Shraddha Muralidharan: ಹೆಂಡತಿ ಕಪ್ಪು, ಗಂಡ ಬಿಳಿ ಎಂದು ವರ್ಣಬೇಧ ಮಾಡಿದವರಿಗೆ ಖಡಕ್‌ ಉತ್ತರ ನೀಡಿದ ಕೇರಳದ ಮಹಿಳಾ ಐಎಎಸ್‌ ಅಧಿಕಾರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shraddha Muralidharan: ಹೆಂಡತಿ ಕಪ್ಪು, ಗಂಡ ಬಿಳಿ ಎಂದು ವರ್ಣಬೇಧ ಮಾಡಿದವರಿಗೆ ಖಡಕ್‌ ಉತ್ತರ ನೀಡಿದ ಕೇರಳದ ಮಹಿಳಾ ಐಎಎಸ್‌ ಅಧಿಕಾರಿ

Shraddha Muralidharan: ಹೆಂಡತಿ ಕಪ್ಪು, ಗಂಡ ಬಿಳಿ ಎಂದು ವರ್ಣಬೇಧ ಮಾಡಿದವರಿಗೆ ಖಡಕ್‌ ಉತ್ತರ ನೀಡಿದ ಕೇರಳದ ಮಹಿಳಾ ಐಎಎಸ್‌ ಅಧಿಕಾರಿ

Sarada Muraleedharan: ಕೇರಳದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವ ಶಾರದಾ ಮುರಳೀಧರನ್ ತಾವು ಎದುರಿಸಿರುವ ವರ್ಣ ಮತ್ತು ಲಿಂಗ ತಾರತಮ್ಯದ ವಿರುದ್ಧ ಸಿಡಿದೆದಿದ್ದಾರೆ. ಕಪ್ಪು ಬಣ್ಣವನ್ನು ನಿಂದಿಸುವವರ ಬಗ್ಗೆ ಅವರು ಹಾಕಿದ ಫೇಸ್‌ಬುಕ್‌ ಪೋಸ್ಟ್ ಈಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.

ಶಾರದಾ ಮುರಳೀಧರನ್
ಶಾರದಾ ಮುರಳೀಧರನ್

Sarada Muraleedharan: ಕೇರಳದ ಮುಖ್ಯ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ ಶಾರದಾ ಮುರಳೀಧರನ್ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವರ್ಣಭೇದ ಹಾಗೂ ಲಿಂಗ ತಾರತಮ್ಯ ಮಾಡುವವರನ್ನು ಕಟುವಾಗಿ ಟೀಕಿಸಿದ್ದಾರೆ ಬರೆದುಕೊಂಡಿದ್ದಾರೆ. ಕಪ್ಪು ಬಣ್ಣವನ್ನು ನಿಂದನೆ ಮಾಡುವವರಿಗೆ ಕಡಕ್ ಕೊಟ್ಟಿರುವ ಅವರು, ಕಪ್ಪು ಎನ್ನುವ ಕಾರಣಕ್ಕೆ ಬಾಲ್ಯದಿಂದಲೂ ತನ್ನೊಳಗೆ ಎಷ್ಟು ಕೀಳರಿಮೆ ಇತ್ತು, ತಾನು ಏನೆಲ್ಲಾ ಅನುಭವಿಸಬೇಕಾಯ್ತು ಎಂಬುದನ್ನೂ ಬರೆದುಕೊಂಡಿದ್ದಾರೆ. ಮಾತ್ರವಲ್ಲ ಈಗ ಇಷ್ಟು ದೊಡ್ಡ ಹುದ್ದೆಗೆ ಬಂದರೂ ಇಲ್ಲೂ ಕೂಡ ಬಣ್ಣದ ಆಧಾರದ ಮೇಲೆ ಜನ ತನ್ನನ್ನು ಕೀಳಾಗಿ ನೋಡುವುದು ನಿಲ್ಲಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕಪ್ಪು ಬಣ್ಣ ಹೊಂದಿರುವ ಕಾರಣಕ್ಕೆ ತಾವು ಎದುರಿಸುತ್ತಿರುವ ಹಾಗೂ ಎದುರಿಸಿದ್ದ ಅನುಭವಗಳ ಬಗ್ಗೆ ಬರೆದುಕೊಂಡಿರುವ ಅವರು ‘ನನಗೆ ಕಪ್ಪು ಬಣ್ಣವೇ ಇಷ್ಟ, ನಾನು ಕಪ್ಪು ಬಣ್ಣವನ್ನೇ ಹೊಂದಲು ಇಷ್ಟಪಡುತ್ತೇನೆ‘ ಎಂದು ಹೇಳಿಕೊಂಡಿದ್ದಾರೆ. ಬಣ್ಣದ ಆಧಾರದಲ್ಲಿ ವೃತ್ತಿ ಸಾಮರ್ಥ್ಯವನ್ನೂ ಕೂಡ ಅಳೆಯುತ್ತಾರೆ ಎಂದಿರುವ ಅವರು ಬಿಳಿ ಬಣ್ಣ ಹೊಂದಿರುವ ನನ್ನ ಪತಿ ಹಾಗೂ ಕಪ್ಪು ಬಣ್ಣ ಹೊಂದಿರುವ ನನ್ನ ಬಗ್ಗೆಯೂ ಜನರು ಮಾತನಾಡುತ್ತಾರೆ ಎಂದಿದ್ದಾರೆ.

‘ನಾನು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ನನ್ನ ಹಾಗೂ ನನ್ನ ಪತಿಯ ವೇಣು ಬಗ್ಗೆ ಸಾಕಷ್ಟು ಕಾಮೆಂಟ್‌ಗಳನ್ನು ಕೇಳಿದ್ದೇನೆ . ಅದೇನೆಂದರೆ ನನ್ನ ಪತಿಯ ಬಣ್ಣ ಬಳಿ, ನನ್ನ ಬಣ್ಣ ಕಪ್ಪು. ಆದರೆ ಹುದ್ದೆಗೂ ಬಣ್ಣಕ್ಕೂ ಸಂಬಂಧವಿಲ್ಲ. ಆದರೂ ಜನರು ನನ್ನ ಗಂಡನ ಕೆಲಸ ಹಾಗೂ ನನ್ನ ಕೆಲಸವನ್ನು ಬಣ್ಣದ ಆಧಾರ ಮೇಲೆ ಅಳೆಯುತ್ತಿದ್ದಾರೆ. ಆದರೆ ನಾನು ನನ್ನ ಕಪ್ಪು ಬಣ್ಣವನ್ನೇ ಹೊಂದಲು ಬಯಸುತ್ತೇನೆ‘ ಎಂದು ಬರೆದುಕೊಳ್ಳುವ ಮೂಲಕ ಆಕೆ ತಮ್ಮ ಪೋಸ್ಟ್ ಅನ್ನು ಆರಂಭಿಸಿದ್ದಾರೆ.

‘ಚಿಕ್ಕಂದಿನಿಂದಲೂ ಕಪ್ಪು ಬಣ್ಣ ಹೊಂದಿರುವ ಕಾರಣಕ್ಕೆ ಆಕೆ ತನ್ನನ್ನು ನಾವು ಕೀಳು ಎಂದು ಭಾವಿಸಿದ್ದರು. ಆದರೆ ಕಪ್ಪು ಸುಂದರ ಎಂಬುದನ್ನು ನನ್ನ ಮಕ್ಕಳು ನನಗೆ ಅರ್ಥ ಮಾಡಿಸುವವರೆಗೂ ನನಗೆ ಅದು ಅರಿವಾಗಿರಲಿಲ್ಲ‘ ಮಾರ್ವಿಕವಾಗಿ ಪೋಸ್ಟ್ ಹಾಕಿದ್ದಾರೆ.

ಕೇರಳದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ತಮ್ಮ ಪತಿ ಡಾ. ವಿ. ವೇಣು ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ ಶಾರದಾ. ಆದರೆ ನಮ್ಮ ಹುದ್ದೆಯನ್ನು ಕೂಡ ನನ್ನ ಪತಿಯ ಬಿಳಿ ಬಣ್ಣ ಹಾಗೂ ನನ್ನ ಕಪ್ಪು ಬಣ್ಣದೊಂದಿಗೆ ಹೋಲಿಕೆ ಮಾಡಲಾಗಿತ್ತು ಎಂದು ಆಕೆ ಬರೆದುಕೊಂಡಿದ್ದಾರೆ.

ತಾನು ಕಪ್ಪು ಎನ್ನುವ ಕಾರಣಕ್ಕೆ ತನ್ನ ಹುದ್ದೆಯ ಬಗ್ಗೆಯೂ ಹೀಯಾಳಿಸಿ ಕಾಮೆಂಟ್ ಮಾಡಿರುವುವರ ಬಗ್ಗೆ ನೊಂದಿರುವ ಆಕೆ ಫೇಸ್‌ಬುಕ್ ‍ಪೋಸ್ಟ್‌ ಹಾಕಿದ್ದರು. ಆದರೆ ಆ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿರುವ ಕಾರಣದಿಂದ ಅದನ್ನು ಅಳಿಸಿ ಹಾಕುತ್ತಾರೆ.

ಪುನಃ ರೀಪೋಸ್ಟ್ ಮಾಡಿದ ಶಾರದಾ

ಈ ವಿಚಾರದ ಬಗ್ಗೆ ಚರ್ಚೆ ನಡೆಯಬೇಕು ಎಂದು ನನ್ನ ಹಿತೈಷಿಗಳ ಹೇಳಿರುವ ಕಾರಣಕ್ಕೆ ನಾನು ಮರು ಪೋಸ್ಟ್ ಮಾಡುತ್ತಿದ್ದೇನೆ. ಈ ವಿಚಾರವನ್ನು ನಾನು ಕೂಡ ಒಪ್ಪುತ್ತೇನೆ. ಆ ಕಾರಣಕ್ಕೆ ರೀಪೋಸ್ಟ್ ಮಾಡಿದ್ದರು ಎಂದು ಹೇಳಿರುವ ಅವರ ಹೊಸ ಪೋಸ್ಟ್‌ಗೆ 1000ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಹಲವರು ಇವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಶಾರದ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು ‘ಪ್ರಿಯ ಶಾರದಾ ಮುರಳೀಧರನ್ ಅವರಿಗೆ ನಮಸ್ಕಾರ. ನೀವು ಬರೆದ ಪ್ರತಿಯೊಂದು ಪದವೂ ಹೃದಯಸ್ಪರ್ಶಿಯಾಗಿದೆ. ಇದು ಚರ್ಚೆಗೆ ಅರ್ಹವಾಗಿದೆ. ನನ್ನ ತಾಯಿಯೂ ಕಪ್ಪು ಬಣ್ಣ ಹೊಂದಿದ್ದರು‘ ಎಂದಿದ್ದಾರೆ.

ತಮ್ಮ ವೃತ್ತಿ ಹಾಗೂ ಬಣ್ಣವನ್ನು ಹೋಲಿಸಿ ಮಾತನಾಡಿದವರು ಯಾರು ಎಂಬ ಹೆಸರನ್ನು ಆಕೆ ಹೇಳಿದಿದ್ದರೂ ಈ ನಿರ್ದಿಷ್ಟ ಪ್ರಕರಣವನ್ನು ಬಹಿರಂಗಪಡಿಸಲು ಬಯಸಿದ್ದೇನೆ, ಏಕೆಂದರೆ ಅದರಿಂದ ತನಗೆ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಿರಂತರವಾಗಿ ಬಣ್ಣದ ಕಾರಣಕ್ಕೆ ನಿಂದನೆ

ತಮ್ಮ ಪತಿಯ ಜಾಗಕ್ಕೆ ತಾನು ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಸತತ 7 ತಿಂಗಳ ಕಾಲ ನಿರಂತರವಾಗಿ ನನ್ನ ಬಣ್ಣ ಹಾಗೂ ವೃತ್ತಿಯೊಂದಿಗೆ ಹೋಲಿಕೆ ಮಾಡಲಾಗಿತ್ತು. ಜನರು ಬಣ್ಣ ವಿಚಾರವಾಗಿ ಎಷ್ಟು ಕೆಟ್ಟ ಮನೋಭಾವ ಹೊಂದಿದ್ದಾರೆ ನೋಡಿ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ಕಪ್ಪು ಎಂಬ ಹಣೆಪಟ್ಟಿ ಕಟ್ಟುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಕಪ್ಪು ಎಂದರೆ ಕೆಟ್ಟದ್ದು ಕೀಳು ಎನ್ನುವ ಮನೋಭಾವ ನಿಜಕ್ಕೂ ಸಲ್ಲ. ಕಪ್ಪು ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ, ಕಪ್ಪು ಅಸ್ವಸ್ಥತೆ, ಕಪ್ಪು ಇರುವವರ ಹೃದಯದಲ್ಲೂ ಕತ್ತಲೆ ತುಂಬಿರುತ್ತೆ ಎನ್ನುವಂತೆ ಜನರ ಮನೋಭಾವವಿದೆ.

ಕಪ್ಪು ಬಣ್ಣವು "ವಿಶ್ವದ ಸರ್ವವ್ಯಾಪಿ ಸತ್ಯ" ಆಗಿರುವಾಗ ಅದನ್ನು ನಿಂದಿಸುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಕಪ್ಪು ಯಾವುದನ್ನಾದರೂ ಹೀರಿಕೊಳ್ಳಬಲ್ಲದು, ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಶಕ್ತಿಶಾಲಿ ಶಕ್ತಿಯ ನಾಡಿಮಿಡಿತವಿದು. ಯಾವುದೇ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿ ಧರಿಸುವ ಕೋಟ್ ಕೂಡ ಕಪ್ಪು ಬಣ್ಣದ್ದು, ಆದರೂ ಜನರಿಗೆ ಕಪ್ಪು ಬಣ್ಣದ ಬಗ್ಗೆ ಅಸಡ್ಡೆ ಎಂದಿದ್ದಾರೆ.

ನಾನು 4 ವರ್ಷದವಳಿದ್ದಾಗ ನನ್ನ ಅಮ್ಮನ ಬಳಿ ಕೇಳಿದ್ದೆ ನೀನು ಪುನಃ ನನ್ನನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು, ಸುಂದರ ಬಿಳಿ ಇರುವ ಮಗುವಾಗಿ ಹೊರ ತರಲು ಸಾಧ್ಯವೇ ಎಂದು ಕೇಳಿದ್ದೆ ಎಂಬ ಅವರ ಬಾಲ್ಯದ ನೆನಪನ್ನು ಈ ಬರಹದಲ್ಲಿ ಸೇರಿಸಿದ್ದಾರೆ.

ಮಕ್ಕಳು ನನ್ನ ದೃಷ್ಟಿಕೋನ ಬದಲಿಸಿದ್ದರು

ನಾನು ನನ್ನ ಬದುಕಿನ ಉದ್ದಕ್ಕೂ ಕಪ್ಪು ಎನ್ನುವ ಕಾರಣಕ್ಕೆ ಹಲವು ಸಂಕಷ್ಟಗಳನ್ನು ಎದುರಿಸಿದ್ದೆ, 50 ವರ್ಷಗಳ ನನ್ನ ಬದುಕಿನಲ್ಲಿ ಕಪ್ಪು ಬಣ್ಣದ ಕಾರಣಕ್ಕೆ ನಾನು ಎದುರಿಸಿದ ಕೀಳರಿಮೆಗಳು ಹಲವು. ಆದರೆ ನನ್ನ ಮಕ್ಕಳು ನನ್ನ ದೃಷ್ಟಿಕೋನವನ್ನು ಬದಲಿಸಿದರು.ಕಪ್ಪು ಸುಂದರ ಎಂಬುದನ್ನು ಅವರು ನನಗೆ ಅರ್ಥ ಮಾಡಿಸಿದರು. ಅಂದಿನಿಂದ ನನಗೆ ಅರ್ಥವಾಗಿತ್ತು, ಕಪ್ಪು ನಿಜಕ್ಕೂ ಸುಂದರ, ಕಪ್ಪು ಅದ್ಭುತ‘ ಎಂದು ಬರೆದುಕೊಂಡಿದ್ದಾರೆ.

ಹೀಗೆ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಕಪ್ಪು ವರ್ಣವನ್ನು ನಿಂದಿಸುವವರಿಗೆ ಮಾತಿನಲ್ಲೇ ಚಡಿಯೇಟು ನೀಡಿರುವುದು ಮಾತ್ರವಲ್ಲ, ವರ್ಣಬೇಧ, ಲಿಂಗತಾರತಮ್ಯದ ವಿರುದ್ಧ ಸಿಡಿದಿದ್ದಾರೆ. ಇವರ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದ್ದು, ಹಲವರು ಶಾರದಾ ಅವರ ಮಾತಿಗೆ ತಲೆದೂಗಿದ್ದಾರೆ.

ಮಾರ್ಚ್ 25ಕ್ಕೆ ಶಾರದಾ ಈ ಪೋಸ್ಟ್ ಹಾಕಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.