ಕನ್ನಡ ಸುದ್ದಿ  /  Nation And-world  /  Know What Exit Polls Predicts For Gujarat Assembly Elections

Gujarat Exit Poll: ಗುಜರಾತ್‌ ಚುನಾವಣೋತ್ತರ ಸಮೀಕ್ಷೆ: ಬಿಜೆಪಿ ಅಧಿಕಾರಕ್ಕೆ, ಕಾಂಗ್ರೆಸ್‌ ಪ್ರಪಾತಕ್ಕೆ, ಆಪ್‌ ಸ್ಪರ್ಧೆ ಕಾಟಾಚಾರಕ್ಕೆ?

ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಅಬ್ಬರ ಜೋರಾಗಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ರಚಿಸಲಿದೆ ಎಂದು ಅಂದಾಜಿಸಿವೆ. ಅದೇ ರೀತಿ ಕಾಂಗ್ರೆಸ್‌ ಈ ಬಾರಿ ರಾಜ್ಯದಲ್ಲಿ ಮತ್ತಷ್ಟು ಕುಸಿತ ಕಾಣಲಿದ್ದು, ಆಮ್‌ ಆದ್ಮಿ ಪಕ್ಷ ಖಾತೆ ತೆರೆಯುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PTI)

ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಅಬ್ಬರ ಜೋರಾಗಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ರಚಿಸಲಿದೆ ಎಂದು ಅಂದಾಜಿಸಿವೆ.

ಅದೇ ರೀತಿ ಕಾಂಗ್ರೆಸ್‌ ಈ ಬಾರಿ ರಾಜ್ಯದಲ್ಲಿ ಮತ್ತಷ್ಟು ಕುಸಿತ ಕಾಣಲಿದ್ದು, ಆಮ್‌ ಆದ್ಮಿ ಪಕ್ಷ ಖಾತೆ ತೆರೆಯುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.

ಹಾಗಾದರೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳತ್ತ ಕಣ್ಣುಹಾಯಿಸುವುದಾದರೆ...

ಇಂಡಿಯಾ ಟುಡೆ-ಆಕ್ಸಸ್‌ ಮೈ ಇಂಡಿಯಾ:

ಬಿಜೆಪಿ: 129-151

ಕಾಂಗ್ರೆಸ್‌: 16-30

ಆಪ್‌: 9-21

ಇತರೆ: 2-6

ಎಬಿಪಿ ನ್ಯೂಸ್‌ ಸಿ-ವೋಟರ್:

ಬಿಜೆಪಿ:128-140

ಕಾಂಗ್ರೆಸ್‌: 31-43

ಆಪ್‌: 3-11

ಇತರೆ: 2-6

ರಿಪಬ್ಲಿಕ್-ಪಿ ಮಾರ್ಕ್‌:

ಬಿಜೆಪಿ:128-148

ಕಾಂಗ್ರೆಸ್‌: 30-42

ಆಪ್‌: 2-10

ಇತರೆ: 0-3

ನ್ಯೂಸ್ 24- ಟುಡೇಸ್‌ ಚಾಣಕ್ಯ:

ಬಿಜೆಪಿ:150

ಕಾಂಗ್ರೆಸ್‌: 19

ಆಪ್‌: 11

ಇತರೆ: 2

ಟೈಮ್ಸ್‌ ನೌ-ಇಟಿಜಿ:

ಬಿಜೆಪಿ:139

ಕಾಂಗ್ರೆಸ್‌: 30

ಆಪ್‌: 11

ಇತರೆ: 2

ಟಿವಿ-9 ಭಾರತ್‌ವರ್ಷ್‌:

ಬಿಜೆಪಿ:125-130

ಕಾಂಗ್ರೆಸ್‌: 40-50

ಆಪ್‌: 03-05

ಇತರೆ: 03-07

ಗುಜರಾತ್‌ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಬಹುಮತ ಗಳಿಸಲು 92 ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕಾಗುತ್ತದೆ. ಸದ್ಯದ ಚಚುನಾವಣೋತ್ತರ ಸಮೀಕ್ಷೆಗಳನ್ನು ಪರಿಗಣಿಸಿದರೆ, ಬಿಜೆಪಿ ಸುಲಭವಾಗಿ ಈ ಸಂಖ್ಯೆಯನ್ನು ದಾಟಲಿದೆ.

ಪ್ರತಿಪಕ್ಷ ಕಾಂಗ್ರೆಸ್‌ ಕಳೆದ ಬಾರಿ 77 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಸದ್ಯದ ಚಚುನಾವಣೋತ್ತರ ಸಮೀಕ್ಷೆಗಳನ್ನು ಪರಿಗಣಿಸಿದರೆ, ಕಾಂಗ್ರೆಸ್‌ ಈ ಬಾರಿ ರಾಜ್ಯದಲ್ಲಿ ಪ್ರಪಾತಕ್ಕೆ ಬೀಳಲಿರುವುದು ಖಚಿತ.

ಅದೇ ರೀತಿ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಳೆದ ಬಾರಿ ಖಾತೆ ತೆರೆಯಲು ವಿಫಲವಾಗಿದ್ದ ಆಪ್‌, ಸದ್ಯದ ಚಚುನಾವಣೋತ್ತರ ಸಮೀಕ್ಷೆಗಳನ್ನು ಪರಿಗಣಿಸಿ ಸಮಾಧಾನಪಟ್ಟುಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯ ಗುಜರಾತ್‌ನಲ್ಲಿ, ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಅಲ್ಲದೇ ಕಳೆದ ಬಾರಿಗಿಂತ ಈ ಬಾರಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳಲ್ಲಿ ಕಮಲ ಅರಳಲಿದ್ದು, ಆಪ್‌ ಈ ಬಾರಿಯೂ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲು ವಿಫಲವಾಗಲಿದೆ.

ಇವೆಲ್ಲಾ ಕೇವಲ ಚುನಾವಣೋತ್ತರ ಸಮೀಕ್ಷೆಗಳಾಗಿದ್ದು, ಡಿ.೦೮(ಗುರುವಾರ) ನೈಜ ಫಲಿತಾಂಶ ಹೊರಬೀಳಲಿದೆ. ಆದಾಗ್ಯೂ, ಅಂಕಿ-ಸಖ್ಯೆಗಳಲ್ಲಿ ಕೊಂಚ ವ್ಯತ್ಯಾಸ ಕಂಡುಬಂದರೂ, ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಹೇಳಬಹುದಾಗಿದೆ.

ನಿರಸ ಪ್ರಚಾರ, ಪ್ರಧಾನಿ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾವಣ ಎಂದು ಕರೆದಿರುವುದು ಸೇರಿದಂತೆ, ಹಲವು ನಕಾರಾತ್ಮಕ ಅಶಂಗಳು ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಬಂಧಿತ ಸುದ್ದಿ

Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಏನು ಹೇಳುತ್ತಿವೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point