Andhra Pradesh Election Result: ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಿಂದ ಯಾವ ಪಕ್ಷಕ್ಕೆ ಗೆಲುವು; ಇಲ್ಲಿದೆ ವಿವರ
ಆಂಧ್ರಪ್ರದೇಶ ಲೋಕಸಭಾ ಚುನಾವಣೆ ಫಲಿತಾಂಶ 2024: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು, ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಲಭ್ಯವಾಗಿದೆ. ಯಾರು ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಯಾವ ಪಕ್ಷಕ್ಕೆ ಬಹುಮತ ಎಂಬಿತ್ಯಾದಿ ವಿವರ ಇಲ್ಲಿದೆ.
Andhra Pradesh Lok Sabha election winners list:: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು ಟಿಡಿಪಿ ಮೈತ್ರಿ ಪಕ್ಷಗಳಿಗೆ ಬಹುಮತ ನಿಚ್ಚಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಪಕ್ಷ ವೈಎಸ್‌ಆರ್ ಕಾಂಗ್ರೆಸ್ ಹಿನ್ನಡೆ ಕಂಡಿದೆ. ಒಟ್ಟು 25 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳು 21 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದಾರೆ. ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಹೊಂದಿರುವ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿ ಹಾಗೂ ಟಿಡಿಪಿ ಪಕ್ಷದ ಎನ್ ಚಂದ್ರಬಾಬು ನಾಯ್ಡು ಅವರ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಟಿಪಿಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪವನ್ ಕಲ್ಯಾಣ ನೇತೃತ್ವದ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಕೂಟವು ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.
ಕಿಂಜರಾಪು ರಾಮ್ ಮೋಹನ್ ನಾಯ್ಡು (ಟಿಡಿಪಿ), ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ (ಟಿಡಿಪಿ), ವಿ ವಿಜಯಸಾಯಿ ರೆಡ್ಡಿ (ವೈಎಸ್‌ಆರ್‌ಸಿಪಿ), ಬೊಚ್ಚ ಝಾನ್ಸಿ ಲಕ್ಷ್ಮಿ (ವೈಎಸ್‌ಆರ್‌ಸಿಪಿ), ದಗ್ಗುಬಾಟಿ ಪುರಂದೇಶ್ವರಿ (ಬಿಜೆಪಿ) ಮತ್ತು ವೈಎಸ್ ಶರ್ಮಿಳಾ (ಕಾಂಗ್ರೆಸ್) ರಾಜ್ಯದ ಪ್ರಮುಖ ಅಭ್ಯರ್ಥಿಗಳು. ಆಂಧ್ರಪ್ರದೇಶ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಮತದಾನ ನಡೆದಿತ್ತು.
ಜಗನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ನೇತೃತ್ವದ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿವೆ.
2019ರ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಆಂಧ್ರಪ್ರದೇಶದಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಟಿಡಿಪಿಗೆ ಕೇವಲ 3 ಸ್ಥಾನಗಳು ಮಾತ್ರ ಉಳಿದಿವೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಕ್ರಮ ಸಂಖ್ಯೆ | ಕ್ಷೇತ್ರ | ಮುನ್ನಡೆ ಸಾಧಿಸಿದವರ ವಿವರ |
1 | ಅರಕು | |
2 | ಶ್ರೀಕಾಕುಳಂ | TDP |
3 | ವಿಜಯನಗರಂ | TDP |
4 | ವಿಶಾಖಪಟ್ಟಣಂ | TDP |
5 | ಅನಕಪಲ್ಲಿ | |
6 | ಕಾಕಿನಾಡ | |
7 | ಅಮಲಾಪುರಂ | TDP |
8 | ರಾಜಮಂಡ್ರಿ | BJP |
9 | ನರಸಪುರಂ | |
10 | ಏಲೂರು | |
11 | ಮಚಲಿಪಟ್ಟಣಂ | |
12 | ವಿಜಯವಾಡ | |
13 | ಗುಂಟೂರು | |
14 | ನರಸರಾವ್‌ಪೇಟೆ | |
15 | ಬಾಪಟ್ಲಾ | TDP |
16 | ಒಂಗೋಲ್ | |
17 | ನಂದ್ಯಾಲ್ | TDP |
18 | ಕರ್ನೂಲ್ | |
19 | ಅನಂತಪುರ | TDP |
20 | ಹಿಂದೂಪುರ | TDP |
21 | ಕಡಪ | YSRCP |
22 | ನೆಲ್ಲೂರು | TDP |
23 | ತಿರುಪತಿ | BJP |
24 | ರಾಜಂಪೇಟ್ | |
25 | ಚಿತ್ತೂರ್ |
Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.