಎಂಬ ವಾಹನ ಚಾಲಕ ಈ ಅದೃಷ್ಟವಂತ. ಓಣಂ ಲಾಟರಿಯಲ್ಲಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ. ಅನೂಪ್ ಒಂದು ದಿನದ ಹಿಂದೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ತಿರುವನಂತಪುರದ ಪಜವಂಗಡಿಯ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದಾರೆ.
ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಮೂಲಕ ಇವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಲಾಟರಿ ಏಜೆಂಟ್ ತಂಗರಾಜ್ ಎಂಬುವರಿಂದ ಖರೀದಿಸಿದ ಈ ಲಾಟರಿಯಿಂದ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದು, ಕೇರಳ ಮಾತ್ರವಲ್ಲದೆ ದೇಶ-ವಿದೇಶದಲ್ಲಿಯೂ ಸುದ್ದಿಯಾಗಿದ್ದಾರೆ.
ಆಟೋ ಚಾಲಕ ಅನೂಪ್ ತೀವ್ರ ಬಡತನದಲ್ಲಿದ್ದ ವ್ಯಕ್ತಿ. ಆಟೋ ಸಂಪಾದನೆಯಿಂದ ಕಷ್ಟದಿಂದಲೇ ಜೀವನ ಸಾಗುತ್ತಿತ್ತು. ಅಚ್ಚರಿಯೆಂದರೆ, ಈ ಲಾಟರಿ ಟಿಕೆಟ್ ದರ 500 ರೂಪಾಯಿ. ಈ ಟಿಕೆಟ್ ಖರೀದಿಸಲು ಅವರಲ್ಲಿ ಹಣ ಇರಲಿಲ್ಲ. ತನ್ನ ಮಗಳ ಪಿಗ್ಗಿ ಡಬ್ಬಿಯಲ್ಲಿದ್ದ ಐನೂರು ರೂ. ತೆಗೆದುಕೊಂಡು ಹೋಗಿ ಲಾಟರಿ ಖರೀದಿಸಿದ್ದಾರೆ.
ಮಗಳ ಅದೃಷ್ಟದ ಫಲವೋ ಎಂಬಂತೆ ಅದೇ ಹಣದಿಂದ ಖರೀದಿಸಿದ ಲಾಟರಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ನಿನ್ನೆ ಮಧ್ಯಾಹ್ನ ಎರಡು ಗಂಟೆಗೆ ಕೇರಳದ ಹಣಕಾಸು ಸಚಿವರಾದ ಕೆ. ಎನ್. ಬಾಲಗೋಪಾಲ್ ಅವರು ಲಾಟರಿ ಬಹುಮಾನ ಫಲಿತಾಂಶ ಪ್ರಕಟಿಸಿದ್ದಾರೆ.
ವಿಜೇತ ಟಿಕೆಟ್ ಸಂಖ್ಯೆ ಪ್ರಕಟವಾದ ಬಳಿಕ ಇಪ್ಪತ್ತೈದು ಕೋಟಿ ರೂ. ಬಹುಮಾನ ಗೆದ್ದ ಅದೃಷ್ಟಶಾಲಿ ಯಾರು ಎಂಬ ಕುತೂಹಲ ಎಲ್ಲರಿಗೂ ಆರಂಭವಾಯಿತು. ಈ ಸಂಖ್ಯೆಯ ಲಾಟರಿ ಸಂಖ್ಯೆ ಯಾವ ವಿತರಕರಲ್ಲಿ ಇತ್ತು ಎಂಬ ಮಾಹಿತಿ ಪಡೆಯಲಾಯಿತು. ತಿರುವನಂತಪುರಂ ಪಜವಂಗಡಿಯ ಏಜೆನ್ಸಿಯಿಂದ ವ್ಯಕ್ತಿಯೊಬ್ಬರು ಟಿಕೆಟ್ ಖರೀದಿಸಿದ್ದನ್ನು ಕಂಡುಕೊಳ್ಳಲಾಯಿತು. ಬಳಿಕ ಆಟೋಚಾಲಕನೇ ಈ ಅದೃಷ್ಟಶಾಲಿ ಎಂಬ ಮಾಹಿತಿ ಬಹಿರಂಗಗೊಂಡಿತು.
ಸದ್ಯ ಅನೂಪ್‌ಗೆ ಈ ಹಣ ಏನು ಮಾಡಬೇಕೆಂದು ತಿಳಿದಿಲ್ಲ. "ಎಲ್ಲರಂತೆ ನಾನೂ ಲಾಟರಿ ಖರೀದಿಸಿದ್ದೆ. ಗೆಲ್ಲುವ ನಿರೀಕ್ಷೆ ಇರಲಿಲ್ಲ. ಈಗಷ್ಟೇ ಬಹುಮಾನ ದೊರಕಿದ ಸುದ್ದಿ ಕೇಳಿದ್ದೇನೆ. ತುಂಬಾ ಖುಷಿಯಾಗಿದೆ. ಈ ಹಣ ಏನು ಮಾಡಬೇಕೆಂದು ಇನ್ನು ಯೋಚಿಸಬೇಕಿದೆʼʼ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಲಾಟರಿ ಮಾರಾಟ ಅಧಿಕೃತವಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಟರಿ ಮಾರಾಟ ನಿಷೇಧಿಸಲಾಗಿದೆ.
ವಿಭಾಗ