ಕನ್ನಡ ಸುದ್ದಿ  /  Nation And-world  /  Lok Sabha Election 2024 Which Party Has Received Highest Money Through Electoral Bonds Here Are Top 10 Points Rmy

Electoral Bonds: ಚುನಾವಣಾ ಬಾಂಡ್‌ಗಳಿಂದ ಅತಿ ಹೆಚ್ಚು ಹಣ ಪಡೆದ ಪಕ್ಷ ಯಾವುದು? ತಿಳಿಯಬೇಕಾದ ಪ್ರಮುಖ 10 ಅಂಶಗಳಿವು

ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ 6,986.5 ಕೋಟಿ ರೂಪಾಯಿಗಳ ಅತಿ ಹೆಚ್ಚು ಹಣವನ್ನು ಪಡೆದಿದೆ. ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಕಂಪನಿ ಡಿಎಂಕೆಗೆ 509 ಕೋಟಿ ರೂ.ಗಳ ದೇಣಿಗೆ ನೀಡಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಯಾವ ರಾಜಕೀಯ ಪಕ್ಷ ಎಷ್ಟು ಹಣವನ್ನು ಪಡೆದಿದೆ ಎಂಬುದರ ಬಗ್ಗೆೆ ಭಾರತೀಯ ಚುನಾವಣಾ ಆಯೋಗ ಅಂಕಿ ಅಂಶಗಳನ್ನು ಒದಗಿಸಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಯಾವ ರಾಜಕೀಯ ಪಕ್ಷ ಎಷ್ಟು ಹಣವನ್ನು ಪಡೆದಿದೆ ಎಂಬುದರ ಬಗ್ಗೆೆ ಭಾರತೀಯ ಚುನಾವಣಾ ಆಯೋಗ ಅಂಕಿ ಅಂಶಗಳನ್ನು ಒದಗಿಸಿದೆ. (REUTERS)

ದೆಹಲಿ: ಚುನಾವಣಾ ಬಾಂಡ್‌ಗಳ ಬಗ್ಗೆ ರಾಜಕೀಯ ಪಕ್ಷಗಳಿಂದ ಪಡೆದ ಡೇಟಾವನ್ನು ಭಾರತದ ಚುನಾವಣಾ ಆಯೋಗ ಭಾನುವಾರ (ಮಾರ್ಚ್ 17) ಬಿಡುಗಡೆ ಮಾಡಿದ್ದು, ಮುಚ್ಚಿದ ಲಕೋಟೆಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದೆ. ಈ ವಿವರಗಳು ಏಪ್ರಿಲ್ 12, 2019 ರ ಹಿಂದಿನ ಅವಧಿಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 2018 ರಲ್ಲಿ ಪರಿಚಯಿಸಿದಾಗಿನಿಂದ ಈ ಬಾಂಡ್‌ಗಳ ಮೂಲಕ ಗರಿಷ್ಠ 6,986.5 ಕೋಟಿ ರೂ.ಗಳನ್ನು ಸ್ವೀಕರಿಸಿದ್ದರೆ, ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಕಂಪನಿ ಈಗ ರದ್ದುಪಡಿಸಿದ ಚುನಾವಣಾ ಬಾಂಡ್‌ಗಳ ವಿಧಾನದ ಮೂಲಕ ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆಗೆ) 509 ಕೋಟಿ ರೂಪಾಯಿ ನೀಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗವು ಬಹಿರಂಗಪಡಿಸಿದ ಒಟ್ಟು 523 ಮಾನ್ಯತೆ ಪಡೆದ ಮತ್ತು ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಬಗ್ಗೆ ಅಂಕಿ ಅಂಶಗಳು ಬಹಿರಂಗವಾಗಿವೆ. ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲು ಮತ್ತು ರಿಡೀಮ್ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಚುನಾವಣಾ ಆಯೋಗವು ಕಳೆದ ವಾರ ಪ್ರಕಟಿಸಿದ ಮತ್ತೊಂದು ಡೇಟಾಸೆಟ್ ಇದಾಗಿದೆ.

ಚುನಾವಣಾ ಬಾಂಡ್‌ಗಳು: ಚುನಾವಣಾ ಆಯೋಗದ ದತ್ತಾಂಶದ ಪ್ರಮುಖ ಅಂಶಗಳು

  1. ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿದ್ದ ಸ್ಯಾಂಟಿಯಾಗೊ ಮಾರ್ಟಿನ್‌ಗೆ ಸಂಬಂಧಿಸಿದ ಫ್ಯೂಚರ್ ಗೇಮಿಂಗ್ ಕಂಪನಿ ನೀಡಿರುವ 656.5 ಕೋಟಿ ರೂಪಾಯಿಗಳ ದೇಣಿಗೆಯಲ್ಲಿ ಶೇಕಡಾ 77 ರಷ್ಟು ಅಂದರೆ 509 ಕೋಟಿ ರೂಪಾಯಿ ಡಿಎಂಕೆ ಪಕ್ಷಕ್ಕೆ ನೀಡಿದೆ.
  2. ಫ್ಯೂಚರ್ ಗೇಮಿಂಗ್ ಖರೀದಿಸಿದ ಉಳಿದ 859 ಕೋಟಿ ರೂ.ಗಳ ಬಾಂಡ್‌ಗಳ ಫಲಾನುಭವಿಗಳಾದ ರಾಜಕೀಯ ಪಕ್ಷಗಳು ಅಪೂರ್ಣ ಮಾಹಿತಿಯಿಂದಾಗಿ ಇದನ್ನು ಬಹಿರಂಗಪಡಿಸಿಲ್ಲ
  3. 2018 ರಲ್ಲಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ ಪಡೆದ ನಿಧಿಗಳಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ. ಭಾರತೀಯ ಜನತಾ ಪಾರ್ಟಿ ಒಟ್ಟು 6,986.5 ಕೋಟಿ ರೂಪಾಯಿ ದೇಣಿಗೆ ಪಡೆದಿದೆ.
  4. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ 1,397 ಕೋಟಿ ರೂ.ಪಾಯಿ, ಕಾಂಗ್ರೆಸ್ 1,334 ಕೋಟಿ ರೂಪಾಯಿ, ಭಾರತ್ ರಾಷ್ಟ್ರ ಸಮಿತಿ 1,322 ಕೋಟಿ ರೂಪಾಯಿ ಪಡೆದಿದೆ.
  5. ಒಡಿಶಾದ ಬಿಜು ಜನತಾದಳ (ಬಿಜೆಡಿ) 944.5 ಕೋಟಿ ರೂ., ಡಿಎಂಕೆ 656.5 ಕೋಟಿ ರೂ., ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಸುಮಾರು 442.8 ಕೋಟಿ ರೂ.ಗಳೊಂದಿಗೆ ಐದನೇ ಸ್ಥಾನದಲ್ಲಿದೆ.
  6. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಒಟ್ಟು 10.84 ಕೋಟಿ ರೂ.ಗಳ ದೇಣಿಗೆಯನ್ನು ಬಹಿರಂಗಪಡಿಸಿದೆ, ಇದರಲ್ಲಿ 10 ಕೋಟಿ ರೂ.ಗಳ 10 ಬಾಂಡ್‌ಗಳು ಅನಾಮಧೇಯವಾಗಿ "ಅಂಚೆ ಮೂಲಕ" ಸ್ವೀಕರಿಸಿವೆ.
  7. ಡಿಎಂಕೆ ದಾನಿಗಳ ಗುರುತನ್ನು ಬಹಿರಂಗಪಡಿಸಿದ್ದರೂ, ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿಯಂತಹ ಪ್ರಮುಖ ಪಕ್ಷಗಳು ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ.
  8. ತೆಲುಗು ದೇಶಂ ಪಕ್ಷ (ಟಿಡಿಪಿ) 181.35 ಕೋಟಿ ರೂ., ಶಿವಸೇನೆ 130.38 ಕೋಟಿ ರೂ., ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 56 ಕೋಟಿ ರೂ., ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) 50.51 ಕೋಟಿ ರೂ., ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 15.5 ಕೋಟಿ ರೂ., ಸಮಾಜವಾದಿ ಪಕ್ಷ (ಎಸ್ಪಿ) 14.05 ಕೋಟಿ ರೂ. ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 50 ಲಕ್ಷ ರೂ.
  9. ಎಎಪಿಯು ಈ ಅಂಕಿಅಂಶವನ್ನು ಒದಗಿಸಿಲ್ಲ. ಆದರೆ ಎಸ್‌ಬಿಐನ ದಾಖಲೆಗಳು ಪ್ರಕಾರ, 65.45 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಂತರ ಇನ್ನೂ 3.55 ಕೋಟಿ ರೂ.ಗಳನ್ನು ಲೆಕ್ಕ ಹಾಕಿದ ನಂತರ, ಎಎಪಿ ಸ್ವೀಕರಿಸಿದ ಒಟ್ಟು ಮೊತ್ತ 69 ಕೋಟಿ ರೂಪಾಯಿ.
  10. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶವು ರಾಜಕೀಯ ಪಕ್ಷಗಳು ಮಾಡಿದ ಬಹಿರಂಗಪಡಿಸುವಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಒಳಗೊಂಡಿದೆ, ಇದು ನೂರಾರು ಪುಟಗಳನ್ನು ವ್ಯಾಪಿಸಿದೆ.

IPL_Entry_Point