Kerala Election Result: ಕೇರಳದಲ್ಲಿ ಬಿಜೆಪಿಯ ಸುರೇಶ್ ಗೋಪಿ, ರಾಜೀವ್ ಚಂದ್ರಶೇಖರ್ ಮುನ್ನಡೆ, ಯುಡಿಎಫ್‌ಗೆ 17, ಬಿಜೆಪಿಗೆ 2 ಕ್ಷೇತ್ರ
Kerala Lok Sabha Election Results: ಕೇರಳ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಯುಡಿಎಫ್ 17 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುತ್ತಿದೆ. ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಗೋಪಿ ಬರೋಬ್ಬರಿ 72 ಸಾವಿರ ಮತಗಳನ್ನು ಪಡೆದಿದ್ದಾರೆ.
Kerala Lok Sabha Election Results: ಕಳೆದ ಐದು ಗಂಟೆಗಳ ಮತ ಎಣಿಕೆಯ ಬಳಿಕ ಕೇರಳದ ಫಲಿತಾಂಶ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದ ಚುಕ್ಕಾಣಿ ಹಿಡಿಯುವ ಸೂಚನೆ ಇದೆ. 20 ಸೀಟುಗಳಲ್ಲಿ 17ರಲ್ಲಿ ಯುಡಿಎಫ್ ಮುನ್ನಡೆಯಲ್ಲಿದೆ. ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಕೇರಳದಲ್ಲಿ ಖಾತೆ ತೆರೆಯುವ ಸೂಚನೆ ನೀಡಿದೆ. ಇದೇ ಸಮಯದಲ್ಲಿ ಎಲ್‌ಡಿಎಫ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಕೇರಳದಲ್ಲಿ ತ್ರಿಶೂರ್ ಫಲಿತಾಂಶಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಅಲ್ಲಿ ನಟ ರಾಜಕಾರಣಿ ಸುರೇಶ್ ಗೋಪಿ ಸ್ಪರ್ಧಿಸಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ ಸುರೇಶ್ ಗೋಪಿ ಅವರು ಕಾಂಗ್ರೆಸ್ ಮತ್ತು ಎಲ್‌ಡಿಎಫ್‌ಗೆ ಬೇಸರ ತರಿಸಿದ್ದಾರೆ. ಸುಮಾರು 72 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವಿನ ಕಡೆಗೆ ನೋಡುತ್ತಿದ್ದಾರೆ. ತ್ರಿಶೂರ್‌ನಲ್ಲಿ ಸಿಪಿಐನ ವಿಎಸ್ ಸುನಿಲ್ ಕುಮಾರ್ ಮತ್ತು ಕಾಂಗ್ರೆಸ್‌ನ ಕೆ. ಮುರಳೀಧರನ್ ವಿರುದ್ಧ ಸುರೇಶ್ ಗೋಪಿ ಸ್ಪರ್ಧಿಸಿದ್ದರು. ಇದೇ ಸಮಯದಲ್ಲಿ ಇನ್ನೊಂದೆಡೆ ವಯನಾಡಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ 1.2 ಲಕ್ಷ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಶಶಿ ತರೂರು ಮತ್ತು ಕೆಕೆ ಶೈಲಜಾ ಅವರಿಗೆ ಹಿನ್ನೆಡೆಯಾಗಿದೆ.
- * ಎಲ್ಲಾದರೂ ಸುರೇಶ್ ಗೋಪಿ ಗೆಲುವು ಪಡೆದರೆ ಕೇರಳದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಖಾತೆ ತೆರೆಯಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಸುರೇಶ್ ಗೋಪಿ 72 ಸಾವಿರ ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ.
- ಪತ್ತನಂತಿಟ್ಟದಲ್ಲಿ ಕಾಂಗ್ರೆಸ್‌ನ ಸಂಸದ ಆಂಟೋ ಆಂಟೋನಿ 25 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಂಟೋನಿ ಮೂರನೇ ಸ್ಥಾನದಲ್ಲಿದ್ದಾರೆ.
- ವಡಕರದಲ್ಲಿ ಸಿಪಿಐ(ಎಂ)ಗೆ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶಾಫಿ ಪರಂಬಿಲ್ ಅವರು ಸುಮಾರು 56 ಸಾವಿರ ಮತಗಳ ಅಂತರದಂದ ಮುನ್ನಡೆಯಲ್ಲಿದ್ದಾರೆ. ಸಿಪಿಐ (ಎಂ)ನ ಶೈಲಜಾ ಅವರಿಗೆ ಹಿನ್ನೆಡೆಯಾಗಿದೆ.
- ಬಿಜೆಪಿಯು ಕೇರಳದ ತಿರುವನಂತಪುರಂನಲ್ಲಿ ರಾಜೀವ್ ಚಂದ್ರಶೇಖರ್ ಮೇಲೆ ನಂಬಿಕೆ ಇಟ್ಟಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ರಾಜೀವ್ ಚಂದ್ರಶೇಖರ್ 24 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಮೂರು ಬಾರಿ ಸಂಸದರಾಗಿರುವ ಸಂಸದ ಶಶಿ ತರೂರ್‌ಗೆ ಹಿನ್ನಡೆಯಾಗಿದೆ.
- ಪಾಲಕ್ಕಾಡ್ ಎಲ್‌ಎಸ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಕೆ ಶ್ರೀಕಂಠನ್ ಅವರು 34,265 ಮತಗಳ ಅಂತರದಿಂದ ಸಿಪಿಐ (ಎಂ)ನ ವಿಜಯ ರಾಘವನ್ ಎದುರು ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಫಲಿತಾಂಶ; ಮ್ಯಾಜಿಕ್ ನಂಬರ್ 272, ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ, 5 ಪ್ರಶ್ನೆ-ಉತ್ತರ
ವಯನಾಡಿನಲ್ಲಿ ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ, ಎಡಪಕ್ಷದಿಂದ ಅನ್ನಿ ರಾಜಾ, ಬಿಜೆಪಿಯಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದಾರೆ. ತ್ರಿಶೂರ್‌ನಲ್ಲಿ ಕಾಂಗ್ರೆಸ್‌ನ ಕೆ. ಮುರಳೀಧರನ್‌ಗೆ ಎದುರಾಗಿ ಎಡಪಕ್ಷದಿಂದ ವಿಎಸ್ ಸುನಿಲ್ ಕುಮಾರ್, ಬಿಜೆಪಿಯಿಂದ ಸುರೇಶ್ ಗೋಪಿ ಇದ್ದಾರೆ. ಅಟ್ನಿಗಲ್‌ನಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್, ಸಿಪಿಐನ ವಿ ಜಾಯ್, ಬಿಜೆಪಿಯ ವಿ ಮುರಳೀಧರನ್ ಸ್ಪರ್ಧಿಸಿದ್ದಾರೆ. ಪಥನಮಿಟ್ಟದಲ್ಲಿ ಕಾಂಗ್ರಸ್‌ನ ಆಂಟೋ ಆಂಟೋನಿ, ಸಿಪಿಐನ ಥಾಮಸ್ ಐಸಕ್, ಬಿಜೆಪಿಯ ಅನಿಲ್ ಆಂಟೋನಿ ಸ್ಪರ್ಧಿಸಿದ್ದಾರೆ. ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರು ಈ ಬಾರಿ ಸಿಪಿಐನ ಪನ್ನಿಯನ್ ರವೀಂದ್ರನ್ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
ವಿಭಾಗ