BJP 1st List: ಪ್ರಧಾನಿ ಮೋದಿ ವಾರಣಾಸಿ, ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧೆ; ಲೋಕಸಭೆ ಚುನಾವಣಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ
ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಯಾವ ಕ್ಷೇತ್ರಕ್ಕೆ ಯಾರ ಹೆಸರು ಘೋಷಣೆ ಮಾಡಿದೆ ಎಂಬುದರ ಸಂಪೂರ್ಣ ರಾಜ್ಯವಾರು ಸಂಪೂರ್ಣ ವಿವರ ಇಲ್ಲಿದೆ.
ದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು (ಮಾರ್ಚ್ 2, ಶನಿವಾರ) 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶದಿಂದ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದಿಂದ 12, ತೆಲಂಗಾಣದಿಂದ 9, ಅಸ್ಸಾಂನಿಂದ 11, ಜಾರ್ಖಂಡ್ ಮತ್ತು ಛತ್ತೀಸ್ಗಢದಿಂದ ತಲಾ 11, ದೆಹಲಿಯಿಂದ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಘೋಷಿಸಿದ್ದಾರೆ. ಅರುಣಾಚಲ ಪ್ರದೇಶದಿಂದ ಇಬ್ಬರು, ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ ಒಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಅದೇ ರೀತಿಯಾಗಿ ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶಕ್ಕೂ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿಲ್ಲ. ಕನ್ನಡದರಾದ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಕೇರಳದ ತಿರುವನಂತಪುರಂ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ. ಇತ್ತೀಚೆಗಷ್ಟೇ ಅವರ ರಾಜ್ಯಸಭಾ ಅವಧಿ ಮುಕ್ತಾಯವಾಗಿತ್ತು.
ಅಭ್ಯರ್ಥಿಗಳು ಹಾಗೂ ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ
- ಉತ್ತರ ಪ್ರದೇಶ
ಪ್ರಧಾನಿ ಮೋದಿ - ವಾರಣಾಸಿ
ರಾಜನಾಥ್ ಸಿಂಗ್ - ಲಕ್ನೋ
ಸ್ಮೃತಿ ಇರಾನಿ - ಅಮೇಥಿ
ರಿತೇಶ್ ಪಾಂಡೆ - ಅಂಬೇಡ್ಕರ್ ನಗರ
ಹೇಮಾ ಮಾಲಿನಿ - ಮಥುರಾ
ರವಿ ಕಿಶನ್ - ಗೋರಖ್‌ಪುರ
ಪ್ರದೀಪ್ ಕುಮಾರ್ - ಕೈರಾನಾ
ಸಂಜೀವ್ ಕುಮಾರ್ ಬಲ್ಯಾನ್ - ಮುಜಾಫರ್ ನಗರ
ಓಂ ಕುಮಾರ್ - ನಾಗಿನಾ (SC)
ಘನಶ್ಯಾಮ್ ಲೋಧಿ - ರಾಂಪುರ್
ಪರಮೇಶ್ವರ್ ಲಾಲ್ ಸೈನಿ - ಸಂಭಾಲ್
ಕನ್ವರ್ ಸಿಂಗ್ ತನ್ವರ್ - ಅಮ್ರೋಹಾ
ಮಹೇಶ್ ಶರ್ಮಾ - ಗೌತಮ್ ಬುದ್ಧ ನಗರ
ಭೋಲಾ ಸಿಂಗ್ - ಬುಲಂದ್‌ಶಹರ್ (SC)
ಸತ್ಯಪಾಲ್ ಸಿಂಗ್ ಬಾಘೇಲ್ - ಆಗ್ರಾ (SC)
ರಾಜ್ ಕುಮಾರ್ ಚಹಾರ್ - ಫತೇಪುರ್ ಸಿಕ್ರಿ
ರಾಜವೀರ್ ಸಿಂಗ್ - ಎತಾಹ್
ಧರ್ಮೇಂದ್ರ ಕಶ್ಯಪ್ - ಅಒನ್ಲಾ
ಅರುಣ್ ಕುಮಾರ್ ಸಾಗರ್ - ಶಹಜಹಾನ್‌ಪುರ (SC)
ಅಜಯ್ ಮಿಶ್ರಾ ತೇನಿ - ಖೇರಿ
ರೇಖಾ ವರ್ಮಾ - ಧೌರಾಹ್ರಾ
ರಾಜೇಶ್ ವರ್ಮಾ - ಸೀತಾಪುರ
ಜಲ ಪ್ರಕಾಶ್ ರಾವತ್ - ಹರ್ದೋಯಿ (SC)
ಅಶೋಕ್ ಕುಮಾರ್ ರಾವತ್ - ಮಿಶ್ರಿಖ್ (SC)
ಸಾಕ್ಷಿ ಮಹಾರಾಜ್ - ಉನ್ನಾವ್
ಕೌಶಲ್ ಕಿಶೋರ್ - ಮೋಹನ್‌ಲಾಲ್‌ಗಂಜ್ (SC)
ಸಂಗಮ್ ಲಾಲ್ ಗುಪ್ತಾ - ಪ್ರತಾಪಗಢ
ಮುಖೇಶ್ ರಜಪೂತ್ - ಫರೂಕಾಬಾದ್
ರಾಮ್ ಶಂಕರ್ ಕಥೇರಿಯಾ - ಇಟಾವಾ (SC)
ಸುಬ್ರತ್ ಪಾಠಕ್ - ಕನೌಜ್
ದೇವೇಂದ್ರ ಸಿಂಗ್ ಭೋಲೆ - ಅಕ್ಬರ್ಪುರ್
ಭಾನು ಪ್ರತಾಪ್ ಸಿಂಗ್ ವರ್ಮಾ - ಜಲೌನ್ (SC)
ಅನುರಾಗ್ ಶರ್ಮಾ - ಝಾನ್ಸಿ
ಕುನ್ವರ್ ಪುಷ್ಪೇಂದ್ರ ಸಿಂಗ್ ಚಾಂಡೆಲ್ - ಹಮೀರ್ಪುರ್
ಆರ್ ಕೆ ಸಿಂಗ್ ಪಟೇಲ್ - ಬಂದಾ
ಸಾಧ್ವಿ ನಿರಂಜನ್ ಜ್ಯೋತಿ - ಫತೇಪುರ್
ಉಪೇಂದ್ರ ಸಿಂಗ್ ರಾವತ್ - ಬಾರಾಬಂಕಿ (SC)
ಲಲ್ಲು ಸಿಂಗ್ - ಫೈಜಾಬಾದ್
ಸಾಕೇತ್ ಮಿಶ್ರಾ - ಶ್ರಾವಸ್ತಿ
ಕೀರ್ತಿ ವರ್ಧನ್ ಸಿಂಗ್ - ಗೊಂಡ
ಜಗದಾಂಬಿಕಾ ಪಾಲ್ - ಡೊಮರಿಯಾಗಂಜ್
ಹರೀಶ್ ದ್ವಿವೇದಿ - ಬಸ್ತಿ
ಪ್ರವೀಣ್ ಕುಮಾರ್ ನಿಶಾದ್ - ಸಂತ ಕಬೀರ್ ನಗರ
ಪಂಕಜ್ ಚೌಧರಿ - ಮಹಾರಾಜಗಂಜ್
ವಿಜಯ್ ಕುಮಾರ್ ದುಬೆ - ಕುಶಿ ನಗರ
ಕಮಲೇಶ್ ಪಾಸ್ವಾನ್ - ಬನ್ಸ್ ಗಾಂವ್ (SC)
ನೀಲಂ ಸೋಂಕರ್ - ಲಾಲ್‌ಗಂಜ್ (SC)
ದಿನೇಶ್ ಲಾಲ್ ಯಾದವ್ 'ನಿರಾಹುವಾ' - ಅಜಂಗಢ
ರವೀಂದ್ರ ಕುಶ್ವಾಹ - ಸೇಲಂಪುರ
ಕೃಪಾಶಂಕರ್ ಸಿಂಗ್ - ಜಾನ್ಪುರ್
ಮಹೇಂದ್ರ ನಾಥ್ ಪಾಂಡೆ - ಚಂದೌಲಿ
2. ಪಶ್ಚಿಮ ಬಂಗಾಳ
ನಿಸಿತ್ ಪ್ರಮಾಣಿಕ್ - ಕೂಚ್ ಬೆಹರ್ (SC)
ಮನೋಜ್ ತಿಗ್ಗಾ - ಅಲಿಪುರ್ದುವಾರ್ಸ್ (ST)
ಡಾ.ಸುಕಾಂತ ಮಜುಂದಾರ್ - ಬಾಳೂರುಘಟ್ಟ
ಖಗೆನ್ ಮುರ್ಮು - ಮಲ್ದಹಾ ಉತ್ತರ
ಶ್ರೀರೂಪಾ ಮಿತ್ರ ಚೌಧರಿ - ಮಾಲ್ದಾಹ ದಕ್ಷಿಣ
ಡಾ.ನಿರ್ಮಲ್ ಕುಮಾರ್ ಸಹಾ - ಬಹರಂಪುರ
ಶ್ರೀ ಗೌರಿ ಶಂಕರ್ ಘೋಷ್ - ಮುರ್ಷಿದಾಬಾದ್
ಜಗನ್ನಾಥ್ ಸರ್ಕಾರ್ - ರಣಘಾಟ್ (SC)
ಶಂತನು ಠಾಕೂರ್ - ಬಂಗಾವ್ (SC)
ಡಾ. ಅಶೋಕ್ ಕಂದಾರಿ - ಜಾಯ್‌ನಗರ (SC)
ಡಾ. ಅನಿರ್ಬನ್ ಗಂಗೂಲಿ - ಜಾದವ್‌ಪುರ
ಡಾ. ರತಿನ್ ಚಕ್ರವರ್ತಿ - ಹೌರಾ
ಲಾಕೆಟ್ ಚಟರ್ಜಿ - ಹೂಗ್ಲಿ
ಸೌಮೆಂದು ಅಧಿಕಾರಿ - ಕಂಠಿ
ಹಿರಣ್ಮಯ್ ಚಟ್ಟೋಪಾಧ್ಯಾಯ - ಘಟಾಲ್
ಜ್ಯೋತಿರ್ಮಯ್ ಸಿಂಗ್ ಮಹತೋ - ಪುರುಲಿಯಾ
ಡಾ. ಶುಭಾಶ್ ಸರ್ಕಾರ್ - ಬಂಕುರಾ
ಸೌಮಿತ್ರಾ ಖಾನ್ - ಬಿಷ್ಣುಪುರ್
ಪವನ್ ಸಿಂಗ್ - ಅಸನ್ಸೋಲ್
ಪ್ರಿಯಾ ಸಹಾ - ಬೋಲ್ಪುರ್ (SC)
3. ಮಧ್ಯಪ್ರದೇಶ
ಜ್ಯೋತಿರಾದಿತ್ಯ ಸಿಂಧಿಯಾ - ಗುಣ
ಶಿವಮಂಗಲ್ ಸಿಂಗ್ ತೋಮರ್ - ಮೊರೆನಾ
ಸಂಧ್ಯಾ ರೈ - ಭಿಂಡ್ (SC)
ಭರತ್ ಸಿಂಗ್ ಕುಶ್ವಾಹ - ಗ್ವಾಲಿಯರ್
ಲತಾ ವಾಂಖೆಡೆ - ಸಾಗರ್
ವೀರೇಂದ್ರ ಖಟಿಕ್ - ಟಿಕಮ್‌ಗಢ್ (SC)
ರಾಹುಲ್ ಲೋಧಿ - ದಾಮೋಹ್
ವಿ ಡಿ ಶರ್ಮಾ - ಖಜುರಾಹೊ
ಗಣೇಶ್ ಸಿಂಗ್ - ಸತ್ನಾ
ಜನಾರ್ದನ್ ಮಿಶ್ರಾ - ರೇವಾ
ರಾಜೇಶ್ ಮಿಶ್ರಾ - ಸಿಧಿ
ಶಹದೋಲ್ (ST) - ಹಿಮಾದ್ರಿ ಸಿಂಗ್
ಆಶಿಶ್ ದುಬೆ - ಜಬಲ್ಪುರ್
ಫಗ್ಗನ್ ಸಿಂಗ್ ಕುಲಸ್ತೆ - ಮಂಡ್ಲಾ (ST)
ದರ್ಶನ್ ಸಿಂಗ್ ಚೌಧರಿ - ಹೋಶಂಗಾಬಾದ್
ಅಲೋಕ್ ಶರ್ಮಾ - ಭೋಪಾಲ್
ರೋಡ್ಮಲ್ ನಗರ - ರಾಜ್‌ಗಡ್
ಮಹೇಂದ್ರ ಸಿಂಗ್ ಸೋಲಂಕಿ - ದೇವಾಸ್ (SC)
ಸುಧೀರ್ ಗುಪ್ತಾ - ಮಂಡ್ಸೂರ್
ಅನಿತಾ ನಗರ್ ಸಿಂಗ್ ಚೌಧನ್ - ರತ್ಲಾಮ್ (ST)
ಗಜೇಂದ್ರ ಪಟೇಲ್ - ಖಾರ್ಗೋನ್ (ST)
ಜ್ಞಾನೇಶ್ವರ್ ಪಾಟೀಲ್ - ಖಾಂಡ್ವಾ
ದುರ್ಗಾ ದಾಸ್ ಯುಕೆ - ಬೆತುಲ್ (ST)
4. ಗುಜರಾತ್
ಅಮಿತ್ ಶಾ - ಗಾಂಧಿನಗರ
ವಿನೋದಭಾಯಿ ಲಖ್ಮಾಶಿ ಚಾವ್ಡಾ - ಕಚ್ಛ್ (SC)
ರೇಖಾಬೆನ್ ಹಿತೇಶ್ಭಾಯಿ ಚೌಧರಿ - ಬನಸ್ಕಾಂತ
ಭರತ್‌ಸಿಂಹಜಿ ದಾಭಿ - ಪಟಾನ್
ದಿನೇಶಭಾಯಿ ಕೋದರ್ಭಾಯಿ ಮಕ್ವಾನಾ - ಅಹಮದಾಬಾದ್ ವೆಸ್ಟ್ (SC)
ಪರ್ಷೋತ್ತಮ್ ರೂಪಾಲಾ - ರಾಜ್ಕೋಟ್
ಮನ್ಸುಖ್ ಮಾಂಡವಿಯಾ - ಪೋರ್ಬಂದರ್
ಪೂನಂಬೆನ್ ಮಾಡಮ್ - ಜಾಮ್‌ನಗರ
ಮಿತೇಶ್ಭಾಯ್ ರಮೇಶ್ಭಾಯ್ ಪಟೇಲ್ - ಆನಂದ್
ದೇವುಸಿನ್ಹ ಚೌಹಾಣ್ - ಖೇಡಾ
ರಾಜಪಾಲ್ಸಿನ್ಹ್ ಮಹೇಂದ್ರಸಿನ್ಹ್ ಜಾಧವ್ - ಪಂಚಮಹಲ್
ಜಸ್ವಂತ್‌ಸಿನ್ಹ ಭಭೋರ್ - ದಾಹೋದ್ (ST)
ಮನ್ಸುಖಭಾಯಿ ವಾಸವ - ಭರೂಚ್
ಪ್ರಭುಭಾಯಿ ನಾಗರಭಾಯ್ ವಾಸವ - ಬಾರ್ಡೋಲಿ (ST)
ಸಿ ಆರ್ ಪಾಟೀಲ್ - ನವಸಾರಿ
5. ರಾಜಸ್ಥಾನ
ಓಂ ಬಿರ್ಲಾ - ಕೋಟಾ
ಅರ್ಜುನ್ ರಾಮ್ ಮೇಘವಾಲ್ - ಬಿಕಾನೆರ್ (SC)
ದೇವೇಂದ್ರ ಝಜಾರಿಯಾ - ಚುರು
ಸ್ವಾಮಿ ಸುಮೇಧಾನಂದ ಸರಸ್ವತಿ - ಸಿಕರ್
ಭೂಪೇಂದ್ರ ಯಾದವ್ - ಅಲ್ವಾರ್
ರಾಮಸ್ವರೂಪ್ ಕೋಲಿ - ಭರತ್‌ಪುರ (SC)
ಜ್ಯೋತಿ ಮಿರ್ಧಾ - ನಾಗೌರ್
ಪಿ ಪಿ ಚೌಧರಿ - ಪಾಲಿ
ಗಜೇಂದ್ರ ಸಿಂಗ್ ಶೇಖಾವತ್ - ಜೋಧಪುರ
ಕೈಲಾಶ್ ಚೌಧರಿ - ಬಾರ್ಮರ್
ಲುಂಬರಂ ಚೌಧರಿ - ಜಲೋರ್
ಮನ್ನಾಲಾಲ್ ರಾವತ್ - ಉದಯಪುರ (ST)
ಮಹೇಂದ್ರ ಮಾಳವೀಯ - ಬನ್ಸ್ವಾರಾ (ST)
ಸಿ ಪಿ ಜೋಶಿ - ಚಿತ್ತೋರಗಢ
ದುಶ್ಯಂತ್ ಸಿಂಗ್ - ಜಲಾವರ್-ಬರನ್
6. ಕೇರಳ
ರಾಜೀವ್ ಚಂದ್ರಶೇಖರ್ - ತಿರುವನಂತಪುರಂ
ಎಂ ಎಲ್ ಅಶ್ವಿನಿ - ಕಾಸರಗೋಡು
ಸಿ ರಘುನಾಥ್ - ಕಣ್ಣೂರು
ಪ್ರಫುಲ್ಲ ಕೃಷ್ಣ - ವಡಕರ
ಎಂ ಟಿ ರಮೇಶ್ - ಕೋಝಿಕ್ಕೋಡ್
ಅಬ್ದುಲ್ ಸಲಾಂ - ಮಲಪ್ಪುರಂ
ನಿವೇದಿತಾ ಸುಬ್ರಮಣಿಯನ್ - ಪೊನ್ನಾನಿ
ಸಿ ಕೃಷ್ಣಕುಮಾರ್ - ಪಾಲಕ್ಕಾಡ್
ಸುರೇಶ್ ಗೋಪಿ - ತ್ರಿಶೂರ್
ಶೋಭಾ ಸುರೇಂದ್ರನ್ - ಆಲಪ್ಪುಳ
ಅನಿಲ್ ಕೆ ಆಂಟನಿ - ಪತ್ತನಂತಿಟ್ಟ
ವಿ ಮುರಳೀಧರನ್ - ಅಟ್ಟಿಂಗಲ್
7. ತೆಲಂಗಾಣ
ಬಂಡಿ ಸಂಜಯ್ ಕುಮಾರ್ - ಕರೀಂನಗರ
ಅರವಿಂದ್ ಧರ್ಮಪುರಿ - ನಿಜಾಂಬಾದ್
ಬಿ.ಬಿ.ಪಾಟೀಲ್ - ಜಹೀರಾಬಾದ್
ಎಟೆಲ ರಾಜೇಂದರ್ - ಮಲ್ಕಾಜಗಿರಿ
ಜಿ.ಕಿಶನ್ ರೆಡ್ಡಿ - ಸಿಕಂದ್ರಾಬಾದ್
ಡಾ. ಮಾಧವಿ ಲತಾ - ಹೈದರಾಬಾದ್
ಕೊಂಡ ವಿಶ್ವೇಶ್ವರ್ ರೆಡ್ಡಿ - ಚೆಲ್ವೆಲ್ಲಾ
ಪಿ. ಭರತ್ - ನಾಗರ್ಕರ್ನೂಲ್ (SC)
ಬೂರ ನರಸಯ್ಯ ಗೌಡ್ - ಭೋಂಗಿರ್
8. ಅಸ್ಸಾಂ
ಸರ್ಬಾನಂದ ಸೋನೋವಾಲ್ - ದಿಬ್ರುಗಢ
ಕೃಪಾನಾಥ್ ಮಲ್ಲಾಹ್ - ಕರೀಂಗಂಜ್ (SC)
ಪರಿಮಳ್ ಸುಕ್ಲಬೈದ್ಯ - ಸಿಲ್ಚಾರ್
ಅಮರ್ ಸಿಂಗ್ ಟಿಸ್ಸೊ - ಸ್ವಾಯತ್ತ ಜಿಲ್ಲೆ (ST)
ಬಿಜುಲಿ ಕಲಿತಾ ಮೇಧಿ - ಗೌಹಾಟಿ
ದಿಲೀಪ್ ಸೈಕಿಯಾ - ಮಂಗಲ್ದೋಯ್
ರಂಜಿತ್ ದತ್ತಾ - ತೇಜ್‌ಪುರ
ಸುರೇಶ್ ಬೋರಾ - ನೌಗಾಂಗ್
ಕಾಮಾಖ್ಯ ಪ್ರಸಾದ್ ತಾಸಾ - ಕಲಿಯಬೋರ್
ಟೋಪೋನ್ ಕುಮಾರ್ ಗೊಗೈ - ಜೋರ್ಹತ್
ಪ್ರಧಾನ್ ಬರುವಾ - ಲಖಿಂಪುರ
ಜಾರ್ಖಂಡ್ತಾಲಾ ಮರಾಂಡಿ - ರಾಜಮಹಲ್ (ST)
ಸುನಿಲ್ ಸೊರೆನ್ - ದುಮ್ಕಾ (ST)
ನಿಶಿಕಾಂತ್ ದುಬೆ - ಗೊಡ್ಡಾ
ಅನ್ನಪೂರ್ಣ ದೇವಿ - ಕೊಡರ್ಮ
ಸಂಜಯ್ ಸೇಠ್ - ರಾಂಚಿ
ವಿಧುತ್ ಬರನ್ ಮಹತೋ - ಜಮ್ಶೆಡ್‌ಪುರ
ಗೀತಾ ಕೋಡಾ - ಸಿಂಗ್ಭೂಮ್ (ST)
ಅರ್ಜುನ್ ಮುಂಡಾ - ಕುಂತಿ (ST)
ಸಮೀರ್ ಓರಾನ್ - ಲೋಹರ್ದಗಾ (ST)
ವಿಷ್ಣು ದಯಾಳ್ ರಾಮ್ - ಪಲಮೌ (SC)
ಮನೀಶ್ ಜೈಸ್ವಾಲ್ - ಹಜಾರಿಬಾಗ್
9. ಛತ್ತೀಸ್‌ಗಢ
ಚಿಂತಾಮಣಿ ಮಹಾರಾಜ್ - ಸರ್ಗುಜ (ST)
ರಾಧೇಶ್ಯಾಮ್ ರಾಥಿಯಾ - ರಾಯ್‌ಗಢ್ (ST)
ಕಮಲೇಶ್ ಜಂಗ್ಡೆ - ಜಾಂಜ್ಗೀರ್-ಚಂಪಾ (SC)
ಸುಶ್ರೀ ಸರೋಜ್ ಪಾಂಡೆ - ಕೊರ್ಬಾ
ತೋಖಾನ್ ಸಾಹು - ಬಿಲಾಸ್ಪುರ್
ಸಂತೋಷ್ ಪಾಂಡೆ - ರಾಜನಂದಗಾಂವ್
ವಿಜಯ್ ಬಾಘೆಲ್ - ದುರ್ಗ್
ಬ್ರಿಜ್ಮೋಹನ್ ಅಗರ್ವಾಲ್ - ರಾಯ್ಪುರ್
ರೂಪ್ ಕುಮಾರಿ ಚೌಧರಿ - ಮಹಾಸಮುಂಡ್
ಮಹೇಶ್ ಕಶ್ಯಪ್ - ಬಸ್ತಾರ್ (ST)
ಭೋಜರಾಜ್ ನಾಗ್ - ಕಂಕೇರ್ (ST)
10. ದೆಹಲಿ
ಪ್ರವೀಣ್ ಖಂಡೇಲ್ವಾಲ್ - ಚಾಂದಿನಿ ಚೌಕ್
ಮನೋಜ್ ತಿವಾರಿ - ಈಶಾನ್ಯ ದೆಹಲಿ
ಸುಶ್ರೀ ಬಾನ್ಸುರಿ ಸ್ವರಾಜ್ - ನವದೆಹಲಿ
ಕಮಲಜೀತ್ ಸೆಹ್ರಾವತ್ - ಪಶ್ಚಿಮ ದೆಹಲಿ
ರಾಮ್ವೀರ್ ಸಿಂಗ್ ಬಿಧುರಿ - ದಕ್ಷಿಣ ದೆಹಲಿ
11. ಜಮ್ಮು ಮತ್ತು ಕಾಶ್ಮೀರ
ಜಿತೇಂದ್ರ ಸಿಂಗ್ - ಉಧಂಪುರ
ಜುಗಲ್ ಕಿಶೋರ್ ಶರ್ಮಾ - ಜಮ್ಮು
12. ಅರುಣಾಚಲ ಪ್ರದೇಶ
ಕಿರಣ್ ರಿಜಿಜು - ಅರುಣಾಚಲ ಪಶ್ಚಿಮ
ತಾಪಿರ್ ಗಾವೊ - ಅರುಣಾಚಲ ಪೂರ್ವ
13. ಗೋವಾ
ಶ್ರೀಪಾದ್ ಯೆಸ್ಸೋ ನಾಯಕ್ - ಉತ್ತರ ಗೋವಾ
14. ತ್ರಿಪುರಾ
ಬಿಪ್ಲಬ್ ದೇಬ್ - ತ್ರಿಪುರ
15. ಅಂಡಮಾನ್ ಮತ್ತು ನಿಕೋಬಾರ್
ಬಿಷ್ಣು ಪಾದ ರೇ - ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
16. ದಮನ್ ಮತ್ತು ದಿಯು
ಲಾಲುಭಾಯ್ ಪಟೇಲ್ - ದಮನ್ ಮತ್ತು ದಿಯು