ಲೋಕಸಭಾ ಚುನಾವಣೆ 2024; ಭಾರತದ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರು ಹೆಚ್ಚು; ಮತದಾರರ ವಿಶೇಷ ವಿವರ ಇಲ್ಲಿದೆ
Lok Sabha Election 2024: ಲೋಕಸಭಾ ಚುನಾವಣೆ 2024ರ ಚುನಾವಣಾ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಭಾರತದ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರ ಹೆಚ್ಚು. ಲೋಕಸಭೆ ಚುನಾವಣೆಯ ಮತದಾರರ ಯಾದಿಯಲ್ಲಿರುವ ಮತದಾರರ ವಿಶೇಷ ವಿವರ ಇಲ್ಲಿದೆ
ನವದೆಹಲಿ: ಲೋಕಸಭಾ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಪ್ರಕಟವಾಗಿದ್ದು, ಈ ಸಲದ ಚುನಾವಣೆಯಲ್ಲಿ ಮತಚಲಾಯಿಸಲಿರುವ ಮತದಾರರ ಸಂಖ್ಯೆ 96.88 ಕೋಟಿ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಈ ವರ್ಷ 1.89 ಕೋಟಿ ಮೊದಲ ಸಲ ಮತ ಚಲಾಯಿಸುವ ಮತದಾರರು ಇರಲಿದ್ದು, ಅವರಲ್ಲಿ 85 ಲಕ್ಷ ಮಹಿಳೆಯರು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಪ್ರತಿಯೊಬ್ಬರೂ "ಶಾಯಿ ಹಾಕಿಸಿಕೊಳ್ಳಿ. ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಮತ್ತು ಮತದಾರರಿಗೆ ಶಾಯಿ ಹಾಕುವಂತೆ ವಿನಂತಿಸುತ್ತೇನೆ" ಎಂದು ಅವರು ಮತದಾರರಲ್ಲಿ ಆಗ್ರಹಿಸಿದರು.
"ಭಾರತದ ಚುನಾವಣಾ ಆಯೋಗವು ವಿಶ್ವ ವೇದಿಕೆಯಲ್ಲಿ ಭಾರತದ ಛಾಪನ್ನು ಹೆಚ್ಚಿಸುವ ರೀತಿಯಲ್ಲಿ ರಾಷ್ಟ್ರೀಯ ಚುನಾವಣೆಯನ್ನು ನಡೆಸುವ ಭರವಸೆಯನ್ನು ನೀಡಿದೆ. ಎಲ್ಲಾ ರಾಜ್ಯಗಳ ಚುನಾವಣಾ ತಯಾರಿಯ ಮೌಲ್ಯಮಾಪನದ ನಂತರ, ಸ್ಮರಣೀಯ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸವಿದೆ" ಎಂದು ರಾಜೀವ್ ಕುಮಾರ್ ಹೇಳಿದರು.
12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರ ಹೆಚ್ಚು
ಈ ಸಲದ ಲೋಕಸಭೆ ಚುನಾವಣೆಗೆ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷರಿಗಿಂತ ಹೆಚ್ಚಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 96.8 ಕೋಟಿ. ಈ ಪೈಕಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು ಮತ್ತು 48,000 ತೃತೀಯ ಲಿಂಗಿಗಳು ಇದ್ದಾರೆ.
ದೇಶದಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 96.88 ಕೋಟಿ. ಈ ಪೈಕಿ 49.72 ಕೋಟಿ ಪುರುಷ ಮತದಾರರು. 47.15 ಕೋಟಿ ಮಹಿಳಾ ಮತದಾರರು. ಉಳಿದಂತೆ, 48,044 ತೃತೀಯ ಲಿಂಗಿ ಮತದಾರರು. ಅಂಗವೈಕಲ್ಯ ಹೊಂದಿರುವ ಮತದಾರರ ಸಂಖ್ಯೆ 88.35 ಲಕ್ಷ. ಇನ್ನು 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 1.85 ಕೋಟಿ. 100 ವರ್ಷ ಮೇಲ್ಪಟ್ಟ ಮತದಾರರು 2.38 ಲಕ್ಷ ಇದ್ದಾರೆ. ಇನ್ನು 18-19ರ ವಯೋಮಾನದವರು 1.84 ಕೋಟಿ. 20-29 ವರ್ಷ ವಯೋಮಾನದವರು 19.74 ಕೋಟಿ ಮತದಾರರಿದ್ದಾರೆ.
ಭಾರತದ ಒಟ್ಟು ಮತದಾರರು: 96.88 ಕೋಟಿ
ಪುರುಷರು: 49.72 ಕೋಟಿ
ಮಹಿಳೆಯರು: 47.15 ಕೋಟಿ
ಕೆಲಸ ಮಾಡಲಿರುವ ಚುನಾವಣಾ ಸಿಬ್ಬಂದಿ: 1.5 ಕೋಟಿ
ಮತಗಟ್ಟೆಗಳು - 10.5 ಲಕ್ಷ
ಮತಯಂತ್ರಗಳು - 55 ಲಕ್ಷ
ಚುನಾವಣಾ ಕಾರ್ಯದ ವಾಹನಗಳು - 4 ಲಕ್ಷ
ಚುನಾವಣಾ ವೀಕ್ಷಕರ ಸಂಖ್ಯೆ- 21,000
ಚುನಾವಣೆಯ ಪ್ರಮುಖ ದಿನಾಂಕಗಳು
ಹಂತ * ಮತದಾನ ದಿನಾಂಕ
1ನೇ ಹಂತ * 19.04.2024
2ನೇ ಹಂತ* 26.04.2024
3ನೇ ಹಂತ*07.05.2024
4ನೇ ಹಂತ*13.05.2024
5ನೇ ಹಂತ *20.05.2024
6ನೇ ಹಂತ *25.05.2024
7ನೇ ಹಂತ*-01.06.2024
ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಈ ಹಿಂದಿನ ಚುನಾವಣೆಯಲ್ಲಿ ಅಂದರೆ 2019 ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 303, ಕಾಂಗ್ರೆಸ್ 52, ತೃಣಮೂಲ ಕಾಂಗ್ರೆಸ್ 22, ಬಿಎಸ್‌ಪಿ 10, ಎನ್‌ಸಿಪಿ 5, ಸಿಪಿಐ-ಎಂ 3 ಮತ್ತು ಸಿಪಿಐ 2 ಸ್ಥಾನಗಳನ್ನು ಗೆದ್ದುಕೊಂಡಿದ್ದವು.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)
ವಿಭಾಗ