Exit Poll: 2014, 2019ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಎಷ್ಟು ನಿಖರವಾಗಿದ್ದವು? ಸಿವೋಟರ್ಸ್‌ನಿಂದ ಟುಡೇಸ್ ಚಾಣಕ್ಯವರೆಗೆ
2024ರ ಲೋಕಸಭಾ ಚುನಾವಣೆಯ 7 ಹಂತಗಳು ಮುಗಿದಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳ ಬಗ್ಗೆ ಸಮೀಕ್ಷೆಗಳು ಏನು ಹೇಳಿದ್ದವು? ಅವು ಎಷ್ಟು ನಿಖರವಾಗಿದ್ದವು ಅನ್ನೋದರ ವಿವರ ಇಲ್ಲಿದೆ.

ಬೆಂಗಳೂರು: ಚುನಾವಣಾ ಆಯೋಗವು (Election Commission) ನಿಗದಿಪಡಿಸಿದ ನಿರ್ಬಂಧದ ಅವಧಿಯ ನಂತರ ಇಂದು (ಜೂನ್ 1, ಶನಿವಾರ) ಸಂಜೆ 6.30 ರ ನಂತರ ಬಹುನಿರೀಕ್ಷಿತ ಎಕ್ಸಿಟ್ ಪೋಲ್ (Exit Polls 2024) ಫಲಿತಾಂಶಗಳು ಬರಲಿವೆ. ಲೋಕಸಭಾ ಚುನಾವಣೆಯ (Lok Sabaha Election 2024) ಜೊತೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೆ ಚುನಾವಣೆ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ನಂತರ ಬೂತ್ ನಿಂದ ನಿರ್ಗಮಿಸುವಾಗ ಏನು ಹೇಳಿದರು ಎಂಬುದರ ಆಧಾರದ ಮೇಲೆ ಈ ಮತಗಟ್ಟೆ ಸಮೀಕ್ಷೆಗಳು ಹೇಳಲಿವೆ.. ಆಕ್ಸಿಸ್ ಮೈ ಇಂಡಿಯಾ, ಟುಡೇಸ್ ಚಾಣಕ್ಯ, ಐಪಿಎಸ್ಒಎಸ್, ಸಿವೋಟರ್, ಸಿಎಸ್ಡಿಎಸ್ ಮುಂತಾದ ಏಜೆನ್ಸಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸುತ್ತವೆ.
2019ರಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿದ್ದವು? ಅವು ಎಷ್ಟು ನಿಖರವಾಗಿದ್ವು?
ತಪ್ಪುಗಳಿಗೆ ಯಾವಾಗಲೂ ಅವಕಾಶವಿರುವುದರಿಂದ ಎಕ್ಸಿಟ್ ಪೋಲ್ ಭವಿಷ್ಯವಾಣಿಗಳನ್ನು ಎಂದಿಗೂ ಕುರುಡಾಗಿ ನಂಬಬಾರದು. ಇತ್ತೀಚಿನ ದಿನಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಪ್ಪಾದ ನಿದರ್ಶನಗಳೂ ವಿರಳವಾಗಿಲ್ಲ. ಆದರೂ 2019 ಮತ್ತು 2014 ರಲ್ಲಿ ಚುನಾವಣೋತ್ತರ ಸಮೀಕ್ಷೆಗಳು ರಾಷ್ಟ್ರದ ಮನಸ್ಥಿತಿಯನ್ನು ತಪ್ಪಿಸಲಿಲ್ಲ.
2019ರ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ 306 ಮತ್ತು ಯುಪಿಎ 120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಎನ್‌ಡಿಎ 352 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಗಿನ ಯುಪಿಎ 93 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 52 ಸ್ಥಾನಗಳನ್ನು ಗಳಿಸಿತ್ತು.
Exit Poll agency | NDA | UPA |
India Today-Axis | 339-365 | 77-108 |
News 24-Today's Chanakya | 350 | 95 |
News18-IPSOS | 336 | 82 |
Times Now VMR | 306 | 132 |
India TV-CNX | 300 | 120 |
Sudarshan News | 305 | 124 |
Actual Result | 353 | 93 |
2014ರ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿದ್ದವು?
2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಎನ್‌ಡಿಎ ಗಳಿಸಲಿದ್ದ ಭಾರಿ ಅಂತರವನ್ನು ಹೇಳಿರಲಿಲ್ಲ. ಎನ್‌ಡಿಎ 283 ಸ್ಥಾನಗಳು ಮತ್ತು ಯುಪಿಎಗೆ 105 ಸ್ಥಾನಗಳು ಸಿಗಲಿವೆ ಎಂದು ಸರಾಸರಿ ಎಂಟು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಎನ್‌ಡಿಎ 336 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 282 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ 60 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.
Exit Poll agency | NDA | UPA |
India Today-Cicero | 272 | 115 |
News 24-Chanakya | 340 | 101 |
CNN IBN-CSDS | 280 | 97 |
Times Now ORG | 249 | 148 |
ABP News-Nielsen | 274 | 97 |
NDTV-Hansa Research | 279 | 103 |
Actual Result | 336 | 60 |
2024ರಲ್ಲಿ ಏನಾಗಬಹುದು?
2024 ರ ಚುನಾವಣೆ ಎನ್‌ಡಿಎ ಮತ್ತು ಯುಪಿಎ ನಡುವೆ ಅಲ್ಲ, ಇದು ಎನ್‌ಡಿಎ ಮತ್ತು ಪ್ರತಿಪಕ್ಷ ಬಿಜೆಪಿಯ ಹೊಸ ಟೀಂ ನಡುವಿನ ಚುನಾವಣೆಯಾಗಿದೆ. ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎಗೆ '400 ಪಾರ್' ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದ್ದಾರೆ. ಅಲ್ಲಿ ಬಿಜೆಪಿ ಸ್ವಂತವಾಗಿ 370 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ.
'ಟಿಆರ್‌ಪಿಗಾಗಿ ಊಹಾಪೋಹಗಳು ಮತ್ತು ಜಟಾಪಟಿ'ಯನ್ನು ಉತ್ತೇಜಿಸಲು ಟಿವಿ ಚಾನೆಲ್‌ಗಳು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
