ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sonia Gandhi: ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ

Sonia Gandhi: ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತೋರಿಸಿದ್ದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ ಎಂದು ಕಾಂಗ್ರೆಸ್ ತುಂಬಾ ಭರವಸೆ ಹೊಂದಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. (PTI)

ದೆಹಲಿ: 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು (Lok Sabha Election Result 2024) ಸಮೀಕ್ಷೆಗಳು ಊಹಿಸಿದ್ದಕ್ಕಿಂತ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ ಎಂದು ಕಾಂಗ್ರೆಸ್ (Congress) ತುಂಬಾ ಭರವಸೆ ಹೊಂದಿದೆ ಎಂದು ಸೋನಿಯಾ ಗಾಂಧಿ (Sonia Gandhi) ಸೋಮವಾರ ಚುನಾವಣೋತ್ತರ ಸಮೀಕ್ಷೆಗಳ (Exit Poll 2024) ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದ್ದಾರೆ. ಜೂನ್ 4 ರ ಮಂಗಳವಾರ ಪ್ರಕಟವಾಗಲಿರುವ ಚುನಾವಣಾ ಫಲಿತಾಂಶಗಳಿಂದ ನಿಮ್ಮ ನಿರೀಕ್ಷೆಗಳೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕಾಂಗ್ರೆಸ್ ಅಧಿನಾಯಕಿ, "ನಾವು ಕಾಯಬೇಕು, ಕಾದು ನೋಡಬೇಕು" ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂದು (ಜೂನ್ 3, ಸೋಮವಾರ) ಸುದ್ದಿ ಸಂಸ್ಥೆ ಪಿಟಿಐನೊಂದಿಗೆ ಮಾತನಾಡಿ, “ನಮ್ಮ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳು ತೋರಿಸುತ್ತಿರುವುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ನಾವು ತುಂಬಾ ಭರವಸೆ ಹೊಂದಿದ್ದೇವೆ” ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾಡಿದ್ದ ಎಐಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆ ಬಗ್ಗೆ ಸಮೀಕ್ಷೆಗಳು ನುಡಿದಿರುವ ಭವಿಷ್ಯವನ್ನು ಎಕ್ಸಿಟ್ ಪೋಲ್ ಎಂದು ಕರೆಯಲಾಗುವುದಿಲ್ಲ, ಆದರೆ ಅದರ ಹೆಸರು "ಮೋದಿ ಮೀಡಿಯಾ ಪೋಲ್" ಎಂದಿದ್ದಾರೆ. "ಇದು ಮೋದಿ ಜಿ ಅವರ ಸಮೀಕ್ಷೆ, ಇದು ಅವರ ಫ್ಯಾಂಟಸಿ ಪೋಲ್" ಎಂದು ಭಾನುವಾರ (ಜೂನ್ 2) ವ್ಯಂಗ್ಯವಾಡಿದ್ದಾರೆ.

ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಪ್ರಸಿದ್ಧ ಹಾಡನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 295 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರುಣಾನಿಧಿ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಸೋನಿಯಾ ಗಾಂಧಿ, "ಡಾ. ಎಂ ಕರುಣಾನಿಧಿ ಅವರ 100ನೇ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ ಡಿಎಂಕೆಯ ನನ್ನ ಸಹೋದ್ಯೋಗಿಗಳೊಂದಿಗೆ ಇಲ್ಲಿರಲು ನನಗೆ ಸಂತೋಷವಾಗಿದೆ" ಎಂದಿದ್ದಾರೆ.

“ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ, ಅವರು ಹೇಳುವುದನ್ನು ಕೇಳುವ ಮತ್ತು ಅವರ ಬುದ್ಧಿವಂತಿಕೆ ಮತ್ತು ಸಲಹೆಯ ಮಾತುಗಳಿಂದ ಪ್ರಯೋಜನ ಪಡೆಯುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅವರನ್ನು ಭೇಟಿಯಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದೊಡ್ಡ ಬಹುಮತವನ್ನು ಗೆಲ್ಲುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಕೆಲವು ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿದ್ದರೂ, ಹೆಚ್ಚಿನವು 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ, ಇದು ಸರ್ಕಾರ ರಚಿಸಲು ಅಗತ್ಯವಿರುವ 272 ಸ್ಥಾನಗಳ ಬಹುಮತಕ್ಕಿಂತ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಇತರ ಬಿಜೆಪಿ ಬಣದ ಪಕ್ಷಗಳು ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ್ದು, ಈ ಸಮೀಕ್ಷೆಗಳು "ಕಾಲ್ಪನಿಕ" ಕೆಲಸ ಎಂದು ಹೇಳಿಕೊಂಡಿವೆ. ಪ್ರತಿಪಕ್ಷಗಳ ಮೈತ್ರಿಕೂಟವು ಮುಂದಿನ ಸರ್ಕಾರವನ್ನು ರಚಿಸುತ್ತದೆ ಎಂದು ಪ್ರತಿಪಾದಿಸಿವೆ. ಅಂತಿಮವಾಗಿ ನಾಳೆ (ಜೂನ್ 4, ಮಂಗಳವಾರ) ಪ್ರಕಟವಾಗಲಿರುವ ಫಲಿತಾಂಶದಲ್ಲಿ ಯಾವ ಮೈತ್ರಿ ಕೂಟಕ್ಕೆ ಬಹುಮತ ಸಿಗಲಿದೆ ಅನ್ನೋದು ಸ್ಪಷ್ಟವಾಗಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024