Bima Sakhi Yojana: ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಅರ್ಜಿ ಆಹ್ವಾನ, ಮಹಿಳೆಯರಿಗೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bima Sakhi Yojana: ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಅರ್ಜಿ ಆಹ್ವಾನ, ಮಹಿಳೆಯರಿಗೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್‌

Bima Sakhi Yojana: ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಅರ್ಜಿ ಆಹ್ವಾನ, ಮಹಿಳೆಯರಿಗೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್‌

LIC bima sakhi yojana: ಭಾರತೀಯ ಜೀವ ವಿಮಾ ನಿಗಮದ ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ವೇತನ ಎಷ್ಟು ದೊರಕುತ್ತದೆ? ಮಾನದಂಡಗಳೇನು? ಇತ್ಯಾದಿ ವಿವರ ಇಲ್ಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೀಮಾ ಸಖಿ ಯೋಜನೆಯ ಉದ್ಘಾಟನೆ ಸಂದರ್ಭದಲ್ಲಿ ಅರ್ಹರಿಗೆ ನೇಮಕಾತಿ ಪ್ರಮಾಣ ಪತ್ರವನ್ನು ಪಾಣಿಪತ್‌ನಲ್ಲಿ ನೀಡಿದರು.   (ANI Photo)
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೀಮಾ ಸಖಿ ಯೋಜನೆಯ ಉದ್ಘಾಟನೆ ಸಂದರ್ಭದಲ್ಲಿ ಅರ್ಹರಿಗೆ ನೇಮಕಾತಿ ಪ್ರಮಾಣ ಪತ್ರವನ್ನು ಪಾಣಿಪತ್‌ನಲ್ಲಿ ನೀಡಿದರು. (ANI Photo) (DPR PMO)

LI bima sakhi yojana apply online: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯ ಮೂಲಕ 18ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಎಲ್‌ಐಸಿ ಏಜೆಂಟ್‌ನಿಂದ ಡೆವಲಪ್‌ಮೆಂಟ್‌ ಆಫೀಸರ್‌ ಆಗುವ ತನಕ ವಿವಿಧ ಅವಕಾಶ ದೊರಕಲಿದೆ. ಈ ಯೋಜನೆಗೆ ಆಯ್ಕೆಯಾದವರಿಗೆ ಪ್ರತಿತಿಂಗಳು 7 ಸಾವಿರ ರೂಪಾಯಿ ಸ್ಟೈಫಂಡ್‌ ದೊರಕುತ್ತದೆ. ಎರಡನೇ ವರ್ಷದಲ್ಲಿ 6 ಸಾವಿರ ರೂ ಮತ್ತು 5 ಸಾವಿರ ರೂ. ಸ್ಟೈಫಂಡ್‌ ಹೆಚ್ಚಲಿದೆ. ಇದರೊಂದಿಗೆ ವಾರ್ಷಿಕ 24 ಗುರಿ ಸಾಧಿಸಿದವರಿಗೆ ವರ್ಷಕ್ಕೆ 48 ಸಾವಿರ ರೂಪಾಯಿ ಕಮಿಷನ್‌ ಕೂಡ ದೊರಕಲಿದೆ.

ಎಲ್‌ಐಸಿ ಬಿಮಾ ಸಖಿ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರಿಗೆ ವಿಶೇಷ ಅವಕಾಶವಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಎಲ್‌ಐಸಿ ವಿಮೆ ಪಾಲಿಸಿದಾರರನ್ನು ಹೆಚ್ಚಿಸಲು ಕೂಡ ನೆರವಾಗಲಿದೆ. ಈ ಯೋಜನೆಯ ಮೂಲಕ ಎಲ್‌ಐಸಿಗೆ ಸಾಮಾಜಿಕ ಕಲ್ಯಾಣದ ಜತೆಗೆ ಬಿಸ್ನೆಸ್‌ ಗ್ರೋಥ್‌ ಕೂಡ ಆಗಲಿದೆ. ಮಹಿಳಾ ಸ್ವಾವಲಂಬನೆ ಹೆಚ್ಚಿಸಲು ಕೂಡ ಇದು ನೆರವಾಗಲಿದೆ. ಎಲ್‌ಐಸಿ ಬೀಮಾ ಸಖಿ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ಥಿರ ಆದಾಯ ದೊರಕಲಿದೆ.

ಈ ಯೋಜನೆ ಮೂಲಕ ಮಹಿಳೆಯರು ಕನಿಷ್ಠ 7 ಸಾವಿರ ರೂಪಾಯಿಯಿಂದ ಗರಿಷ್ಠ 21 ಸಾವಿರ ರೂಪಾಯಿವರೆಗೆ ತಿಂಗಳಿಗೆ ದುಡಿಯಬಹುದು. ಮೊದಲ ವರ್ಷ ಪ್ರತಿತಿಂಗಳು 7 ಸಾವಿರ ಪಡೆಯಲಿದ್ದಾರೆ. ಎರಡನೇ ವರ್ಷ 6 ಸಾವಿರ ರೂಪಾಯಿ ಮತ್ತು ಮೂರನೇ ವರ್ಷ 5 ಸಾವಿರ ರೂಪಾಯಿ ಪ್ರತಿತಿಂಗಳು ಸ್ಟೈಫೆಂಡ್‌ ದೊರಕಲಿದೆ.

ಮೊದಲ ಹಂತದಲ್ಲಿ ಬಿಮಾ ಸಖಿ ಯೋಜನೆಗೆ 35 ಸಾವಿರ ಮಹಿಳೆಯರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಮುಂದಿನ ದಿನಗಳಲ್ಲಿ 50 ಸಾವಿರ ಮಹಿಳೆಯರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಈ ಯೋಜನೆಯು ಭಾರತದಾದ್ಯಂತ ಆರಂಭವಾಗಲಿದೆ. ಈಗಾಗಲೇ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಕೆ ಕಿಂಡಿ ತೆರೆದಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಆಸಕ್ತರು ಡಿಸೆಂಬರ್‌ 9ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಸಮರ್ಪಕವಾಗಿ ದಾಖಲೆ ಪತ್ರಗಳನ್ನು ಸಲ್ಲಿಸಿ. ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.

ಅರ್ಜಿ ಸಲ್ಲಿಸುವ ಮಹಿಳೆಯರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

  1. ಎಲ್‌ಐಸಿ ಬಿಮಾ ಸಖಿ (ಎಂಸಿಎ ಸ್ಕೀಮ್‌) ಎನ್ನುವುದು ಸ್ಟೈಫಂಡರಿ ಸ್ಕೀಮ್‌ ಆಗಿದೆ. ಮೂರು ವರ್ಷಗಳ ಕಾಲ ಸ್ಟೈಫಂಡ್‌ ದೊರಕಲಿದೆ. ಈ ಯೋಜನೆಗೆ ಆಯ್ಕೆಯಾದವರನ್ನು ಕಾಯಂ ಉದ್ಯೋಗಿಗಳ ರೀತಿ ನೋಡಲಾಗುವುದಿಲ್ಲ.
  2. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷವಾಗಿದೆ.
  3. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯಾಗಿದೆ.
  4. ಪ್ರತಿವರ್ಷದ ಸ್ಟೈಫಂಡರಿ ಅವಧಿಯಲ್ಲೂ ಅಭ್ಯರ್ಥಿಗಳ ಪರ್ಫಾಮೆನ್ಸ್‌ಗೆ ಮಾನದಂಡಗಳು ಇರುತ್ತವೆ. ನಿರ್ದಿಷ್ಟ ಟಾರ್ಗೆಟ್‌ ಪೂರೈಸಬೇಕು.
  5. ಮೊದಲ ವರ್ಷ 24 ಲೈವ್ಸ್‌ ಪೂರೈಸಬೇಕು. ಮೊದಲ ವರ್ಷದ ಕಮಿಷನ್‌ (ಬೋನಸ್‌ ಕಮಿಷನ್‌ ಹೊರತುಪಡಿಸಿ) 48 ಸಾವಿರ ರೂಪಾಯಿ ದೊರಕುತ್ತದೆ.
  6. ಈಗಾಗಲೇ ಎಲ್‌ಐಸಿಯಲ್ಲಿ ಕೆಲಸ ಮಾಡುವವರು, ಏಜೆಂಟ್‌ ಆಗಿರುವವರು ಎಂಸಿಎಗೆ ಅರ್ಜಿ ಸಲ್ಲಿಸುವಂತೆ ಇಲ್ಲ. ಅವರ ಕುಟುಂಬದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
  7. ಈಗಾಗಲೇ ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವವರು, ಈ ಹಿಂದೆ ಏಜೆಂಟ್‌ ಆಗಿ ಕೆಲಸ ಮಾಡಿದ್ದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
  8. ಅರ್ಜಿ ನಮೂನೆ ಜೊತೆ ಇತ್ತೀಚಿನ ಪಾಸ್‌ಪೋರ್ಟ್‌ ಗಾತ್ರದ ಫೋಟೋ ಲಗ್ಗತ್ತಿಸಬೇಕು.
  9. ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, ಶೈಕ್ಷಣಿಕ ದಾಖಲೆಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
  10. ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್ಸೈಟ್‌ ವಿಳಾಸ: https://licindia.in/lic-s-bima-sakhi

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.