Odisha Election Result: ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವರು, ಕ್ಷೇತ್ರವಾರು ಪಟ್ಟಿ
ಒಡಿಶಾ ಲೋಕಸಭಾ ಚುನಾವಣೆ ಫಲಿತಾಂಶ 2024: ಒಡಿಶಾ ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು, 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 1 ಸ್ಥಾನ ಗಳಿಸಿದೆ. ಇಲ್ಲಿದೆ ಗೆಲುವು ಸಾಧಿಸಿದವರ ಕ್ಷೇತ್ರವಾರು ವಿವರ.
Odisha Lok Sabha election winners list: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು ಒಡಿಶಾದಲ್ಲಿ ಬಿಜೆಪಿ ಬಹುಮತ ಗಳಿಸುವುದು ಪಕ್ಕಾ ಆಗಿದೆ. ಇಲ್ಲಿ ಪ್ರಾಬಲ್ಯ ಹೊಂದಿದ್ದ ಹಾಗೂ ಎರಡು ದಶಕಗಳಿಂದ ಆಡಳಿತದಲ್ಲಿದ್ದ ಪ್ರಾದೇಶಿಕ ಪಕ್ಷ ಬಿಜೆಡಿ ಸೋಲುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಕೂಡ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಒಡಿಶಾದ ಒಟ್ಟು 21 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೊದಲಿನಿಂದಲೂ ಬಿಜೆಪಿ ಪಕ್ಷದಿಂದ ಬೇರೆಯಾಗಿ ತಮ್ಮದೇ ಬಿಜೆಡಿ ಪಕ್ಷ ಸ್ಥಾಪಿಸಿದ್ದ ಬಿಜು ಪಟ್ನಾಯಕ್ ಈ ರಾಜ್ಯದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಜೆಡಿ ಮೈತ್ರಿಯಾಗುವ ಸುದ್ದಿಯೂ ಕೇಳಿ ಬಂದಿತ್ತು. ಆದರೆ ಇದು ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಡಿ ತವರು ರಾಜ್ಯದಲ್ಲೇ ಹೀನಾಯ ಸೋಲು ಕಂಡಿದೆ.
ನವೀನ್ ಪಟ್ನಾಯಕ್ ಸಾರಥ್ಯದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಒಡಿಶಾದ ಪ್ರಮುಖ ಪ್ರಾದೇಶಿಕ ಪಕ್ಷವಾಗಿದೆ. ಈ ಪಕ್ಷಗಳ ಜೊತೆಗೆ ಈ ಬಾರಿ ಲೋಕಸಭೆಗೆ ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳು ಸ್ಪರ್ಧಿಸುತ್ತಿವೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್‌ಸಿಸ್ಟ್) ಪಕ್ಷಗಳು ಲೋಕಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಬಿಜೆಪಿ ಹಾಗೂ ಬಿಜೆಡಿ 21 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೆ, ಕಾಂಗ್ರೆಸ್ 20, ಜೆಎಂಎಂ ಹಾಗೂ ಇತರ ಪಕ್ಷಗಳು ತಲಾ ಒಬ್ಬರನ್ನು ನಿಲ್ಲಿಸಿವೆ.
2024ರಲ್ಲಿ ಮೇ 13 ರಿಂದ ಜೂನ್ 1ರವರೆಗೆ 4 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಒಡಿಶಾ ಲೋಕಸಭೆಯಲ್ಲಿ ವಿಕೆ ಪಾಂಡಿಯನ್ (ಬಿಜೆಡಿ), ಧರ್ಮೇಂದ್ರ ಪ್ರಧಾನ್ (ಬಿಜೆಪಿ) ಹಾಗೂ ಸಪ್ತಗಿರಿ ಶಂಕರ ಉಲಕ (ಕಾಂಗ್ರೆಸ್) ಪ್ರಮುಖ ನಾಯಕರಾಗಿದ್ದಾರೆ.
ಕ್ರಮ ಸಂಖ್ಯೆ | ಕ್ಷೇತ್ರ | ಮುನ್ನಡೆ |
1. | ಅಸ್ಕಾ | ಬಿಜೆಪಿ |
2 | ಬಾಲಸೋರ್ | ಬಿಜೆಪಿ |
3 | ಬರ್ಗರ್ | ಬಿಜೆಪಿ |
4 | ಬರ್ಹಾಂಪೋರ್ | ಬಿಜೆಪಿ |
5 | ಭದ್ರಕ್ | ಬಿಜೆಪಿ |
6 | ಭುವನೇಶ್ವರ್ | ಬಿಜೆಪಿ |
7 | ಬೋಲಂಗಿರ್ | ಬಿಜೆಪಿ |
8 | ಕಟಕ್ | ಬಿಜೆಪಿ |
9 | ಧೆಂಕನಲ್ | ಬಿಜೆಪಿ |
10 | ಜಗತ್ಸಿಂಗ್ಪುರ | ಬಿಜೆಪಿ |
11 | ಜಾಜ್ಪುರ್ | ಬಿಜೆಪಿ |
12 | ಕಲಹಂಡಿ | ಬಿಜೆಪಿ |
13 | ಕಂಧಮಾಲ್ | ಬಿಜೆಪಿ |
14 | ಕೇಂದ್ರಪಾರ | ಬಿಜೆಪಿ |
15 | ಕಿಯೋಂಜರ್ | ಬಿಜೆಪಿ |
16 | ಕೊರಾಪುಟ್ | ಬಿಜೆಪಿ |
17 | ಮಯೂರ್ಭಂಜ್ | ಬಿಜೆಪಿ |
18 | ನಬರಂಗಪುರ | ಕಾಂಗ್ರೆಸ್ |
19 | ಪುರಿ | ಬಿಜೆಪಿ |
20 | ಸಂಬಲ್ಪುರ | ಬಿಜೆಪಿ |
21 | ಸುಂದರಗಢ | ಬಿಜೆಪಿ |
Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.