Lok Sabha Election: ಕರ್ನಾಟಕದಲ್ಲಿ ಚೊಂಬು, ತೆಲಂಗಾಣದಲ್ಲಿ ಕತ್ತೆ ಮೊಟ್ಟೆ; ಬಿಜೆಪಿ ವಿರುದ್ಧ ಆಕ್ರಮಣಕಾರಿ ಪ್ರಚಾರಕ್ಕೆ ಮುಂದಾದ ಕಾಂಗ್ರೆಸ್-lok sabha election 2024 chombu in karnataka now donkey egg in telangana congress attack against pm modi rmy ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Election: ಕರ್ನಾಟಕದಲ್ಲಿ ಚೊಂಬು, ತೆಲಂಗಾಣದಲ್ಲಿ ಕತ್ತೆ ಮೊಟ್ಟೆ; ಬಿಜೆಪಿ ವಿರುದ್ಧ ಆಕ್ರಮಣಕಾರಿ ಪ್ರಚಾರಕ್ಕೆ ಮುಂದಾದ ಕಾಂಗ್ರೆಸ್

Lok Sabha Election: ಕರ್ನಾಟಕದಲ್ಲಿ ಚೊಂಬು, ತೆಲಂಗಾಣದಲ್ಲಿ ಕತ್ತೆ ಮೊಟ್ಟೆ; ಬಿಜೆಪಿ ವಿರುದ್ಧ ಆಕ್ರಮಣಕಾರಿ ಪ್ರಚಾರಕ್ಕೆ ಮುಂದಾದ ಕಾಂಗ್ರೆಸ್

ಕರ್ನಾಟಕದ ರೀತಿಯಲ್ಲಿ ತೆಲಂಗಾಣದಲ್ಲೂ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ತೆಲಂಗಾಣಕ್ಕೆ ಪ್ರಧಾನಿ ಮೋದಿ ಕೊಟ್ಟಿದ್ದು ಗಾಡದಿ ಗುಡ್ಡ (ಕತ್ತೆಯ ಮೊಟ್ಟೆ) ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಚೊಂಬ ಪ್ರಚಾರ ಮುಗಿಯುತ್ತಿದ್ದಂತೆ ಇದೀಗ ತೆಲಂಗಾಣದಲ್ಲಿ ಕೇಂದ್ರದಿಂದ ಸಿಕ್ಕಿರೋದು ಕತ್ತೆಯ ಮೊಟ್ಟೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಚೊಂಬ ಪ್ರಚಾರ ಮುಗಿಯುತ್ತಿದ್ದಂತೆ ಇದೀಗ ತೆಲಂಗಾಣದಲ್ಲಿ ಕೇಂದ್ರದಿಂದ ಸಿಕ್ಕಿರೋದು ಕತ್ತೆಯ ಮೊಟ್ಟೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೈದರಾಬಾದ್: ಲೋಕಸಭೆ ಚುನಾವಣೆಯ (Lok Sabha Election 2024) 4ನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಚೊಂಬು ಜಾಹೀರಾತು (Karnataka Congress Chombu Advertisement) ಮೂಲಕ ಕೇಂದ್ರ ಸರ್ಕಾರ (Central Govt) ಹಾಗೂ ಪ್ರಧಾನಿ ಮೋದಿ (PM Narendra Modi) ಅವರ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದೇ ರೀತಿ ನೆರೆಯ ತೆಲಂಗಾಣ ಕಾಂಗ್ರೆಸ್ (Telangana Congress) ಕೂಡ ವಿಭಿನ್ನ ರೀತಿಯಲ್ಲಿ ಬಿಜೆಪಿ, ಪ್ರಧಾನಿ ವಿರುದ್ಧ ಪ್ರಚಾರದ ಮೂಲಕ ಕಿಡಿಕಾರುತ್ತಿದೆ. ಕೇಂದ್ರ ದಿಂದ ಕರ್ನಾಟಕಕ್ಕೆ ಸಿಕ್ಕಿದ್ದು ಚೊಂಬು ಎಂದು ಪ್ರಚಾರ ಮಾಡಿದ್ದರೆ, ಇತ್ತ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ತೆಲಂಗಾಣಕ್ಕೆ ಸಿಕ್ಕಿದ್ದು ಗಾಡಿದ ಗುಡ್ಡ (ಕತ್ತೆ ಮೊಟ್ಟೆ) ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೆಲಂಗಾಣದ ಮೇದಕ್ ಜಿಲ್ಲೆಯ ಸರೂರ್ ನಗರದಲ್ಲಿ ಇಂದು (ಮೇ 9, ಗುರುವಾರ) ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ಸಮಾರಂಭದಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಮಾತನಾಡಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಖಮ್ಮಂ ಜಿಲ್ಲೆಗೆ ಮೋದಿಯವರು ಏನು ಕೊಟ್ಟಿದ್ದಾರೆ. ಗಾಡಿದ ಗುಡ್ಡು (ಕತ್ತೆ ಮೊಟ್ಟೆ). ವರಂಗಲ್‌ನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಕೇಳಿದ್ರೆ ನಮಗೆ ಕೊಟ್ಟಿದ್ದು ಗಾಡಿದ ಗುಡ್ಡು, ಐಐಎಂ, ಐಐಟಿ ಕೇಳಿದ್ರೆ ಮೋದಿ ಕೊಟ್ಟಿದ್ದು ಗಾಡಿದ ಗುಡ್ಡ ಕೊಟ್ಟಿದ್ದಾರೆ ಎಂದು ಸಿಡಿದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ, ರದ್ದು ಮಾಡುತ್ತೇವೆ ಎಂದು ಬಿಜೆಪಿ, ಆರ್‌ಎಸ್‌ಎಸ್‌ ಸ್ಪಷ್ಟವಾಗಿ ಹೇಳಿವೆ. ಭಾರತದ ಸಂವಿಧಾನವು ಬಡವರ ಪುಸ್ತಕವಾಗಿದೆ. ಅದು ಅವರಿಗೆ ಹಕ್ಕುಗಳನ್ನು ನೀಡುತ್ತದೆ. ಬಿಜೆಪಿಯ ನಾಯಕರು ಸಂವಿಧಾನವನ್ನು ಬದಲಾಯಿಸುವ, ಅದನ್ನು ರದ್ದುಗೊಳಿಸುವ ಬಗ್ಗೆ ಮಾತನಾಡುವಾಗ ಅವರು ಬಡವರ ಮೇಲೆ ದಾಳಿ ಮಾಡದೆ ದೇಶದ ಆತ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.

ಫಸ್ಟ್ ಜಾಬ್ ಪಕ್ಕಿ ಎಂಬ ನಾವು ಹೊಸ ಯೋಜನೆಯನ್ನು ತರುತ್ತೇವೆ. ಒಂದು ವರ್ಷದಲ್ಲಿ ನಾವು ಭಾರತದ ಎಲ್ಲಾ ನಿರುದ್ಯೋಗಿ ಯುವಕರಿಗೆ ಕಂಪನಿಗಳು ಹಾಗೂ ಸಾರ್ವಜನಿಕ ವಲಯಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಹಾಗೂ ಕಚೇರಿಗಳಲ್ಲೂ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಚೊಂಬು ಪ್ರಚಾರ, ಪ್ರತಿಭಟನೆ

ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಂದ ಕರ್ನಾಟಕಕ್ಕೆ ಸಿಕ್ಕ ಪರಿಹಾರ ಚೊಂಬು ಎಂದು ಪ್ರಮುಖ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿತ್ತು. ನೆರೆ ಪರಿಹಾರದಲ್ಲಿ ಕರ್ನಾಟಕ್ಕೆ ಸಿಕ್ಕಿದ್ದು ಚೊಂಬು, ಬರ ಪರಿಹಾರದಲ್ಲಿ ಚೊಂಬು, ಜಿಎಸ್‌ಟಿ ತೆರಿಗೆ ಹಂಚಿಕೆಯಲ್ಲಿ ಚೊಂಬು, 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಚೊಂಬು, ವಿಶೇಷ ಅನುದಾನದಲ್ಲಿ ಚೊಂಬು, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನದಲ್ಲಿ ಚೊಂಬು, ನರೇಗಾ ಬಾಕಿ ಬಿಡುಗಡೆಯಲ್ಲಿ ಚೊಂಬು, ಭಾಷಾ ಅಭಿವೃದ್ಧಿ ಅನುದಾನದಲ್ಲಿ ಚೊಂಬು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚೊಂಬು, ಮಹದಾಯಿ ಯೋಜನೆಯಲ್ಲಿ ಚೊಂಬು, ಮೇಕೆದಾಟು ಅನುಮತಿಗಳಲ್ಲಿ ಚೊಂಬು, ಕನ್ನಡಿಗರಿಗೆ, ಕರ್ನಾಟಕಕ್ಕೆ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಸ್ವಾಭಿಮಾನಿ ಕನ್ನಡಿಗರೂ ಸಹ ನ್ಯಾಯಯುತವಾಗಿ ಖಾಲಿ ಚೊಂಬನ್ನೇ ಮರಳಿ ನೀಡುತ್ತಾರೆ ಎಂದು ಕೇಂದ್ರದ ವಿರುದ್ಧ ಪ್ರಚಾರ, ಪ್ರತಿಭಟನೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಸಚಿವರು ಹಾಗೂ ಇತರೆ ನಾಯಕರು ನಮೋ ವಿರುದ್ಧ ಗುಡುಗಿದ್ದರು. ಮೇ 13ಕ್ಕೆ 4ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.