BJP Candidate List: ಲೋಕಸಭೆ ಚುನಾವಣೆಗೆ 15 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bjp Candidate List: ಲೋಕಸಭೆ ಚುನಾವಣೆಗೆ 15 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

BJP Candidate List: ಲೋಕಸಭೆ ಚುನಾವಣೆಗೆ 15 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬಿಜೆಪಿ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದೆ. ಪುದುಚೇರಿ ಮತ್ತು ತಮಿಳುನಾಡಿನ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದೆ
ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದೆ (HT File Photo)

ದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 15 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ (ಮಾರ್ಚ್ 22) ಬಿಡುಗಡೆ ಮಾಡಿದೆ. ಏಪ್ರಿಲ್ 19 ರಂದು ಮೊದಲ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ನಡೆಯಲಿರುವ ತಮಿಳುನಾಡು ಮತ್ತು ಪುದುಚೇರಿಯ ಸಂಸದೀಯ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಲೋಕಸಭಾ ಚುನಾವಣೆಗೆ ಮೂರನೇ ಪಟ್ಟಿಯಲ್ಲಿ ತಮಿಳುನಾಡಿನ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ, ಇವತ್ತು 14 ಕ್ಷೇತ್ರಗಳಿಗೆ ಹುರಿಯಾಳುಗಳ ಹೆಸರುಗಳನ್ನು ಪ್ರಕಟಿಸಿದೆ.

ಪುದುಚೇರಿ ಲೋಕಸಭಾ ಕ್ಷೇತ್ರದಿಂದ ಎ.ನಮಸ್ಸಿವಾಯಂ ಅವರನ್ನು ಕಣಕ್ಕಿಳಿಸಿದೆ. ನಮಸ್ಸಿವಾಯಂ ಅವರು ಎನ್ ರಂಗಸ್ವಾಮಿ ಸರ್ಕಾರದಲ್ಲಿ ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 15 ಅಭ್ಯರ್ಥಿಗಳ ಬಿಜೆಪಿಯ 4ನೇ ಪಟ್ಟಿ ವಿವರ

1. ಪುದುಚೇರಿ - ಎ.ನಮಸ್ಸಿವಾಯಂ

2. ತಿರುವಳ್ಳೂರು (ಎಸ್ಸಿ) - ಪೊನ್ ವಿ ಬಾಲಗಣಪತಿ

3. ಚೆನ್ನೈ ಉತ್ತರ - ಆರ್.ಸಿ.ಪಾಲ್ ಕನಗರಾಜ್

4. ತಿರುವಣ್ಣಾಮಲೈ - ಎ.ಅಶ್ವತ್ಥಮನ್

5. ನಾಮಕ್ಕಲ್ - ಡಾ.ಕೆ.ಪಿ ರಾಮಲಿಂಗಂ

6. ತಿರುಪ್ಪೂರು - ಎ.ಪಿ.ಮುರುಗಾನಂದಂ

7. ಪೊಲ್ಲಾಚಿ - ಕೆ ವಸಂತರಾಜನ್

8. ಕರೂರ್ - ವಿವಿ ಸೆಂಥಿಲ್‌ನಾಥನ್

9. ಚಿದಂಬರಂ (ಎಸ್‌ಸಿ) - ಪಿ ಕಾರ್ತಿಯಾಯಿನಿ

10. ನಾಗಪಟ್ಟಿಣ್ಣಂ (ಎಸ್‌ಸಿ) - ಎಸ್‌ಜಿಎಂ ರಮೇಶ್

11. ತಂಜಾವೂರು - ಎಂ.ಮುರುಗಾನಂದಂ

12. ಶಿವಗಂಗಾ - ಡಾ.ದೇವನಾಥನ್ ಯಾದವ್

13. ಮಧುರೈ - ಪ್ರೊ.ರಾಮ ಶ್ರೀನಿವಾಸನ್

14. ವಿರುಧುನಗರ - ರಾಧಿಕಾ ಶರತ್ ಕುಮಾರ್

15. ತೆಂಕಾಸಿ (ಎಸ್ಸಿ) - ಬಿ.ಜಾನ್ ಪಾಂಡಿಯನ್

ಇದಕ್ಕೂ ಮುನ್ನ ಅಂದರೆ ನಿನ್ನೆ (ಮಾರ್ಚ್ 21, ಗುರುವಾರ) ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತಮಿಳಿಸೈ ಸೌಂದರರಾಜನ್ ಅವರು ಚೆನ್ನೈ ದಕ್ಷಿಣದಿಂದ ಕಣಕ್ಕಿಳಿದಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಕೊಯಮತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಹೆಸರಿಸಲಾಗಿದ್ದು, ಕೇಂದ್ರ ಸಚಿವ ಎಲ್.ಮುರುಗನ್ ಅವರನ್ನು ನೀಲಗಿರಿಯಿಂದ ಕಣಕ್ಕಿಳಿಸಲಾಗಿದೆ.

543 ಸಂಸದೀಯ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು ಮೂರನೇ ಹಂತ, ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು 5 ನೇ ಹಂತ, ಮೇ 25 ರಂದು 6 ನೇ ಹಂತ ಮತ್ತು ಜೂನ್ 1 ರಂದು ಕೊನೆಯ ಮತ್ತು 7 ನೇ ಹಂತದ ಮತದಾನ ನಡೆಯಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.