ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Results: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌, ತ್ರಿಶೂರ್‌ನಲ್ಲಿ ಗೋಪಿ ಮುನ್ನಡೆ; ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿ

Election Results: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌, ತ್ರಿಶೂರ್‌ನಲ್ಲಿ ಗೋಪಿ ಮುನ್ನಡೆ; ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿ

Kerala Lok sabha election results 2024: ಕೇರಳದ ತಿರುವನಂತಪುರಂ, ತ್ರಿಶೂರ್‌, ವಯನಾಡು ಸೇರಿದಂತೆ ಪ್ರಮುಖ ಲೋಕಸಭಾ ಕ್ಷೇತ್ರಗಳ ಫಲಿತಾಂಶದತ್ತ ಎಲ್ಲರೂ ಗಮನನೆಟ್ಟಿದ್ದಾರೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ ವಯನಾಡಿನಲ್ಲಿ ರಾಹುಲ್‌ ಗಾಂಧಿ, ತಿರುವನಂತಪುರಂನಲ್ಲಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಮುನ್ನಡೆಯಲ್ಲಿದ್ದಾರೆ.

Election Results: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ಗೆ ಮುನ್ನಡೆ
Election Results: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ಗೆ ಮುನ್ನಡೆ

Kerala Lok sabha election results 2024: ಕೇರಳ ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ನಿರೀಕ್ಷಿತ. ಇಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ಪಡೆಯುವುದು ಖಾತ್ರಿ. ಆದರೆ, ಕೇರಳದಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆಯುವ ಹವಣಿಕೆಯಲ್ಲಿರುವ ಬಿಜೆಪಿ ಕುರಿತಾಗಿ ಏನಾದರೂ ಸಕಾರಾತ್ಮಕ ಸುದ್ದಿಗಳಿವೆಯೇ? ಚುನಾವಣಾ ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳನ್ನು ಗಮನಿಸಿದರೆ ಅಂತಹ ಯಾವುದೇ ಸುಳಿವು ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಇದೀಗ ಬಂದ ಆರಂಭಿಕ ಹಂತದ ಫಲಿತಾಂಶ ಟ್ರೆಂಡ್‌ ಪ್ರಕಾರ ರಾಹುಲ್‌ ಗಾಂಧಿ ಮುನ್ನಡೆಯಲ್ಲಿದ್ದಾರೆ. ಇದೇ ರೀತಿ ಯುಡಿಎಫ್‌ ಕೂಡ ಮುನ್ನಡೆಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ಗೆ ಮುನ್ನಡೆ

ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ಅವರು ಕಾಂಗ್ರೆಸ್‌ ಸಂಸದ ಶಶಿ ತರೂರ್‌ಗಿಂತ 4900 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಇದು ಬಿಜೆಪಿಗೆ ಕೇರಳದಲ್ಲಿ ಮೊದಲ ಖಾತೆ ತೆರೆಯುವ ಆಸೆಯನ್ನು ಗರಿಗೆದರುವಂತೆ ಮಾಡಿದೆ. ಇದಕ್ಕೂ ಮೊದಲ ಶಶಿ ತರೂರ್‌ ಅವರು ರಾಜೀವ್‌ ಚಂದ್ರಶೇಖರ್‌ಗಿಂತ 1900 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರು.

ವಯನಾಡಿನಲ್ಲಿ ರಾಹುಲ್‌ ಗಾಂಧಿಗೆ ಮುನ್ನಡೆ

ಆರಂಭಿಕ ಟ್ರೆಂಡ್‌ ಪ್ರಕಾರ ವಯನಾಡಿನಲ್ಲಿ ರಾಹುಲ್‌ ಗಾಂಧಿ ಮುನ್ನಡೆಯಲ್ಲಿದ್ದಾರೆ. 2019ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಯನಾಡಿನಲ್ಲಿ ಭರ್ಜರಿ 4 ಲಕ್ಷ ಮತಗಳಿಂದ ಗೆಲುವು ಪಡೆದಿದ್ದರು. ಆದರೆ, ಈ ಬಾರಿ ರಾಹುಲ್‌ ಗಾಂಧಿ ಸಿಪಿಐನ ಅನ್ನಿ ರಾಜಾ ಮತ್ತು ಕೇರಳದ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್‌ ಎದುರು ಸ್ಪರ್ಧಿಸಿದ್ದಾರೆ. ಆರಂಭಿಕ ಟ್ರೆಂಡ್‌ನಲ್ಲಿ ರಾಹುಲ್‌ ಗಾಂಧಿ ಮುನ್ನಡೆ ಸಾಧಿಸಿದ್ದಾರೆ. ಕೇರಳದಲ್ಲಿ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮುನ್ನಡೆಯಲ್ಲಿದೆ.

ತ್ರಿಶೂರ್‌ನಲ್ಲಿ ಏನಾಗುತ್ತಿದೆ?

ತ್ರಿಶೂರ್‌ನಲ್ಲಿ ಬಿಜೆಪಿಯ ಸುರೇಶ್‌ ಗೋಪಿ ಮುನ್ನಡೆಯಲ್ಲಿದ್ದಾರೆ. ತ್ರಿಶೂರ್‌ ಮೂಲಕ ಬಿಜೆಪಿ ಖಾತೆ ತೆರೆಯುವ ಕನಸಿನಲ್ಲಿ ಬಿಜೆಪಿ ಇದೆ. ಕೇರಳದಲ್ಲಿ ಇಲ್ಲಿಯವರೆಗೆ ಬಿಜೆಪಿ ಗೆದ್ದಿಲ್ಲ. ಈ ಬಾರಿ ಸುರೇಶ್‌ ಗೋಪಿ ಮೂಲಕ ಗೆಲುವಿನ ಕನಸು ಕಾಣುತ್ತಿದೆ. 2019ರಲ್ಲಿ ಗೋಪಿ ಶೇಕಡ 28.19ರಷ್ಟು ಪಾಲು ಮತಗಳನ್ನು ತನ್ನದಾಗಿಸಿಕೊಂಡಿದದ್ದರು. ಆ ಸಮಯದಲ್ಲಿ ಸಿಪಿಐ ಶೇಕಡ 30.85 ಮತ ಪಡೆದಿತ್ತು. ಟಿಎನ್‌ ಪ್ರತಾಪನ್‌ ಶೇಕಡ 39.83ರಷ್ಟು ಮತ ಪಡೆದಿದ್ದರು. ಈ ಬಾರಿ ಗೋಪಿ ಹೆಚ್ಚು ಮತಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ಕೇರಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಪ್ರಮುಖ ಸ್ಪರ್ಧಿಗಳು

ವಯನಾಡಿನಲ್ಲಿ ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ, ಎಡಪಕ್ಷದಿಂದ ಅನ್ನಿ ರಾಜಾ, ಬಿಜೆಪಿಯಿಂದ ಕೆ ಸುರೇಂದ್ರನ್‌ ಸ್ಪರ್ಧಿಸಿದ್ದಾರೆ. ತ್ರಿಶೂರ್‌ನಲ್ಲಿ ಕಾಂಗ್ರೆಸ್‌ನ ಕೆ. ಮುರಳೀಧರನ್‌ಗೆ ಎದುರಾಗಿ ಎಡಪಕ್ಷದಿಂದ ವಿಎಸ್‌ ಸುನಿಲ್‌ ಕುಮಾರ್‌, ಬಿಜೆಪಿಯಿಂದ ಸುರೇಶ್‌ ಗೋಪಿ ಇದ್ದಾರೆ. ಅಟ್ನಿಗಲ್‌ನಲ್ಲಿ ಕಾಂಗ್ರೆಸ್‌ನ ಅಡೂರ್‌ ಪ್ರಕಾಶ್‌, ಸಿಪಿಐನ ವಿ ಜಾಯ್‌, ಬಿಜೆಪಿಯ ವಿ ಮುರಳೀಧರನ್‌ ಸ್ಪರ್ಧಿಸಿದ್ದಾರೆ. ಪಥನಮಿಟ್ಟದಲ್ಲಿ ಕಾಂಗ್ರಸ್‌ನ ಆಂಟೋ ಆಂಟೋನಿ, ಸಿಪಿಐನ ಥಾಮಸ್‌ ಐಸಕ್‌, ಬಿಜೆಪಿಯ ಅನಿಲ್‌ ಆಂಟೋನಿ ಸ್ಪರ್ಧಿಸಿದ್ದಾರೆ. ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರು ಈ ಬಾರಿ ಸಿಪಿಐನ ಪನ್ನಿಯನ್‌ ರವೀಂದ್ರನ್‌ ಮತ್ತು ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024