ಕನ್ನಡ ಸುದ್ದಿ  /  Nation And-world  /  Lcd Tv Blast In Up, Kills 16-year-old Boy, Why Tv Explode, How To Prevent It

LCD TV blast: ಎಲ್‌ಸಿಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವು, ಎಲ್‌ಸಿಟಿ ಟಿವಿ ಸ್ಫೋಟಗೊಳ್ಳುವುದೇಕೆ? ನಿಮ್ಮ ಟಿವಿ ಸೇಫಾ?

ಕೊಠಡಿಯೊಂದರಲ್ಲಿ ತನ್ನ ಸ್ನೇಹಿತರ ಜತೆ ಎಲ್‌ಸಿಡಿ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ಟಿವಿ ಸ್ಪೋಟಗೊಂಡಿದೆ.

LCD TV blast: ಎಲ್‌ಸಿಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವು, ಟಿವಿ ಸ್ಫೋಟ ಏಕೆ?
LCD TV blast: ಎಲ್‌ಸಿಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವು, ಟಿವಿ ಸ್ಫೋಟ ಏಕೆ?

ಉತ್ತರ ಪ್ರದೇಶ: ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಎಲ್‌ಸಿಟಿ ಟಿವಿ ಸ್ಫೋಟಗೊಂಡ ಪರಿಣಾಮ ಹದಿನಾರು ವರ್ಷದ ಬಾಲಕನೊಬ್ಬ ದುರ್ಮರಣಗೊಂಡಿದ್ದಾನೆ. ಗೋಡೆಗೆ ಅಂಟಿಸಿದ್ದ ಎಲ್‌ಸಿಡಿ ಟಿವಿ ಸ್ಫೋಟಗೊಂಡ ಪರಿಣಾಮ ಬಾಲಕ ಮೃತಪಟ್ಟರೆ, ಉಳಿದ ಇಬ್ಬರು ಗಾಯಗೊಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆಯೇ ಕುಸಿದಿದೆ.

ಕೊಠಡಿಯೊಂದರಲ್ಲಿ ತನ್ನ ಸ್ನೇಹಿತರ ಜತೆ ಎಲ್‌ಸಿಡಿ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ಟಿವಿ ಸ್ಪೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ ಬಾಲಕ ಓಮೆಂದ್ರಾ ಮೃತಪಟ್ಟಿದ್ದಾನೆ. ಘಾಜಿಯಾಬಾದ್‌ನ ಹರ್ಷ್‌ ವಿಹಾರ್‌ ಕಾಲೋನಿಯಲ್ಲಿ ಈ ಅಪರೂಪದ ದುರ್ಘಟನೆ ವರದಿಯಾಗಿದೆ.

ಟಿವಿ ಸ್ಫೋಟಗೊಂಡು ಓಮೆಂದ್ರಾನು ಗಾಯಗೊಂಡಾಗ ಇತರರು ತಕ್ಷಣ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಈತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗಾಯಗೊಂಡ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಬಹುತೇಕ ಎಲ್ಲರ ಮನೆಯಲ್ಲಿಯೂ ಈಗ ಟಿವಿ ಇರುವುದು ಸಾಮಾನ್ಯ. ಹಲವು ವರ್ಷಗಳಿಂದ ಒಂದೇ ಟಿವಿ ಬಳಸುವುದು ಮಾಮೂಲು. ಬಹುತೇಕರು ಹಳೆಯ ಬಾಕ್ಸ್‌ ಟಿವಿಯನ್ನು ಬಿಟ್ಟು ಫ್ಲ್ಯಾಟ್‌, ಎಲ್‌ಸಿಡಿ, ಎಲ್‌ಇಡಿ ಟಿವಿ ಹೊಂದಿರುತ್ತಾರೆ. ಇಂತಹ ಟಿವಿಗಳು ಸುರಕ್ಷಿತವೇ ಎಂಬ ಪ್ರಶ್ನೆ ಈಗಿನ ಘಟನೆಯ ಬಳಿಕ ಮೂಡಿದೆ.

ಇತ್ತೀಚೆಗೆ ಸುಳ್ಯದಲ್ಲಿ ರೆಫ್ರಿಜರೇಟರ್‌ ಶಾಕ್‌ ಹೊಡೆದು ಮಗುವೊಂದು ಮೃತಪಟ್ಟಿತ್ತು. ಸ್ನಾನದ ಮನೆಯ ಗ್ಯಾಸ್‌ ಗೀಸರ್‌ನಿಂದ ಹಲವು ಜನರು ಸಾಯುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಗೃಹಬಳಕೆಯ ಗ್ಯಾಡ್ಜೆಟ್‌ಗಳು, ಎಲೆಕ್ಟ್ರಾನಿಕ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳ ರೂಪದಲ್ಲಿಯೂ ಮೃತ್ಯು ಮನೆಯಲ್ಲಿರಬಹುದು.

ಟೀವಿ ಸ್ಪೋಟಗೊಳ್ಳುವುದ್ಯಾಕೆ? ಟಿವಿ ಸ್ಪೋಟಗೊಳ್ಳುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರಬಹುದು. ಭಾರತದಂತಹ ದೇಶಗಳಲ್ಲಿ ಟಿವಿ ಸ್ಪೋಟಗೊಳ್ಳಲು ಕರೆಂಟ್‌ ವೋಲ್ಟೇಜ್‌ ಒಮ್ಮೆಗೆ ಅಧಿಕವಾಗುವುದು ಪ್ರಮುಖ ಕಾರಣವಾಗಿದೆ. ಈ ರೀತಿ ಸಡನ್‌ ಆಗಿ ಕರೆಂಟ್‌ ಹೆಚ್ಚು ಬಂದರೆ ತಪ್ಪಿಸುವುದು ಕಷ್ಟ.

ಬಹುತೇಕ ಟೀವಿ, ಫ್ರಿಡ್ಜ್‌ ಇತ್ಯಾದಿಗಳಲ್ಲಿ ಅತ್ಯಧಿಕ ವಿದ್ಯುತ್‌ ಪ್ರವಾಹಿಸುವುದನ್ನು ತಪ್ಪಿಸಲು ಸೂಕ್ತ ಸುರಕ್ಷತಾ ಫೀಚರ್‌ಗಳನ್ನು ಅಳವಡಿಸಿರುತ್ತಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಇಂತಹ ಸುರಕ್ಷತಾ ಫೀಚರ್‌ಗಳು ಕೈಗೊಡುವುದುಂಟು. ಅಗ್ಗದ ದರದಲ್ಲಿ ಖರೀದಿಸಿದ ಟಿವಿಗಳಲ್ಲಿ ರೆಗ್ಯುಲೇಟರ್‌ ಇತ್ಯಾದಿಗಳು ಇಲ್ಲದೆ ಇದ್ದರೂ ಇಂತಹ ಅಪಾಯ ಸಂಭವಿಸುತ್ತದೆ ಎಂದು ಪರಿಣಿತರು ಹೇಳಿದ್ದಾರೆ.

ವಿಶೇಷವಾಗಿ ಬಹುತೇಕರು ಮನೆಯಲ್ಲಿ ಟಿವಿಯನ್ನು ಹಲವು ಗಂಟೆಗಳ ಕಾಲ ಆನ್‌ ಮಾಡಿರುತ್ತಾರೆ. ಬೆಳಗ್ಗೆ ಆನ್‌ ಆದರೆ ಆಫ್‌ ಆಗುವುದು ರಾತ್ರಿಯೇ ಎನ್ನುವ ಪರಿಸ್ಥಿತಿ ಇರುತ್ತದೆ. ಇಂತಹ ಸಮಯದಲ್ಲಿ ಓವರ್‌ ಹೀಟ್‌ ಇತ್ಯಾದಿಗಳಿಂದಲೂ ಟಿವಿಯ ವೈರ್‌ಗಳು ಹಾಳಾಗಿ ಬೆಂಕಿ ಆಕಸ್ಮಿಕಗಳು ಸಂಭವಿಸಬಹುದು. ಒಟ್ಟಾರೆ, ಮನೆಯಲ್ಲಿರುವ ಟಿವಿ, ರೆಫ್ರಿಜರೇಟರ್‌ಗಳು ಸುರಕ್ಷಿತವಾಗಿದೆಯೇ ಎಂದು ಪರಿಶೀಲನೆ ನಡೆಸುವುದು ಉತ್ತಮ. ತುಂಬಾ ಹಳೆಯ ಇಂತಹ ವಸ್ತುಗಳನ್ನು ಬಳಸದೆ ಇರುವುದು ಒಳ್ಳೆಯದು.

IPL_Entry_Point