ಕನ್ನಡ ಸುದ್ದಿ  /  Nation And-world  /  Largest Gold Reserves Top 20 Country In World India Position Details 2023 Quarter 4 List Rmy

ಅತಿ ಹೆಚ್ಚು ಚಿನ್ನ ಮೀಸಲಿಟ್ಟಿರುವ ಜಗತ್ತಿನ 20 ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ -Gold Reserves Top Countries

ದೇಶಗಳು ಚಿನ್ನವನ್ನು ಮೀಸಲು ಇಡುವುದರ ಹಿಂದಿರುವ ಮಹತ್ವವೇನು? ಈ ಶ್ರೇಯಾಂಕದಲ್ಲಿ ಯುಎಸ್‌ನಿಂದ ಸ್ಪೇನ್‌ ವರೆಗೆ ಯಾವ ದೇಶ ಎಷ್ಟನೇ ರ‍್ಯಾಂಕ್ ಎಂಬುದರ ವಿವರ ತಿಳಿಯೋಣ.

ಪ್ರತಿಯೊಂದು ದೇಶವನ್ನು ಚಿನ್ನವನ್ನು ಮೀಸಲಿಟ್ಟಿರುತ್ತವೆ. ಜಗತ್ತಿನಲ್ಲಿ ಅತಿ  ಹೆಚ್ಚು ಚಿನ್ನವನ್ನು ಮೀಸಲಿಟ್ಟಿರುವ ಅಗ್ರ 20 ದೇಶಗಳ ವಿವರ ಇಲ್ಲಿದೆ.
ಪ್ರತಿಯೊಂದು ದೇಶವನ್ನು ಚಿನ್ನವನ್ನು ಮೀಸಲಿಟ್ಟಿರುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನವನ್ನು ಮೀಸಲಿಟ್ಟಿರುವ ಅಗ್ರ 20 ದೇಶಗಳ ವಿವರ ಇಲ್ಲಿದೆ. (Bloomberg)

ಪ್ರತಿ ದೇಶದ ಆರ್ಥಿಕ ಸ್ಥಿರತೆಗೆ ಆ ದೇಶದಲ್ಲಿ ಚಿನ್ನದ ನಿಕ್ಷೇಪಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಆರ್ಥಿಕ ಅನಿಶ್ಚಿತೆಯ ಸಂದರ್ಭದಲ್ಲಂತೂ ಮೌಲ್ಯದ ವಿಶ್ವಾಸಾರ್ಹತೆಯನ್ನು ಕಾಪಾಡಲು ಪ್ರಮುಖವಾಗಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್‌ನಂತಹ ಕೇಂದೀಯ ಬ್ಯಾಂಕುಗಳು ಚಿನ್ನವನ್ನ ಆದ್ಯತೆಯ ಸುರಕ್ಷಿತ ಸ್ವತ್ತಾಗಳನ್ನಾಗಿ ಮಾಡಲು ಹೆಚ್ಚು ಒಲವು ತೋರುತ್ತವೆ. ಆರ್ಥಿಕ ಬಿಕ್ಕಟ್ಟು ಉಂಟಾದರೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತಗಳನ್ನು ಕಾಣಬಹುದು. ವಿಶ್ವ ಚಿನ್ನ ಮಂಡಳಿ (World Gold Council) ಅಂದಾಜಿನ ಪ್ರಕಾರ 2024ರ 4ನೇ ತ್ರೈಮಾಸಿಕದ ವೇಳೆಗೆ ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನವನ್ನು ಮೀಸಲು (Gold Reserves Top Countries) ಇಟ್ಟಿರುವ 20 ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪಗಳನ್ನು ಹೊಂದಿರುವ ಅಗ್ರ 20 ದೇಶಗಳಲ್ಲಿ ಭಾರತ 803.58 ಟನ್ ಚಿನ್ನ ಮೀಸಲು ಇಡುವುದರೊಂದಿಗೆ 9 ನೇ ರ‍್ಯಾಂಕ್ ಪಡೆದಿದೆ. 53,697.34 (ಶೇ 8.54) ಟನ್ ಚಿನ್ನವನ್ನು ಹಿಡುವಳಿ ಇಟ್ಟಿದೆ. ಇತರೆ ಇತರೆ ದೇಶಗಳ ವಿವರನ್ನು ನೋಡೋಣ.

ರ‍್ಯಾಂಕ್ - ದೇಶ- ಚಿನ್ನದ ಮೀಸಲು (ಟನ್‌ಗಳಲ್ಲಿ) - ಚಿನ್ನದ ಹಿಡುವಳಿ (ಟನ್‌)

1. ಅಮೆರಿಕ - 8,133.46 - 543,499.37 (ಶೇ 69.89)

2. ಜರ್ಮನಿ - 3,352.65 - 224,032.81 (ಶೇ 69.06)

3. ಇಟಲಿ - 2,451.84 - 163,838.19 (ಶೇ 65.89)

4. ಫ್ರಾನ್ಸ್ - 2,436.88 - 162,844.72 (ಶೇ 67.28)

5. ರಷ್ಯಾ - 2,332.74 - 155,880.00 (ಶೇ 26.05)

6. ಚೀನಾ - 2,235.39 - 149,374.61 (ಶೇ 4.37)

7. ಸ್ವಿಜರ್‌ಲ್ಯಾಂಡ್ - 1,040.00 62,543.91 (ಶೇ 7.64)

8. ಜಪಾನ್ - 845.97 - 56,530.15 (ಶೇ 4.37)

9. ಭಾರತ - 803.58 - 53,697.34 (ಶೇ 8.54)

10. ನೆದರ್ಲೆಂಡ್ಸ್ - 612.45 - 40,925.77 (ಶೇ 58.34)

11. ಟರ್ಕಿ - 549.19 - 36,097 (ಶೇ 27.38)

12. ತೈವಾನ್ - 423.63 - 25,476.21 (ಶೇ 4.32)

13. ಪೋರ್ಚುಗಲ್ - 382.63 - 25,568.48 (ಶೇ 72.15)

14. ಉಜ್ಬೇಕಿಸ್ತಾನ್ - 371.39 - 24,816.10 (ಶೇ 71.42)

15. ಪೊಲ್ಯಾಂಡ್ - 358.69 - 23,968.87 (ಶೇ 12.36)

16. ಸೌದಿ ಅರೇಬಿಯಾ - 232.07 - 19,428.77 (ಶೇ 4.24)

17. ಯುಕೆ - 310.29 - 20,734.20 (ಶೇ 11.64)

18. ಕಜಕಿಸ್ತಾನ್ - 294.24 - 19,661.66 (ಶೇ 54.44)

19. ಲೆಬನಾನ್ - 286.83 - 17,249.75 (ಶೇ 54.45)

20. ಸ್ಪೇನ್ - 281.58 - 18,815.76 (ಶೇ 18.23)

ಚಿನ್ನ ಮೀಸಲು ಆರ್ಥಿಕವಾಗಿ ದೇಶದ ಅಭಿವೃದ್ಧಿಗೂ ನೆರವಾಗಲಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಚಿನ್ನದ ನಿಕ್ಷೇಪದ ಈ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಣ, ಚಿನ್ನ ಹಾಗೂ ಭೂಮಿಗೆ ಆರ್ಥಿಕ ಸ್ಥಿರತೆಗೆ ಪೂರಕವಾಗಿವೆ.

(This copy first appeared in Hindustan Times Kannada website. To read more like this please logon to kannada.hindustantimes.com )