UP Election Result 2024: ಉತ್ತರ ಪ್ರದೇಶ ರಣರಂಗದಲ್ಲಿ ಎನ್‌ಡಿಎಗೆ ಹಿನ್ನಡೆ, ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Up Election Result 2024: ಉತ್ತರ ಪ್ರದೇಶ ರಣರಂಗದಲ್ಲಿ ಎನ್‌ಡಿಎಗೆ ಹಿನ್ನಡೆ, ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ

UP Election Result 2024: ಉತ್ತರ ಪ್ರದೇಶ ರಣರಂಗದಲ್ಲಿ ಎನ್‌ಡಿಎಗೆ ಹಿನ್ನಡೆ, ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ

Lok Sabha Election 2024 Results: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತನ್ನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಎನ್​ಡಿಎ ಮೈತ್ರಿಕೂಟ ಹಿನ್ನಡೆ ಸಾಧಿಸುತ್ತಿದೆ.

UP Election Result 2024: ಉತ್ತರ ಪ್ರದೇಶ ರಣರಂಗದಲ್ಲಿ ಎನ್‌ಡಿಎಗೆ ಹಿನ್ನಡೆ, ಐಎನ್​ಡಿಐಎ ಒಕ್ಕೂಟಕ್ಕೆ ಮುನ್ನಡೆ
UP Election Result 2024: ಉತ್ತರ ಪ್ರದೇಶ ರಣರಂಗದಲ್ಲಿ ಎನ್‌ಡಿಎಗೆ ಹಿನ್ನಡೆ, ಐಎನ್​ಡಿಐಎ ಒಕ್ಕೂಟಕ್ಕೆ ಮುನ್ನಡೆ

ಉತ್ತರ ಪ್ರದೇಶ, ನಮ್ಮ ದೇಶದ ಅತಿ ದೊಡ್ಡ ರಾಜ್ಯ. ದೇಶದ ರಾಜಕೀಯದಲ್ಲಿ ಅತ್ಯಂತ ಗಮನ ಸೆಳೆದಿರುವ ಪ್ರಮುಖ ರಾಜ್ಯವಾಗಿದೆ. ಸಂಸತ್ತಿಗೆ ಅತ್ಯಧಿಕ ಸಂಸದರನ್ನು ಕಳುಹಿಸಿಕೊಡುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಉತ್ತರ ಪ್ರದೇಶದಲ್ಲಿ ಈ ಬಾರಿ ಯಾವ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ರಣಕಣದಲ್ಲಿ ಅಭ್ಯರ್ಥಿಗಳ ನಾಡಿಮಮಿಡಿತ ಹೆಚ್ಚಿಸಿದೆ.

ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಟ್ರೆಂಡ್‌ಗಳ ಪ್ರಕಾರ ಯುಪಿಯಲ್ಲಿ ಇಂಡಿಯಾ ಮೈತ್ರಿಕೂಟ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಎನ್​ಡಿಎ ಒಕ್ಕೂಟ 36 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ಸಹ ಹಿನ್ನಡೆ ಅನುಭವಿಸಿದ್ದಾರೆ. ಒಟ್ಟಾರೆ ಎನ್​ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುತ್ತಿದೆ. ಆದರೆ ಮುಂದಿನ ಸುತ್ತುಗಳ ಮತ ಎಣಿಕೆಯಲ್ಲಿ ಇದರ ಚಿತ್ರಣ ಬದಲಾಗಬಹುದು ಅಥವಾ ಆಗದೆಯೂ ಇರಬಹುದು.

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 80 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ, ಈ ಬಾರಿಯೂ ಹಿನ್ನಡೆ ಅನುಭವಿಸಿ ಅಚ್ಚರಿ ಮೂಡಿಸಿದೆ. ಕಳೆದ ಬಾರಿ ಬಿಎಸ್‌ಪಿ ಮತ್ತು ಸಮಾಜವಾದಿ ಮಿತ್ರಪಕ್ಷಗಳು ಕ್ರಮವಾಗಿ 10 ಮತ್ತು ಐದು ಸ್ಥಾನಗಳನ್ನು ಗೆದ್ದಿದ್ದವು. ಆದರೆ ಈ ಬಾರಿಗೆ ಕಾಂಗ್ರೆಸ್​ನೊಂದಿಗೆ ಕೈ ಜೋಡಿಸಿ ಇಂಡಿಯಾ (INDIA) ಒಕ್ಕೂಟದೊಂದಿಗೆ ಕಣಕ್ಕಿಳಿದು ಮೇಲುಗೈ ಸಾಧಿಸುತ್ತಿವೆ.

ಕಾಂಗ್ರೆಸ್ ಪಾಲಿಗೆ ಅದರ ಕುಟುಂಬದ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ ಬರೇಲಿ ಪ್ರತಿಷ್ಠೆಯ ಕದನಗಳಾಗಿವೆ. ಕಳೆದ ಬಾರಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದ ಅಮೇಥಿಗೆ ಈ ಬಾರಿ ವಿಶೇಷ ಕ್ಷೇತ್ರವಾಗಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 62 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

ಬಿಜೆಪಿ ತನ್ನ ಹಳೆಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್), ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಮತ್ತು ಒಪಿ ರಾಜ್‌ಭರ್‌ನ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದೆ. ಎಕ್ಸಿಟ್ ಪೋಲ್‌ಗಳು ಉತ್ತರ ಪ್ರದೇಶದಲ್ಲಿ ಎನ್‌ಡಿಎ ಗೆಲುವು ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಆದರೆ, ಐಎನ್​​ಡಿಐಎ ಒಕ್ಕೂಟ ಇದರ ಸಾಧ್ಯತೆಯನ್ನು ತಳ್ಳಿಹಾಕಿವೆ. ಇದೀಗ ಟ್ರೆಂಡ್ ನೋಡಿದರೆ, ಎನ್​ಡಿಎ ಮೈತ್ರಿಕೂಟವೇ ಹಿಂದಿಳಿದಿರುವುದು ಅಚ್ಚರಿ ಮೂಡಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.