Lok Sabha Election Result Live: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ, ಮತಎಣಿಕೆ ಆರಂಭ ಎಷ್ಟು ಗಂಟೆಗೆ? ಯಾರಿಗೆ ಪ್ರಧಾನಿ ಪಟ್ಟ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Election Result Live: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ, ಮತಎಣಿಕೆ ಆರಂಭ ಎಷ್ಟು ಗಂಟೆಗೆ? ಯಾರಿಗೆ ಪ್ರಧಾನಿ ಪಟ್ಟ?

Lok Sabha Election Result Live: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ, ಮತಎಣಿಕೆ ಆರಂಭ ಎಷ್ಟು ಗಂಟೆಗೆ? ಯಾರಿಗೆ ಪ್ರಧಾನಿ ಪಟ್ಟ?

Lok Sabha Election 2024 Result Live Updates: ಭಾರತದ ಮುಂದಿನ ಪ್ರಧಾನಮಂತ್ರಿ ಯಾರೆಂದು ನಿರ್ಧರಿಸುವ ಲೋಕಸಭೆ ಚುನಾವಣೆ 2024ರ ಫಲಿತಾಂಶಕ್ಕಾಗಿ ಜಗತ್ತೇ ಕಾಯುತ್ತಿದೆ. ಮೇ 4ರ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ಫಲಿತಾಂಶದ ಕ್ಷಣಕ್ಷಣದ ಲೈವ್‌ ಅಪ್‌ಡೇಟ್‌ಗಳನ್ನು ಇಲ್ಲಿ ಪಡೆಯಿರಿ.

ನಾಳೆ ಲೋಕಸಭೆ ಚುನಾವಣೆ ಫಲಿತಾಂಶ, ಮತಎಣಿಕೆ ಆರಂಭ ಎಷ್ಟು ಗಂಟೆಗೆ? ಯಾರಿಗೆ ಪ್ರಧಾನಿ ಪಟ್ಟ?
ನಾಳೆ ಲೋಕಸಭೆ ಚುನಾವಣೆ ಫಲಿತಾಂಶ, ಮತಎಣಿಕೆ ಆರಂಭ ಎಷ್ಟು ಗಂಟೆಗೆ? ಯಾರಿಗೆ ಪ್ರಧಾನಿ ಪಟ್ಟ? (PC: Manjunath Kotagunasi)

Lok Sabha Election 2024 Result Live Updates: ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಅಂದರೆ ಮೇ 4ರಂದು ಪ್ರಕಟವಾಗಲಿದೆ. ಭಾರತದ ಮುಂದಿನ ಪ್ರಧಾನಮಂತ್ರಿ ಯಾರು? ಎಂಬ ಪ್ರಶ್ನೆಗೆ ಈ ಫಲಿತಾಂಶ ಉತ್ತರ ನೀಡಲಿದೆ. ಭಾರತದ ಚುನಾವಣಾ ಆಯೋಗವು ಬೆಳಗ್ಗೆ 8 ಗಂಟೆಗಳಲ್ಲಿ ವಿವಿಧ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭಿಸಲಿದೆ. ಮುಂದಿನ ಕೇಂದ್ರ ಸರಕಾರ ರಚನೆಗಾಗಿ ಆಡಳಿತರೂಢ ಬಿಜೆಪಿ ಪಕ್ಷ ಮತ್ತು ಇಂಡಿಯಾ ಒಕ್ಕೂಟ ಕಾತರದಿಂದ ಕಾಯುತ್ತಿರುವ ಈ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯು results.eci.gov.inನಲ್ಲಿ ದೊರೆಯಲಿದೆ. ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ತಾಜಾ ಮಾಹಿತಿ, ಕುತೂಹಲಕಾರಿ ಅಂಶಗಳು, ಚುನಾವಣಾ ಫಲಿತಾಂಶದ ಸಮಗ್ರ ಚಿತ್ರಣವನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನೀಡಲಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಯಾರಿಗೆ ಹಿನ್ನಡೆ, ಯಾರಿಗೆ ಮುನ್ನಡೆ? ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಗೆದ್ದವರ, ಸೋತವರ ಮಾಹಿತಿ, ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ಪಡೆದ ಸ್ಥಾನಗಳು ಸೇರಿದಂತೆ ಸಮಸ್ತ ಮಾಹಿತಿಯ ಲೈವ್‌ ಅಪ್‌ಡೇಟ್‌ ಇಲ್ಲಿ ಲಭ್ಯ.

10 pm
ನಿರ್ಭೀಡೆಯಿಂದ ಮತ ಕೆಲಸ ಮಾಡಿ: ಅಧಿಕಾರಿಗಳಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

8.56 pm

ಮತದಾನ ಪ್ರಮಾಣ ದಾಖಲೆ: ಚುನಾವಣೆ ಆಯೋಗ ಸಂತಸ

8.35 pm

ಪಶ್ಚಿಮ ಬಂಗಾಳದ ಎರಡು ಕಡೆ ಮರು ಮತದಾನ

ಪಶ್ಚಿಮಬಂಗಾಲದ ಎರಡು ಮತಗಟ್ಟೆಗಳಲ್ಲಿ ಲೋಕಸಭೆ ಚುನಾವಣೆಗೆ ಮರು ಮತದಾನ ನಡೆಯಿತು. ಮಥುರಾಪುರ ಹಾಗೂ ಬಾರಾಸತ್‌ ಕೇತ್ರಗಳ ತಲಾ ಒಂದೊಂದು ಕಡೆ ಶಾಂತಿಯುತವಾಗಿ ಮತದಾನ ನಡೆಯಿತು. ಎರಡು ದಿನದ ಹಿಂದೆ ಇಲ್ಲಿ ಗಲಾಟೆ ಕಾರಣಕ್ಕೆ ಮತದಾನ ನಡೆದಿರಲಿಲ್ಲ

8.10 PM

ಈ ರಾಜ್ಯಗಳಲ್ಲಿ ನಮಗೆ ಗೆಲುವು; ಇಂಡಿಯಾ ಮೈತ್ರಿಕೂಟದ ಭರವಸೆ

ಭಾರತದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ಬರುವ ಸೂಚನೆಯನ್ನು ಎಕ್ಸಿಟ್‌ ಪೋಲ್‌ ಫಲಿತಾಂಶಗಳು ನೀಡಿದ್ದರು ಇಂಡಿಯಾ ಮೈತ್ರಿಕೂಟಗಳು ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕದಲ್ಲಿ ಗೆಲುವು ಸಾಧಿಸಬಹುದು ಎಂಬ ಆಶಾಭಾವನೆ ಹೊಂದಿದೆ. ಇವುಗಳಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರ ಈ ವರ್ಷಾಂತ್ಯದಲ್ಲಿ ಮತ್ತು ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿವೆ

6.30 PM

ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮತ ಎಣಿಕೆ ವೀಕ್ಷಣೆಗೆ ಸಿದ್ಧತೆ

ದೆಹಲಿಯ ಬಿಜೆಪಿ ಪ್ರದಾನ ಕಚೇರಿಯಲ್ಲಿ ಮತ ಎಣಿಕೆ ವೀಕ್ಷಣೆಗೆ ಸಿದ್ಧತೆ ನಡೆದಿದೆ. ಪ್ರದಾನ ಕಚೇರಿಯ ಮುಂದೆ ಶಾಮಿಯಾನ ಹಾಕಲಾಗಿದ್ದು, ನೃತ್ಯ ಮಾಡಿ ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶದ ಬಳಿಕ ಮೋದಿ ಬರುವ ಸಾಧ್ಯತೆ ಇದ್ದು, ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

5.55 PM

ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಸಭೆ

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಬಿಜೆಪಿ ಸಜ್ಜಾಗುತ್ತಿದ್ದಂತೆ ಪಕ್ಷದ ಸಾಧನೆ ಮತ್ತು ಮತ ಎಣಿಕೆಗೆ ಸಿದ್ಧತೆ ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಕ್ಸಿಟ್‌ ಪೋಲ್‌ನಲ್ಲಿ ಎನ್‌ಡಿಎಗೆ ದೊಡ್ಡ ಗೆಲುವಿನ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿಯ ಅವಲೋಕನ ಮಾಡಲಾಯಿತು.

4:50 PM

ಚುನಾವಣೋತ್ತರ ಸಮೀಕ್ಷೆಗಳಿಗೆ ಯಾವುದೇ ಮೌಲ್ಯವಿಲ್ಲ; ಮಮತಾ ಬ್ಯಾನರ್ಜಿ

ಜೂನ್‌ 1, ಶನಿವಾರ ನಡೆದ ಎಕ್ಸಿಟ್‌ ಪೋಲ್‌ನಲ್ಲಿ ಈ ಬಾರಿ ಎನ್‌ಡಿಎ ಬಹುಮತ ಗಳಿಸಲಿದ್ದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿ ಮಾಡಿವೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣೋತ್ತರ ಸಮೀಕ್ಷೆಗಳಿಗೆ ಯಾವುದೇ ಮೌಲ್ಯವಿಲ್ಲ. 2016, 2021ರ ಪಶ್ಚಿಮ ಬಂಗಾಳ ವಿಧಾನಸಭೆ ಎಕ್ಸಿಟ್‌ ಪೋಲ್‌ ಸುಳ್ಳಾಗಿತ್ತು ಎಂದಿದ್ದಾರೆ.

4:15 PM

ಬಿಜೆಪಿ ಗೆಲುವಿನ ಭರವಸೆ, ಸಿಹಿ ಸಿದ್ದಮಾಡಿಕೊಳ್ಳುತ್ತಿರುವ ಬಿಜೆಪಿ ಕಾರ್ಯಕರ್ತರು

ಜೂನ್‌ 1 ರಂದು ನಡೆದ ಎಕ್ಸಿಟ್‌ ಪೋಲ್‌ ಭವಿಷ್ಯ ಖಂಡಿತ ನಿಜವಾಗುತ್ತದೆ. ಮೋದಿ ಹ್ಯಾಟ್ರಿಕ್‌ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಲು ಸಿದ್ಧರಿದ್ದಾರೆ. ಸುಮಾರು 400 ಕಿಲೋ ಸಿಹಿ ತಯಾರಿಕೆಗೆ ಆರ್ಡರ್‌ ನೀಡಿರುವುದಾಗಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸನ್ನಿ ಯಾದವ್ ಮಾಹಿತಿ ನೀಡಿದ್ದಾರೆ.

3:40 PM

ಬಿಜೆಪಿಗೆ 303 ಸ್ಥಾನಗಳು ಖಚಿತ ಎಂದ ಪ್ರಶಾಂತ್ ಕಿಶೋರ್

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ.

3:00 PM

ಲೋಕಸಭೆ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ

ಜೂನ್‌ 1 ರಂದು ನಡೆದ ಲೋಕಸಭೆ ಎಕ್ಸಿಟ್‌ ಪೋಲ್‌ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ "ನಾವು ಕಾಯಬೇಕು, ಕಾದು ನೋಡಬೇಕು ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.