Loan fraud case: ಕೊಚ್ಚಾರ್ ದಂಪತಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್; ಸಾಲ ವಂಚನೆ ಪ್ರಕರಣ
Loan fraud case: ಬಾಂಬೆ ಹೈಕೋರ್ಟ್ ಈ ಜಾಮೀನು ನೀಡಿದ್ದು, ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಬಂಧನ ನಡೆಯದೇ ಇರುವ ಕಾರಣ ತಲಾ 1 ಲಕ್ಷ ರೂಪಾಯಿ ನಗದು ಠೇವಣಿ ಇರಿಸಿ ಜಾಮೀನು ಪಡೆಯಲು ಇಬ್ಬರಿಗೂ ಅವಕಾಶ ನೀಡಿದೆ. ಈ ಆದೇಶದ ಅನುಸಾರ ಕ್ರಮಗಳನ್ನು ಪೂರೈಸಿ ಕೊಚ್ಚಾರ್ ದಂಪತಿಯನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.
ಐಸಿಐಸಿಐ ಬ್ಯಾಂಕ್ - ವಿಡಿಯೋಕಾನ್ ಸಾಲ ವಂಚನೆ ಪ್ರಕರಣ (ICICI Bank-Videocon loan fraud case)ದಲ್ಲಿ ಆರೋಪಿಗಳಾದ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್‌ಗೆ ಸೋಮವಾರ ಜಾಮೀನು ಸಿಕ್ಕಿದೆ.
ಬಾಂಬೆ ಹೈಕೋರ್ಟ್ ಈ ಜಾಮೀನು ನೀಡಿದ್ದು, ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಬಂಧನ ನಡೆಯದೇ ಇರುವ ಕಾರಣ ತಲಾ 1 ಲಕ್ಷ ರೂಪಾಯಿ ನಗದು ಠೇವಣಿ ಇರಿಸಿ ಜಾಮೀನು ಪಡೆಯಲು ಇಬ್ಬರಿಗೂ ಅವಕಾಶ ನೀಡಿದೆ. ಈ ಆದೇಶದ ಅನುಸಾರ ಕ್ರಮಗಳನ್ನು ಪೂರೈಸಿ ಕೊಚ್ಚಾರ್ ದಂಪತಿಯನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.
ಐಸಿಐಸಿಐ ಬ್ಯಾಂಕ್ - ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಕೊಚ್ಚಾರ್ ದಂಪತಿಯನ್ನು ಸಿಬಿಐ ಅಧಿಕಾರಿಗಳು ಕಳೆದ ತಿಂಗಳು ಬಂಧಿಸಿದ್ದರು. ಇವರ ಜತೆಗೆ ವಿಡಿಯೋಕಾನ್ ಗ್ರೂಪ್‌ನ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಬಂಧಿಸಲಾಗಿತ್ತು. ಅಲ್ಲಿಂದೀಚೆಗೆ ಮೂವರು ಕೂಡ ನ್ಯಾಯಾಂಗ ಬಂಧನದಲ್ಲಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಅಗತ್ಯ ಕ್ರಮಗಳನ್ನು ಸಿಬಿಐ ನಡೆಸಿಲ್ಲ ಎಂಬುದನ್ನು ಉಲ್ಲೇಖಿಸಿ ಕೊಚ್ಚಾರ್ ದಂಪತಿ ತಮ್ಮ ಬಂಧನವನ್ನು ʻಅಕ್ರಮʼ ಎಂದು ಟೀಕಿಸಿದ್ದರು.
ಚಂದಾ ಕೊಚ್ಚಾರ್ ಪರ ಹಿರಿಯ ಅಡ್ವೋಕೇಟ್ ಅಮಿತ್ ದೇಸಾಯಿ, ಲಾಯರ್ ಕುಶಾಲ್ ಮೋರ್ ಇದೇ ಅಂಶವನ್ನು ಕೋರ್ಟ್ ಮುಂದಿಟ್ಟು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಬಂಧನವೇ ಅಕ್ರಮ ಎಂಬುದರ ಕಡೆಗೆ ಕೋರ್ಟಿನ ಗಮನಸೆಳೆದಿದ್ದರು. ದೀಪಕ್ ಕೊಚ್ಚಾರ್ ಪರ ಹಿರಿಯ ಅಡ್ವೋಕೇಟ್ ವಿಕ್ರಮ್ ಚೌಧರಿ ಕೂಡ ಸಿಬಿಐನ ಕ್ರಮಗಳಲ್ಲಿ ಉಂಟಾಗಿರುವ ಲೋಪಗಳ ಕಡೆಗೆ ಗಮನಸೆಳೆದರು.
ಸಿಬಿಐ ಪರ ವಾದ ಮಂಡಿಸಿದ ಹಿರಿಯ ಅಡ್ವೋಕೇಟ್ ರಾಜಾ ಠಾಕ್ರೆ, ಕೊಚ್ಚಾರ್ ದಂಪತಿ ಮೊದಲು ವಿಚಾರಣಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಬಂಧನವನ್ನು ಸಮರ್ಥಿಸಿದ ಠಾಕ್ರೆ, ಅವರ ನ್ಯಾಯಾಂಗ ಬಂಧನದ ನಂತರವೇ ಸಿಬಿಐಗೆ ವಿಚಾರಣೆ ಮುಂದುವರಿಸುವುದು ಸಾಧ್ಯವಾಯಿತು ಎಂದು ಹೇಳಿದರು. ವೈಟ್ ಕಾಲರ್ ಅಪರಾಧವಾದ ಕಾರಣ ಆರೋಪಿಗಳಿಗೆ ಕೈಕೋಳ ತೊಡಿಸಿಲ್ಲ ಎಂಬುದರ ಕಡೆಗೂ ಅವರು ಗಮನಸೆಳೆದರು.
ಗಮನಿಸಬಹುದಾದ ಇತರೆ ವಿಚಾರಗಳು
Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್ ರಿಜೆಕ್ಟ್ ಮಾಡಿದ ಆಯ್ಕೆ ಸಮಿತಿ!
Republic Day 2023: ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಸಲ ಅವಕಾಶ ಕೈತಪ್ಪಿ ಹೋಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್ ಬುಕ್ ಮಾಡಿ! ಇಲ್ಲಿದೆ ವಿವರ
Republic Day 2023: ಟಿಕೆಟ್ ಖರೀದಿ, ಪಾಸ್ ಪಡೆಯುವ ಪ್ರಕ್ರಿಯೆಯನ್ನು ಈ ಆಮಂತ್ರಣ ಪೋರ್ಟಲ್ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆ. ಅಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. ಕ್ಲಿಕ್ ಮಾಡಿ