ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Election Result: ಒಡಿಶಾದಲ್ಲಿ ಬಿಜೆಪಿಗೆ ಬಹುಮತ ನಿಚ್ಚಳ, ಬಿಜೆಡಿಗೆ ಸೋಲು ಖಚಿತ; 17 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ

Odisha Election Result: ಒಡಿಶಾದಲ್ಲಿ ಬಿಜೆಪಿಗೆ ಬಹುಮತ ನಿಚ್ಚಳ, ಬಿಜೆಡಿಗೆ ಸೋಲು ಖಚಿತ; 17 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ

ಒಡಿಶಾ ಲೋಕಸಭಾ ಚುನಾವಣೆ ಫಲಿತಾಂಶ: ಒಡಿಶಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುತೇಕ ಗೆಲುವು ಖಚಿತವಾಗಿದೆ. 21 ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಪಾಳೆಯವು 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಒಡಿಶಾದಲ್ಲಿ ಪಟ್ನಾಯಕ್‌ ನೇತೃತ್ವದ ಬಿಜೆಡಿಗೆ ಸೋಲು ಖಚಿತವಾಗಿದೆ.

ಒಡಿಶಾದಲ್ಲಿ ಬಿಜೆಪಿಗೆ ಗೆಲುವು ನಿಚ್ಚಳ, ಬಿಜೆಡಿಗೆ ಸೋಲು ಖಚಿತ; 17 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ
ಒಡಿಶಾದಲ್ಲಿ ಬಿಜೆಪಿಗೆ ಗೆಲುವು ನಿಚ್ಚಳ, ಬಿಜೆಡಿಗೆ ಸೋಲು ಖಚಿತ; 17 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ

ಒಡಿಶಾ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮ ಘಟ್ಟ ತಲುಪಿದ್ದು ಬಹುತೇಕ ರಾಜ್ಯಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಇದೀಗ ಒಡಿಶಾ ರಾಜ್ಯದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪ್ರಾಬಲ್ಯ ಪ್ರಾದೇಶಿಕ ಪಕ್ಷವಾದ ಬಿಜೆಡಿಯನ್ನು ಹಿಂದಿಕ್ಕಿ ಬಿಜೆಪಿ ಗೆಲುವಿನ ನಾಗಾಲೋಟದತ್ತ ಸಾಗುತ್ತಿದೆ. 21 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ಸದ್ಯ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಡಿಯು 4 ಸ್ಥಾನಗಳಲ್ಲಿ ಬಹುಮತ ಗಳಿಸಿದೆ.  21 ಲೋಕಸಭಾ ಕ್ಷೇತ್ರಗಳಿರುವ ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಹಾಗೂ ಬಿಜೆಪಿ ಪ್ರತಿಸ್ಪರ್ಧಿಗಳಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

 ನವೀನ್‌ ಪಟ್ನಾಯಕ್‌ ಸಾರಥ್ಯದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಒಡಿಶಾದ ಪ್ರಮುಖ ಪ್ರಾದೇಶಿಕ ಪಕ್ಷವಾಗಿದೆ. ಈ ಪಕ್ಷಗಳ ಜೊತೆಗೆ ಈ ಬಾರಿ ಲೋಕಸಭೆಗೆ ಕಾಂಗ್ರೆಸ್‌ ಹಾಗೂ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳು ಸ್ಪರ್ಧಿಸುತ್ತಿವೆ. ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ, ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್‌ಸಿಸ್ಟ್‌) ಪಕ್ಷಗಳು ಲೋಕಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಬಿಜೆಪಿ ಹಾಗೂ ಬಿಜೆಡಿ 21 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೆ, ಕಾಂಗ್ರೆಸ್‌ 20, ಜೆಎಂಎಂ ಹಾಗೂ ಇತರ ಪಕ್ಷಗಳು ತಲಾ ಒಬ್ಬರನ್ನು ನಿಲ್ಲಿಸಿವೆ.

2024ರಲ್ಲಿ ಮೇ 13 ರಿಂದ ಜೂನ್‌ 1ರವರೆಗೆ 4 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಒಡಿಶಾ ಲೋಕಸಭೆಯಲ್ಲಿ ವಿಕೆ ಪಾಂಡಿಯನ್‌ (ಬಿಜೆಡಿ), ಧರ್ಮೇಂದ್ರ ಪ್ರಧಾನ್‌ (ಬಿಜೆಪಿ) ಹಾಗೂ ಸಪ್ತಗಿರಿ ಶಂಕರ ಉಲಕ (ಕಾಂಗ್ರೆಸ್‌) ಪ್ರಮುಖ ನಾಯಕರಾಗಿದ್ದಾರೆ.

ಕಳೆದ 2 ದಶಕಗಳಿಂದ ಒಡಿಶಾದಲ್ಲಿ ಬಿಜೆಡಿ ಅಧಿಕಾರ ನಡೆಸುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷವು 12 ಸ್ಥಾನಗಳನ್ನು ಗಳಿಸುವ ಮೂಲಕ ಮೇಲುಗೈ ಸಾಧಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್‌ ಕೇವಲ 1 ಸ್ಥಾನ ಗಳಿಸಿತ್ತು. 2014ರ ಚುನಾವಾಣೆಯಲ್ಲೂ ಬಿಜೆಡಿ ಬಹುಮತ ಸಾಧಿಸಿತ್ತು.

ಪಟ್ನಾಯಕ್‌ ಸೋಲಿಗೆ ಕಾರಣಗಳು

ಒಡಿಶಾದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ನವೀನ್‌ ಪಟ್ನಾಯಕ್‌ಗೆ ಸೋಲಾಗಿರುವುದಕ್ಕೆ ಕಾರಣಗಳು ಹಲವು. ರಾಜ್ಯದಲ್ಲಿ ಪಟ್ನಾಯಕ್‌ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು ಯುವಜನರು ಪಟ್ನಾಯಕ್‌ ಮೇಲೆ ಬೇಸರಗೊಂಡಿದ್ದಾರೆ, ಅಲ್ಲದೇ ಬಿಜೆಪಿ ಸರ್ಕಾರ ನಡೆ ಹಾಗೂ ಕಾರ್ಯ ಯೋಜನೆಗಳು ಒಡಿಶಾ ಯುವಕರನ್ನು ಆರ್ಕಷಿಸಿವೆ ಎನ್ನಲಾಗುತ್ತಿದೆ. ಪ್ರತಿ ಬಾರಿ ಮಹಿಳಾ ಮತದಾರರು ಪಟ್ನಾಯಕ್‌ ಪರ ನಿಲ್ಲುವ ಕಾರಣ ಅವರಿಗೆ ಮಹಿಳಾ ಮತಬ್ಯಾಂಕ್‌ ಗಟ್ಟಿಯಾಗಿತ್ತು. ಆದರೆ ಈ ಬಾರಿ ಪಟ್ನಾಯಕ್‌ ಅವರಿಗೆ ಮಹಿಳೆ ಮತದಾರರು ಒಲವು ತೋರಿದಂತಿಲ್ಲ. ಇದರೊಂದಿಗೆ ನವೀನ್‌ ಪಟ್ನಾಯಕ್‌ ತಮ್ಮ ಉತ್ತರಾಧಿಕಾರಿಯಾಗಿ ತಮಿಳು ಮೂಲದ ವಿಕೆ ಪಾಂಡಿಯನ್‌ ಅವರಿಗೆ ಅಧಿಕಾರ ವಹಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದು, ಇದನ್ನು ವಿರೋಧ ಪಕ್ಷವಾದ ಬಿಜೆಪಿ ಪ್ರಯೋಜನ ಪಡೆದುಕೊಂಡಿದೆ.

ಟಿ20 ವರ್ಲ್ಡ್‌ಕಪ್ 2024