ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Exit Poll: ಮತದಾರರಿಂದ ಮಾಹಿತಿ ಸಂಗ್ರಹಿಸಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಹೇಗೆ ಅಂದಾಜಿಸಲಾಗುತ್ತೆ? ಇಲ್ಲಿದೆ ಆಸಕ್ತಿಕರ ಮಾಹಿತಿ

Exit Poll: ಮತದಾರರಿಂದ ಮಾಹಿತಿ ಸಂಗ್ರಹಿಸಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಹೇಗೆ ಅಂದಾಜಿಸಲಾಗುತ್ತೆ? ಇಲ್ಲಿದೆ ಆಸಕ್ತಿಕರ ಮಾಹಿತಿ

2024ರ ಲೋಕಸಭೆ ಚುನಾವಣೆ ಅಂತಿಮ ಹಂತದ ಮತದಾನ ಜೂನ್ 1ರ ಶನಿವಾರ ಮುಕ್ತಾಯವಾಗಿಲಿದ್ದು, ಇಂದು ಸಂಜೆಯೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. ಮತದಾರರ ಮಾಹಿತಿ ಸಂಗ್ರಹಿಸಿ ಹೇಗೆ ಈ ಸಮೀಕ್ಷೆಗಳ ಫಲಿತಾಂಶಗಳನ್ನು ಅಂದಾಜಿಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಮತದಾರರಿಂದ ಮಾಹಿತಿ ಸಂಗ್ರಹಿಸಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಹೇಗೆ ಅಂದಾಜಿಸಲಾಗುತ್ತೆ? ಇಲ್ಲಿದೆ ಆಸಕ್ತಿಕರ ಮಾಹಿತಿ
ಮತದಾರರಿಂದ ಮಾಹಿತಿ ಸಂಗ್ರಹಿಸಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಹೇಗೆ ಅಂದಾಜಿಸಲಾಗುತ್ತೆ? ಇಲ್ಲಿದೆ ಆಸಕ್ತಿಕರ ಮಾಹಿತಿ

ಬೆಂಗಳೂರು: ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ಕಾಲ ನಡೆದ 2024ರ ಲೋಕಸಭೆ ಚುನಾವಣೆ 7ನೇ ಹಂತದ ಮತದಾನದೊಂದಿಗೆ (7th Phase Lok Sabha Election 2024) ಇಂದು (ಜೂನ್ 1, ಶನಿವಾರ) ಸಂಜೆ ಮುಕ್ತಾಯಗೊಳ್ಳುತ್ತಿದೆ. ಇಷ್ಟು ದಿನ ಎಲ್ಲರ ಆಸಕ್ತಿ ಮತದಾನವಾಗಿತ್ತು. ಇದೀಗ 7ನೇ ಹಾಗೂ ಕೊನೆಯ ಹಂತದ ವೋಟಿಂಗ್ ಮುಗಿಯುತ್ತಿದ್ದಂತೆ ಎಲ್ಲರ ಚಿತ್ತ ಮತಗಟ್ಟೆ ಸಮೀಕ್ಷೆಗಳತ್ತ (Exit Polls) ನೆಟ್ಟಿದೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಮತದಾರನ ಒಲವು ಯಾರಿಗಿದೆ ಅನ್ನೋದನ್ನು ತಿಳಿದುಕೊಳ್ಳಲು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಮತದಾರರು ಅಷ್ಟೇ ಅಲ್ಲದೆ, ಆಯಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ನಾಯಕರಿಗೂ ಈ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಇಂದು (ಜೂನ್ 1, ಶನಿವಾರ) ಅಂತಿಮ ಹಂತದ ಮತದಾನ ಮುಗಿದ ಕೆಲವೇ ನಿಮಿಷಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಲಿವೆ.

ಬಿಜೆಪಿ ನೇತೃತ್ವದ ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ-ಎನ್‌ಡಿಎ ಅಥವಾ ಕಾಂಗ್ರೆಸ್ ಮುಂದಾಳತ್ವದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ-ಇಂಡಿಯಾ ಈ ಎರಡು ಮೈತ್ರಿ ಕೂಟಗಳಲ್ಲಿ ಯಾರನ್ನು ಮತದಾರರು ಬೆಂಬಲಿಸಿದ್ದಾರೆ? ಯಾರಿಗೆ ಹೆಚ್ಚು ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂಬುದನ್ನು ಈ ಮತಗಟ್ಟೆ ಸಮೀಕ್ಷೆಗಳು ಬಹಿರಂಗ ಪಡಿಸಲಿವೆ.

ಟ್ರೆಂಡಿಂಗ್​ ಸುದ್ದಿ

ಎಕ್ಸಿಟ್ ಪೋಲ್‌ಗಳನ್ನು ಹೇಗೆ ನಡೆಸಲಾಗುತ್ತದೆ

ಮತದಾನೋತ್ತರ ಸಮೀಕ್ಷೆಗಳನ್ನು ಮತದಾನ ನಡೆಯುವ ಮತಗಟ್ಟೆಗಳ ಕೇಂದ್ರಗಳ ಹೊರಗಡೆ ನಡೆಸಲಾಗುತ್ತದೆ. ಇಲ್ಲಿ ಮತದಾರ ತಮ್ಮ ಹಕ್ಕು ಚಲಾಯಿಸಿ ಹೊರ ಬಂದ ಬಳಿಕ ಯಾವ ಪಕ್ಷವನ್ನು ಬೆಂಬಲಿಸಿದ್ದಾನೆ ಎಂಬುದನ್ನು ಬಹಿರಂಗಪಡಿಸುತ್ತಾನೆ. ಈ ಸಮೀಕ್ಷೆಗಳು ಚುನಾವಣಾ ಪೂರ್ಣ ಅಭಿಪ್ರಾಯ ಸಂಗ್ರಹಗಳಿಂದ ಭಿನ್ನವಾಗಿದ್ದು, ತಕ್ಷಣವೇ ಮತದಾನದ ನಂತರದ ಒಳನೋಟವನ್ನು ನೀಡುತ್ತವೆ. ಖಾಸಗಿ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಈ ಎಕ್ಸಿಟ್ ಪೋನ್‌ಗಳನ್ನು ನಡೆಸುತ್ತವೆ. ಪ್ರಶ್ನಾವಳಿಗಳನ್ನು ರಚಿಸಿ ಅದರಂತೆ ಮತದಾರರಿಂದ ಉತ್ತರಗಳನ್ನು ಪಡೆಯಲಾಗುತ್ತದೆ. ಮತದಾರರ ಅಭಿಪ್ರಾಯ, ಅಂಕಿ ಅಂಶಗಳನ್ನು ಸಂಗ್ರಹಿಸಿದ ಇದರ ಆಧಾರದ ಮೇಲೆ ಮತದಾನೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.

ಫಲಿತಾಂಶಗಳನ್ನು ಅಂದಾಜಿಸಲು ಇರುವ ಸವಾಲುಗಳು

ಯಾವ ಪಕ್ಷಕ್ಕೆ ಎಷ್ಟು ಮತಗಳು ಹೋಗಿರಬಹುದು, ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದನ್ನು ಅಂದಾಜಿಸುವ ಕೆಲಸ ತುಂಬಾ ಸಂಕೀರ್ಣವಾಗಿರುತ್ತದೆ. ಹಿಂದಿನ ಚುನಾವಣಾ ಫಲಿತಾಂಶದ ಆಧಾರದ ಮೇಲೆ ಸ್ವಿಂಗ್ ಮಾದರಿಯ ಸ್ಥಳ, ಜಾತಿ, ಧರ್ಮ ಹಾಗೂ ಆರ್ಥಿಕ ವರ್ಗಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಿಖರವಾದ ಸಮೀಕ್ಷೆಗಳನ್ನು ನಡೆಸಲು ಸಾಕಷ್ಟು ಸಮಯ, ಸಂಪನ್ಮೂಲಗಳು ಬೇಕಾಗುತ್ತವೆ. ಈ ಪ್ರಕ್ರಿಯೆ ತುಂಬಾ ಕಷ್ಟಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಎಕ್ಸಿಟ್ ಪೋಲ್‌ಗಳಿಗೆ ಆಧುನಿಕ ಸ್ಪರ್ಶ

ಮತಗಟ್ಟೆ ಸಮೀಕ್ಷೆಗಳನ್ನು ನಡೆಸಬೇಕಾದರೆ ಈ ಹಿಂದೆ ಮತದಾನ ನಡೆಯುವ ಮತಗಟ್ಟೆಗಳ ಬಳಿಗೆ ತೆರೆಳಿ ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೋನ್, ವಾಟ್ಸಾಪ್ ಗುಂಪುಗಳು, ಸಾಮಾಜಿಕ ಜಾಲತಾಣಗಳ ಮೂಲಕವು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳನ್ನಾಗಿ ಪ್ರಕಟಿಸಲಾಗುತ್ತದೆ. ಫಲಿತಾಂಶಗಳನ್ನು ಅಂದಾಜಿಸಲು ಯಾವುದೇ ರೀತಿಯ ಸಾರ್ವತ್ರಿಕ ವಿಧಾನವಿಲ್ಲ. ನಿರಂತರ ನಾವೀನ್ಯತೆ ಅಗತ್ಯವಾಗಿರುತ್ತದೆ.

ಮತಗಟ್ಟೆ ಸಮೀಕ್ಷೆಗಳನ್ನು ನಿಯಂತ್ರಿಸುವ ಕಾನೂನು

ಮತಗಟ್ಟೆ ಸಮೀಕ್ಷೆಗಳನ್ನು ನಿಯಂತ್ರಿಸುವ ಸಂಬಂಧ ಕೆಲವು ನಿಮಯಗಳಿವೆ. ಪ್ರಜಾಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್ 126ಎ ಅಡಿಯಲ್ಲಿ ನ್ಯಾಯಯುತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಎಕ್ಸಿಟ್ ಪೋನ್‌ಗಳನ್ನು ನಿಯಂತ್ರಿಸಲಾಗುತ್ತದೆ. ಮತದಾನ ಆರಂಭವಾದಾಗಿನಿಂದ ಕೊನೆಯ ಹಂತ ಮುಗಿದ ಅರ್ದ ಗಂಟೆಯ ತನಕ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗ ಪಡಿಸುವಂತಿಲ್ಲ. ಮತದಾರರ ವರ್ತನೆಯ ಮೇಲೆ ಪ್ರಭಾವ ಬೀರವುದನ್ನು ತಡೆಯಲು ಭಾರತೀಯ ಚುನಾವಣಾ ಆಯೋಗ ಈ ನಿಯಮಗಳನ್ನು ಜಾರಿಗೊಳಿಸಿದೆ.

ಮತದಾನೋತ್ತರ ಸಮೀಕ್ಷೆಯ ಫಲಿತಾಂಶಗಳು ಯಾವಾಗಲೂ ನಿಖರವಾಗಿರುವುದಿಲ್ಲ. ಇದು 2023ರ ಚುನಾವಣಾ ಫಲಿತಾಂಶಗಳಲ್ಲಿ ಸಾಬೀತಾಗಿತ್ತು. ಫಲಿತಾಂಶದ ನಿಖರತೆಯನ್ನು ಸುಧಾರಿಸಲು ಕೆಲವು ಕ್ಷೇತ್ರಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡು ನಿಖರ ಮಾಹಿತಿ ಸಂಗ್ರಹಕ್ಕೆ ಯತ್ನಿಸುತ್ತವೆ. ಅಧಿಕೃತ ಫಿಲಿತಾಂಶಗಳನ್ನು ಘೋಷಿಸಲು ಮುನ್ನ ಸಂಭಾವ್ಯ ಫಲಿತಾಂಶಗಳನ್ನು ಮತಗಟ್ಟೆ ಸಮೀಕ್ಷೆಯಲ್ಲಿ ವಿವರಿಸಲಾಗುತ್ತದೆ. ಆದರೆ ಶೇಕಡಾ 100ಕ್ಕೆ 100 ರಷ್ಟು ಖಚಿತವಾದ ಸಮೀಕ್ಷೆಗಳನ್ನು ಹೇಳಲು ಸಾಧ್ಯವಿಲ್ಲ. ಅದರೆ ಅಂದಾಜಿನ ಪ್ರಕಾರ ಹತ್ತಿರದ ಫಲಿತಾಂಶಗಳನ್ನು ಸಮೀಕ್ಷೆ ನಡೆಸುವ ಸಂಸ್ಥೆಗಳು ಹೇಳುತ್ತವೆ.

1957 ರಲ್ಲಿ ದೇಶದ ಮೊದಲ ಮತಗಟ್ಟೆ ಸಮೀಕ್ಷೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪಿಯನ್ ಸಂಸ್ಥೆ 2ನೇ ಲೋಕಸಭಾ ಚುನಾವಣೆಯ ಸಮಯದಲ್ಲಿ ನಡೆಸಿತ್ತು. ಅಂದಿನಿಂದ ಇಂದಿನವರೆಗೆ ಚುನಾವಣಾ ಸಮಯದಲ್ಲಿ ಸಮೀಕ್ಷೆಗಳನ್ನು ನಡೆಸುತ್ತಲೇ ಬರಲಾಗುತ್ತಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.